fbpx
ಸಮಾಚಾರ

RCB ಗತ್ತು ಜಗತ್ತಿಗೆ ಗೊತ್ತು: ಸೋಷಿಯಲ್ ಮೀಡಿಯಾದಲ್ಲಿ ಇಡೀ ಪ್ರಪಂಚಕ್ಕೆ ಆರ್ಸಿಬಿಯೇ ನಂ.1

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇರುವಷ್ಟು ಅಭಿಮಾನಿ ಬಳಗ ಬಹುಶಃ ಬೇರೆ ಯಾವುದೇ ತಂಡಕ್ಕೂ ಇಲ್ಲ. ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲಿಯೂ ಸಹ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷ ಮೈಲಿಗಲ್ಲು ಸ್ಥಾಪಿಸಿದೆ.

 

 

ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ನಂ.1!
ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಇತರ ತಂಡಗಳನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಪೋಸ್ಟ್‌ಗಳಿಗೆ 150.40 ಮಿಲಿಯನ್ ಎಂಗೇಜ್ಮೆಂಟ್‌ ಸಿಕ್ಕಿದೆ. ಜೊತೆಗೆ 149.94 ಮಿಲಿಯನ್ ಲೈಕ್ಸ್, 452.2 ಸಾವಿರ ಕಾಮೆಂಟ್ಸ್‌ ಬಂದಿವೆ. ಆರ್ಸಿಬಿ ನಂತರದ ಸ್ಥಾನದಲ್ಲಿರುವ ಚೆನ್ನೈ ಒಟ್ಟಾರೆ 126.09 ಮಿಲಿಯನ್ ಎಂಗೇಜ್ಮೆಂಟ್ಸ್‌ ಇವೆ.

 

 

ವಿಶ್ವದಲ್ಲಿ ಆರ್ಸಿಬಿ ನಂಬರ್ 1
ಐಪಿಎಲ್ ನಡೆಯುವ ಸಮಯದಲ್ಲಿ ಪ್ರಪಂಚದ ಬೇರೆ ಬೇರೆ ಪ್ರಸಿದ್ಧ ಕ್ರೀಡಾ ತಂಡಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿರುವ ಅಂಕಿ-ಅಂಶಗಳಲ್ಲಿಯೂ ಕೂಡ ಆರ್ಸಿಬಿ ನಂ.1 ಸ್ಥಾನ ಪಡೆದುಕೊಂಡಿದೆ. ಈ ಬಾರಿಯ ಐಪಿಎಲ್‌ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ವಿಶ್ವದ ಕ್ರೀಡಾ ತಂಡಗಳ ಪಟ್ಟಿಯನ್ನು ಗಮನಿಸಿದರೆ ಅದರಲ್ಲಿ ಆರ್ಸಿಬಿ ಮೊದಲ ಸ್ಥಾನದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿ, ಬಾರ್ಸಿಲೋನಾ ಎಫ್‌ಸಿ ಮೂರನೇ ಸ್ಥಾನದಲ್ಲಿ ಮತ್ತು ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿದೆ.

ಅಂದಹಾಗೆ 13 ಐಪಿಎಲ್ ಆವೃತ್ತಿಗಳು ಮುಗಿದು 14ನೇ ಐಪಿಎಲ್ ಆವೃತ್ತಿ ಆರಂಭವಾಗಿ ಅರ್ಧಕ್ಕೆ ನಿಂತುಹೋಗಿದೆ. ಆದ್ರೆ ಇದುವರೆಗೂ ಸಹ ಆರ್‌ಸಿಬಿ ಒಂದೇ ಒಂದು ಐಪಿಎಲ್ ಟ್ರೋಫಿಯನ್ನೂ ಗೆದ್ದಿಲ್ಲ. ಆದರೂ ಸಹ ಅಭಿಮಾನಿಗಳ ಸಂಖ್ಯೆ ಕಿಂಚಿತ್ತೂ ಕಡಿಮೆಯಾಗಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top