fbpx
ಸಮಾಚಾರ

ಗಂಡನನ್ನು ಕಳೆದುಕೊಂಡ ನೋವಿನಲ್ಲೇ ಭಾವುಕ ಪತ್ರ ಬರೆದ ನಟಿ ಮಾಲಾಶ್ರೀ

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಏಪ್ರಿಲ್ 26 ರಂದು ಕೊರೊನಾಗೆ ಬಲಿಯಾಗಿದ್ದರು. ಪತಿ ಸಾವಿನ ನೋವಿನಲ್ಲಿರುವ ನಟಿ ಮಾಲಾಶ್ರೀ ಇದೀಗ ಎಲ್ಲರಿಗೂ ಧನ್ಯವಾದ ತಿಳಿಸುವ ಮೂಲಕ ಭಾವುಕ ಪತ್ರ ಹಂಚಿಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಬೆಂಬಲ ನೀಡಿದ ಪ್ರತಿಯೋಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಮಾಲಾಶ್ರೀ ಹೃದಯಸ್ಪರ್ಶಿ ಪತ್ರ ಹಂಚಿಕೊಂಡಿದ್ದಾರೆ.

 

 

ಟ್ವೀಟ್‍ನಲ್ಲಿ ಏನಿದೆ?
ಕಳೆದ 12 ದಿನಗಳಿಂದ ನಾನು ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ. ನಮ್ಮ ಕುಟುಂಬದವರೆಲ್ಲರೂ ಕೂಡ ರಾಮು ಅವರ ಮರಣದಿಂದ ನೊಂದಿದ್ದಾರೆ. ರಾಮು ಅವರು ನಮಗೆ ಯಾವತ್ತು ಬೆನ್ನಲುಬಾಗಿದ್ದರು. ಸದಾ ನಮಗೆ ಪ್ರೋತ್ಸಾಹಕರಾಗಿದ್ದರು.

ರಾಮು ಅವರ ಮರಣದ ಸಂದರ್ಭ ಸಿನಿಮಾ ಇಂಡಸ್ಟ್ರಿಯವರು ಸಂತಾಪ ಸೂಚಿಸಿ ನಮಗೆ ಧೈರ್ಯ ತುಂಬಿದ್ದರು. ನಮ್ಮ ಕಷ್ಟಕಾಲದಲ್ಲಿ ನಮಗೆ ಧೈರ್ಯ ತುಂಬಿದ ಸಿನಿಮಾ ಕಲಾವಿದರು, ಮಾಧ್ಯಮ ಮಿತ್ರರು, ನಿರ್ಮಾಪಕರು, ಟೆಕ್ನಿಷಿಯನ್ ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ರಾಮು ಜೊತೆಗಿರುವ ಪ್ರೋಫೈಲ್ ಫೋಟೋವನ್ನು ಹಾಕಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top