fbpx
ಸಮಾಚಾರ

ಮೇ 10: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 10, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಚೈತ್ರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ದಶೀ 9:54 pm
ನಕ್ಷತ್ರ : ಅಶ್ವಿನಿ 8:25 pm
ಯೋಗ : ಆಯುಷ್ಮಾನ್ 9:39 pm
ಕರಣ : ವಿಷ್ಟಿ 8:40 am ಶಕುನಿ 9:54 pm

Time to be Avoided
ರಾಹುಕಾಲ : 7:33 am – 9:07 am
ಯಮಗಂಡ : 10:41 am – 12:16 pm
ದುರ್ಮುಹುರ್ತ : 12:41 pm – 1:31 pm, 3:11 pm – 4:02 pm
ವಿಷ : 3:56 pm – 5:43 pm
ಗುಳಿಕ : 1:50 pm – 3:24 pm

Good Time to be Used
ಅಮೃತಕಾಲ : 12:20 pm – 2:08 pm
ಅಭಿಜಿತ್ : 11:50 am – 12:41 pm

Other Data
ಸೂರ್ಯೋದಯ : 5:55 am
ಸುರ್ಯಾಸ್ತಮಯ : 6:36 pm
ರವಿರಾಶಿ : ಮೇಷ
ಚಂದ್ರರಾಶಿ : ಮೇಷ

 

 

 

ಮೇಷ (Mesha)

 

ದಿನೇ ದಿನೇ ಪ್ರವೃದ್ಧಮಾನಕ್ಕೆ ಬರುತ್ತಿರುವ ನಿಮ್ಮನ್ನು ಕಂಡರೆ ಇತರೆಯವರಿಗೆ ಅಸೂಯೆ ಮೂಡುವುದು. ಮತ್ತು ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಎಸಗುವ ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದು ಮಾಡಿ ನಿಮಗೆ ಅವಮಾನ ಮಾಡುವ ಹವಣಿಕೆಯಲ್ಲಿರುವರು, ನಿಮಗೂ ಮತ್ತು ನಿಮ್ಮನ್ನು ಅರಿತ ಸ್ನೇಹಿತರಿಗೂ ಸಂತೋಷ ತರುವುದು. ವಿತಂಡವಾದದಿಂದ ಬೇರೆಯವರಿಗೆ ಬೇಸರ ಮಾಡದಿರಿ.

ವೃಷಭ (Vrushabh)


ನಿಮ್ಮ ಮಕ್ಕಳನ್ನು ಜೋಪಾನ ಮಾಡುವಷ್ಟೇ ನಿಮ್ಮ ಹೆತ್ತ ತಂದೆ-ತಾಯಿ ಅಥವಾ ಅತ್ತೆ-ಮಾವಂದಿರ ಆರೈಕೆ ಮಾಡುವುದು ಒಳ್ಳೆಯದು. ಇದರಿಂದ ನಿಮಗೆ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೆ ಹಿರಿಯರ ತುಂಬು ಆಶೀರ್ವಾದ ದೊರೆಯುವುದು.

ಮಿಥುನ (Mithuna)


ಈ ದಿನ ಹೊಸ ಕೆಲಸವೊಂದು ನಿಮಗೆ ಕೂಡಿಬರುವುದು. ಅದರಿಂದ ಹೆಚ್ಚಿನ ಲಾಭಾಂಶವು ಬರುವುದಿದೆ. ಬಂದ ಹಣದಲ್ಲಿ ಉಳಿತಾಯದ ಕಡೆಗೂ ಗಮನ ಹರಿಸುವುದು ಒಳ್ಳೆಯದು. ಮಕ್ಕಳ ಆರೋಗ್ಯದ ಕಡೆ ಗಮನ ನೀಡಿರಿ.

ಕರ್ಕ (Karka)


ಈ ಹಿಂದೆ ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಯು ನಿಮ್ಮ ಬಳಿ ಬಂದು ಗೌರವ ಸೂಚಿಸುವರು. ಇದರಿಂದ ನಿಮಗೆ ಹೆಮ್ಮೆ ಎನಿಸುವುದು. ಯಾವತ್ತು ಪ್ರಾಮಾಣಿಕತೆಗೆ ಬೆಲೆ ಇದ್ದೆ ಇರುತ್ತದೆ ಎಂಬುದು ಮತ್ತೊಮ್ಮೆ ಖಾತ್ರಿ ಆಗುತ್ತಿದೆ.

ಸಿಂಹ (Simha)


ಮನೆಯ ಕೆಲಸದ ಒತ್ತಡಗಳ ನಡುವೆಯೂ ದೈಹಿಕ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ನೀವು ಆರೋಗ್ಯನ್ನು ಕಾಪಾಡಿಕೊಂಡಲ್ಲಿ ಮನೆಯ ಇತರೆ ಸದಸ್ಯರು ನೆಮ್ಮದಿಯಿಂದ ಇರುವರು. ಜೀವನದಲ್ಲಿ ನಿಮ್ಮ ತ್ಯಾಗ ಮನೋಭಾವವನ್ನು ಎಲ್ಲರೂ ಕೊಂಡಾಡುವರು.

