fbpx
ಸಮಾಚಾರ

ಟ್ವಿಟರ್​ನಿಂದ ಹೊರದಬ್ಬಿಸಿಕೊಂಡ ಕಂಗನಾಗೆ ಇನ್ಸ್ಟಾಗ್ರಾಮ್ ನಲ್ಲೂ ಮುಖಭಂಗ

ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಟಿ ಕಂಗನಾ ರನೋತ್ ಇತ್ತೀಚೆಗಷ್ಟೆ ಟ್ವಿಟರ್​ ಈ ನಟಿಯ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಿತು. ಇದರ ಬೆನ್ನಲ್ಲೇ ಇನ್​ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದ ನಟಿಗೆ ಈಗ ಇಲ್ಲೂ ಸಮಸ್ಯೆ ಎದುರಾಗಿದೆ. ಹೌದು, ಕಂಗನಾ ಇನ್​ಸ್ಟಾಗ್ರಾಂನಲ್ಲೂ ಒಂದು ವಾರಕ್ಕಿಂತ ಹೆಚ್ಚು ಇರುವುದು ಅನುಮಾನ ಎಂದು ಪೋಸ್ಟ್​ ಮಾಡಿದ್ದಾರೆ.

 

 

“ಕರೊನಾವನ್ನು ಮೆಟ್ಟಿನಿಲ್ಲುತ್ತೀನಿ ಎಂದು ನಾನು ಹಾಕಿದ ಪೋಸ್ಟ್​ನ್ನು ಇನ್​ಸ್ಟಾಗ್ರಾಂ ಕಿತ್ತುಹಾಕಿದೆ. ಇದರಿಂದ ಕೆಲವರಿಗೆ ಬೇಸರವಾಗಿದೆ ಎಂಬ ಕಾರಣಕ್ಕೆ ಅಳಿಸಿ ಹಾಕಲಾಗಿದೆ. ಕಮ್ಯುನಿಸ್ಟ್​ಗಳು ಮತ್ತು ಭಯೋತ್ಪಾದಕರಿಗೆ ಸಹಾನುಭೂತಿ ವ್ಯಕ್ತಪಡಿಸುವವರ ಬಗ್ಗೆ ಗೊತ್ತು. ಆದರೆ, ಕೋವಿಡ್​ಗೂ ಅಭಿಮಾನಿಗಳು ಇದ್ದಾರೆ ಎಂಬ ವಿಷಯ ಗೊತ್ತಿರಲಿಲ್ಲ. ಇನ್​ಸ್ಟಾಗ್ರಾಂಗೆ ಬಂದು ಕೇವಲ ಎರಡು ದಿನಗಳಾಗಿವೆ. ನನ್ನ ಪೋಸ್ಟ್​ ಡಿಲೀಟ್​ ಆಗುತ್ತಿರುವುದು ನೋಡಿದರೆ, ಇಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ನಾನು ಇರಬಹುದು ಎಂದು ಅನಿಸುತ್ತಿಲ್ಲ” ಎಂದು ಕಂಗನಾ ಪೋಸ್ಟ್​ ಹಾಕಿದ್ದಾರೆ.

ದೇಶದ ತುಂಬೆಲ್ಲ ಕೊರೊನಾ ವೈರಸ್​ ತನ್ನ ಅಟ್ಟಹಾಸ ಮೆರೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಮಹಾಮಾರಿಗೆ ಬಲಿ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಕಂಗನಾಗೂ ಕೊರೊನಾ ಪಾಸಿಟಿವ್​ ಆಗಿತ್ತು. ಅದನ್ನು ಅಭಿಮಾನಿಗಳಿಗೆ ತಿಳಿಸುವ ಸಲುವಾಗಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಆದರೆ ಆ ಪೋಸ್ಟ್​ ಈಗ ಮಾಯವಾಗಿದೆ. ಅಂದರೆ, ಅದನ್ನು ಇನ್​ಸ್ಟಾಗ್ರಾಮ್​ ಡಿಲೀಟ್​​ ಮಾಡಿದೆ!

ತಾವು ಕೊರೊನಾ ಪಾಸಿಟಿವ್​ ಆಗಿರುವುದನ್ನು ತಿಳಿಸುವ ಸಲುವಾಗಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದ ಕಂಗನಾ, ‘ಕೊರೊನಾ ಒಂದು ಸಣ್ಣ ಜ್ವರ’ ಎಂದು ಬರೆದುಕೊಂಡಿದ್ದರು. ಇಡೀ ದೇಶದಲ್ಲಿ ಸಾವಿರಾರು ