fbpx
ಸಮಾಚಾರ

ಕೇವಲ 150 ರೂಪಾಯಿಯಲ್ಲಿ ಮುಗಿಯಿತು ಸ್ಟಾರ್ ನಟನ ಮದುವೆ

ಈಗ ಎಲ್ಲೆಲ್ಲೂ ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿದೆ. ಜನರು ಗುಂಪು ಸೇರದಂತೆ ಸರ್ಕಾರಗಳು ಹಲವು ನಿಯಮಗಳನ್ನು ಜಾರಿ ಮಾಡಿವೆ. ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನರು ಸೇರುವಂತಿಲ್ಲ. ಹಾಗಾಗಿ ಅನೇಕ ಸೆಲೆಬ್ರಿಟಿಗಳ ಮದುವೆಗಳು ಮುಂದೂಡಲ್ಪಡುತ್ತಿವೆ. ಈ ನಡುವೆ ಇಲ್ಲೊಂದು ಜೋಡಿ ಕೇವಲ 150 ರೂಪಾಯಿ ಖರ್ಚಿನಲ್ಲಿ ಮದುವೆ ಆಗಿ ಎಲ್ಲರ ಅಚ್ಚರಿಗೆ ಕಾರಣ ಆಗಿದೆ.

 

 

ಹೀಗೆ ಸಿಂಪಲ್ ಆಗಿ ಬಾಳ ಬಂಧನಕ್ಕೆ ಒಳಗಾಗಿರುವುದು ಕಿರುತರೆ ಖ್ಯಾತಿಯ ನಟ ವಿರಾಫ್ ಪಟೇಲ್ ಮತ್ತು ನಟಿ ಸಲೋನಿ ಖನ್ನಾ. ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿರುವ ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಪರಸ್ಪರ ಪ್ರೀತಿಸುತ್ತಿದ್ದರು. ಫೆಬ್ರವರಿಯಲ್ಲಿ ಈ ಜೋಡಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಕ್ಕಿಂತಲೂ ಅದ್ದೂರಿಯಾಗಿ ಮದುವೆ ಆಗಬೇಕು ಎಂಬುದು ವಿರಾಫ್ ಪಟೇಲ್ ಮತ್ತು ಸಲೋನಿ ಖನ್ನಾ ಅವರ ಆಸೆ ಆಗಿತ್ತು. ಆದರೆ ಅದಕ್ಕೆ ಕೊರೊನಾ ಅವಕಾಶ ನೀಡಿಲ್ಲ. ಅದರ ಬದಲು ಸದ್ಯದ ಪರಿಸ್ಥಿತಿಗೆ ತಕ್ಕಂತೆ ಸಿಂಪಲ್ ಮದುವೆಯನ್ನೇ ಈ ಸೆಲೆಬ್ರಿಟಿಗಳು ಆಯ್ಕೆ ಮಾಡಿಕೊಂಡಿದ್ದಾರೆ.

ವಿಶೇಷ ಅಂದರೆ ಕೇವಲ 150 ರೂಪಾಯಿಯಲ್ಲಿ ಅವರ ಮದುವೆಯೇ ಮುಗಿದುಹೋಗಿದೆ. ಹೌದು, ಮದುವೆ ನೋಂದಣಿ ಮಾಡಲು 100 ರೂಪಾಯಿ, ವಧು ವರರ ಫೋಟೋಗಳಿಗೆ 50 ರೂಪಾಯಿ ಅಷ್ಟೇ ಖರ್ಚು ಮಾಡಿದ್ದಾರೆ. `ಅದ್ದೂರಿ ಮದುವೆ ಮಾಡಿಕೊಳ್ಳಲು ನನಗೂ ಹಾಗೂ ಸಲೋನಿಗೂ ಸಹ ಇಷ್ಟವಿರಲಿಲ್ಲ. ಹೀಗಾಗಿಯೇ ತುಂಬ ಸರಳವಾಗಿ ಮದುವೆಯಾದೆವು. ಈಗ ಮದುವೆಗಾಗಿ ಖರ್ಚು ಮಾಡಬೇಕೆಂದಿದ್ದ ಹಣವನ್ನೇ ಕೊರೊನಾ ವಿರುದ್ಧದ ಹೋರಾಟಕ್ಕೆ ಸದುಪಯೋಗ ಪಡಿಸಿಬೇಕು ಅಂತ ಅಂದುಕೊಂಡಿದ್ದೇವೆ. ಇದರಿಂದ ನಮ್ಮ ಮದುವೆಗೂ ಒಂದು ಅರ್ಥ ಸಿಕ್ಕಂತಾಗುತ್ತದೆ’ ಎಂದು ಖುದ್ದು ಹೇಳಿಕೊಂಡಿದ್ದಾರೆ ನಟ ವಿರಫ್ ಪಟೇಲ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top