ಕನ್ಯಾರಾಶಿ (Kanya)


ಉತ್ತಮ ಮಾತುಗಾರಿಕೆಯಿಂದ ನಿಮ್ಮ ಮೇಲಿದ್ದ ಅಪನಂಬಿಕೆಗಳು ಕರಗಿ ಹೋಗುವವು. ಮಿತ್ರರು ನಿಮ್ಮ ಬೆಂಬಲಕ್ಕೆ ಬರುವರು. ವಿವಿಧ ಮೂಲಗಳಿಂದ ಹಣಕಾಸಿನ ನೆರವು ದೊರೆಯುವುದು. ಹಾಗಾಗಿ ಇಂದಿನ ಕಾರ್ಯಕ್ಕೆ ಯಾವುದೇ ಚ್ಯುತಿ ಉಂಟಾಗುವುದಿಲ್ಲ.

ತುಲಾ (Tula)


ಖರ್ಚು, ವೆಚ್ಚಗಳಲ್ಲಿ ಬದಲಾವಣೆ ಕಂಡು ಬರುವುದು. ಬರಬೇಕಾಗಿದ್ದ ಹಣದಲ್ಲಿ ಸ್ವಲ್ಪ ಭಾಗ ಈ ದಿನ ಬರುವ ಸಾಧ್ಯತೆ ಇದೆ. ಮನೆಯಲ್ಲಿನ ವಾತಾವರಣ ನಿಮಗೆ ಪೂರಕವಾಗಿರುವುದು. ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯು ತೃಪ್ತಿದಾಯಕವಾಗಿರುತ್ತದೆ.

ವೃಶ್ಚಿಕ (Vrushchika)


ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಕಂಡು ಬರುವುದು. ಇದರಿಂದ ನಿಮಗೆ ಹೊಸ ಉತ್ಸಾಹ ಮೂಡುವುದು. ನೂತನ ಜನರ ಪರಿಚಯವಾಗುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ನೀಡಿರಿ, ಇದರಿಂದ ಮಾನಸಿಕ ನೆಮ್ಮದಿ ಸಂತೋಷವನ್ನು ಕಾಣುವಿರಿ. ಮಕ್ಕಳ ವಿಚಾರವಾಗಿ ಹೆಚ್ಚು ಚಿಂತಿಸಿ ಫಲವಿಲ್ಲ.

ಧನು ರಾಶಿ (Dhanu)


ಧನಾತ್ಮಕ ಭಾವನೆಗಳಿಂದ ಜೀವನದಲ್ಲಿ ಧನ್ಯತೆಯ ಭಾವವನ್ನು ಕಾಣುವಿರಿ. ಇದಕ್ಕೆ ಪೂರಕವಾಗಿ ಮನೆಯ ಸದಸ್ಯರು ನಿಮಗೆ ಬೆಂಬಲ ನೀಡುವರು. ಆರೋಗ್ಯದ ವಿಚಾರದಲ್ಲಿ ಗಣನೀಯವಾಗಿ ಚೇತರಿಕೆ ಕಂಡು ಬರುವುದು. ಆರ್ಥಿಕ ಸ್ಥಿತಿ ಉತ್ತಮ.

ಮಕರ (Makara)


ವ್ಯಾಪಾರಧಿವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಕಂಡುಬರುವುದು. ಕೆಲಸದಲ್ಲಿ ದೃಢ ನಿಶ್ಚಯ ವಿಶ್ವಾಸ ಬೆಳೆಸಿಕೊಳ್ಳಿರಿ. ಕೆಲಸ ಕಾರ್ಯಗಳು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಬೆಂಬಲ ಪಡೆಯಿರಿ. ಮತ್ತು ಗುರುವಿನ ಆಶೀರ್ವಾದ ಪಡೆಯಿರಿ.

ಕುಂಭರಾಶಿ (Kumbha)


ಯಾವುದೇ ಋುಣಾತ್ಮಕ ವಿಚಾರಗಳಿಗೆ ನೀವು ಕಿವಿಗೊಡದಿರುವುದು ಒಳ್ಳೆಯದು. ಸಂಗಾತಿಯು ಆಡುವ ಮಾತುಗಳಿಗೆ ಅಪಾರ್ಥ ಕಲ್ಪಿಸಬೇಡಿ. ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬುದು ತಿಳಿದಿರಿ.

ಮೀನರಾಶಿ (Meena)


ಮರೆಗುಳಿತನದಿಂದ ಭಾರಿ ಹೊಡೆತ ಬೀಳುವುದು. ಮನಸ್ಸಿನ ಚಂಚಲತೆಯನ್ನು ನಿವಾರಿಸಿಕೊಳ್ಳಲು ಮನೋಜಯವನ್ನು ಗಳಿಸಿದ ಮಾರುತಿಯ ಸ್ತೋತ್ರ ಪಠಿಸಿರಿ. ಮಾಡುವ ಖರ್ಚುಧಿವೆಚ್ಚಗಳಿಗೆ ಲೆಕ್ಕ ಇಡಿರಿ. ಆರೋಗ್ಯ ಉತ್ತಮವಾಗಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top