fbpx
ಸಮಾಚಾರ

“ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಕುಡಿದರೆ ಕೋವಿಡ್ ತಡೆಯಬಹುದು” ಸಲಹೆ ಕೊಟ್ಟು ಬಹಿರಂಗವಹಿ ಗೋಮೂತ್ರ ಸೇವಿಸಿದ ಶಾಸಕ

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ಲಸಿಕೆ ನೀಡುವ ಕಾರ್ಯವೂ ಜಾರಿಯಲ್ಲಿದೆ. ಈ ನಡುವೆ ಉತ್ತರ ಪ್ರದೇಶದ ಬಿಜೆಪಿ ಶಾಸಕನೋರ್ವ ಕೋವಿಡ್ ಸೋಂಕು ನಿಯಂತ್ರಣಕ್ಕೆ ಗೋ ಮೂತ್ರವೇ ರಾಮಬಾಣ ಎಂದು ಹೇಳಿದ್ದು, ಜನರೆದುರೇ ಗೋ ಮೂತ್ರ ಕುಡಿದಿದ್ದು, ವಿಡಿಯೋ ವೈರಲ್ ಆಗಿದೆ.

 

 

“ಗೋಮೂತ್ರ ಬಳಸಿ ಕೊರೊನಾ ಹರಡುವುದನ್ನು ತಡೆಗಟ್ಟಬಹುದಾಗಿದೆ. ಅಲ್ಲದೆ ಜನರಿಗಾಗಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವುದರ ಮಧ್ಯೆಯೂ ನನ್ನ ಉತ್ತಮ ಆರೋಗ್ಯದ ಗುಟ್ಟು ಗೋಮೂತ್ರ.ನಾನು ವಿಜ್ಞಾನವನ್ನು ನಂಬುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಗೋಮೂತ್ರವನ್ನು ಸಂಪೂರ್ಣವಾಗಿ ನಂಬುತ್ತೇನೆ. ” ಎಂದು ಸಿಂಗ್ ಹೇಳಿದ್ದಾರೆ.

 

 

ಅಲ್ಲದೆ ಗೋಮೂತ್ರವನ್ನು ಯಾವ ಪ್ರಮಾಣದಲ್ಲಿ, ಹೇಗೆ ಸೇವಿಸಬೇಕು ಎಮಬುದರ ಕುರಿತು ಸಹ ಮಾಹಿತಿ ನೀಡಿರುವ ಅವರು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಬೇಕು. ಒಂದು ಗ್ಲಾಸ್ ನೀರಿನಲ್ಲಿ ಎರಡ್ಮೂರು ಕ್ಯಾಪ್‍ನಷ್ಟು ಗೋಮೂತ್ರ ಬೆರೆಸಿ ಸೇವಿಸಬೇಕು. ಇನ್ನೊಂದು ಮುನ್ನೆಚ್ಚರಿಕೆ ನೀಡಿರುವ ಅವರು, ಗೋಮೂತ್ರ ಸೇವಿಸಿದ ಬಳಿಕ ಅರ್ಧ ಗಂಟೆ ಏನೂ ಸೇವಿಸಬಾರದು ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top