fbpx
ಸಮಾಚಾರ

“ತೇಜಸ್ವಿ ಕೋಮುದ್ವೇಷ ಹೊಂದಿರುವ ವ್ಯಕ್ತಿಯಲ್ಲ, ಅವ್ರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ” ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿಯ ‘ಬೆಡ್ ಬ್ಲಾಕಿಂಗ್’ ಹಗರಣ ಬಯಲಿಗೆಳೆಯುವ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ 206 ಸಿಬ್ಬಂದಿಗಳ ಪೈಕಿ ಕೇವಲ 17 ಮಂದಿ ಮುಸ್ಲಿಮರ ಹೆಸರುಗಳನ್ನಷ್ಟೆ ಹೇಳಿ ‘ಮದರಸಾ ನಡೆಸುತ್ತಿದ್ದೀರಾ?’ ಎಂದು ಪ್ರಶ್ನೆ ಮಾಡಿದ್ದರು. ಭ್ರಷ್ಟಾಚಾರಕ್ಕೆ ಧರ್ಮದ ಬಣ್ಣ ಬಳಿದುದ್ದಕ್ಕೆ ತೇಜಸ್ವಿ ಸೂರ್ಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.

ಈ ಬಗ್ಗೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಪ್ರತಿಕ್ರಿಯೆ ನೀಡಿದ್ದು ತೇಜಸ್ವಿಯನ್ನು ಸಮರ್ಥಿಸಿಕೊಂಡಿದ್ದಾರೆ. ತೇಜಸ್ವಿ ಸೂರ್ಯ ಯಾವ ಹಿನ್ನೆಲೆಯಲ್ಲಿ ಒಂದು ಕೋಮಿನ ಸದಸ್ಯರ ಹೆಸರು ಹೇಳಿದರೋ ನನಗೆ‌ ಗೊತ್ತಿಲ್ಲ. ನಮ್ಮ‌‌ ಸಂಸದರು ಕರೆದಿದ್ದಕ್ಕೆ ನಾನು ಜೊತೆಲಿ ಹೋಗಿದ್ದೆ. ಚಿಕ್ಕ ವಯಸ್ಸಿನಿಂದ ನಾನು ತೇಜಸ್ವಿಯನ್ನು ನೋಡಿದ್ದೇನೆ. ಸಂಸದರಿಗೆ ತಪ್ಪು ಮಾಹಿತಿ ಬಂದಿರಬಹುದು. ಒಂದು ಸಮುದಾಯವನ್ನು ಪರಿಗಣಿಸಿ ಅವರು ಮಾತನಾಡಿಲ್ಲ. ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳುವ ಮೂಲಕ ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದಲ್ಲಿ 60 ಸಾವಿರ ಮುಸ್ಲಿಂಮರು ಇದ್ದಾರೆ , 32 ಮಸೀದಿ ಇದೆ. ನಮ್ಮ ಕ್ಷೇತ್ರದಲ್ಲಿ ಹಿಂದು ಮುಸ್ಲಿಂ ಭೇದ ಭಾವ ಇಲ್ಲ. ಚಿಕ್ಕ ವಯಸ್ಸಿನಿಂದ ನಾನು ತೇಜಸ್ವಿಯನ್ನ ನೋಡಿದ್ದೇನೆ. ಅವರಲ್ಲಿ ಕೋಮು ಬೇಧ ಇಲ್ಲ. ತೇಜಸ್ವಿ ಸೂರ್ಯ ಅವರ ಬಗ್ಗೆ ವರದಿಯಾಗಿರುವಂತೆ ಅವರು ಸಹ ವರ್ತನೆ ಮಾಡಿಲ್ಲ. ಅವರಿಗೂ ಈ ರೀತಿಯ ಭಾವನೆ ಇಲ್ಲ.” ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದರು.

ಯಾವುದೇ ಕೋಮಿನವರು ಮತ್ತೊಂದು ಕೋಮಿನ ಮೇಲೆ ಮಾತನಾಡಬಾರದು. ಭಾರತ ಜಾತ್ಯತೀತ ರಾಷ್ಟ್ರ. ನಮ್ಮ ಧರ್ಮ, ಸಂಪ್ರದಾಯವನ್ನು ಮನೆಯ ಹೊಸಲಿನ ಒಳಗಡೆ ಇಟ್ಟುಕೊಳ್ಳಬೇಕು. ಹೊಸಲು ದಾಟಿದ ನಂತರ ನಾವು ವಿಶ್ವ ಮಾನವರು. ಇಲ್ಲಿರುವ ಎಲ್ಲರಿಗೂ ಈ ದೇಶದಲ್ಲಿ ಸಮಾನ ಹಕ್ಕಿದೆ. ರಂಜಾನ್ ಸಮಯದಲ್ಲಿ ಮುಸ್ಲೀಂ ಸಮುದಾಯ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತದೆ. ಇವರಲ್ಲಿಯೂ ಸಾಕಷ್ಟು ಕೌಶಲ್ಯವಿದೆ. ಪ್ರತಿಯೊಂದು ಸಮುದಾಯವೂ ಸಹ ವಿಶೇಷವಾಗಿದೆ. ಅದೇ ರೀತಿಯಲ್ಲಿ ಹಿಂದುಗಳಲ್ಲಿ ಸಹ ಸಾಕಷ್ಟು ಕೌಶಲ್ಯವಿದೆ ಎಂದು ಶಾಸಕ ಉದಯ್ ಗರುಡಾಚಾರ್ ಸಮರ್ಥಿಸಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top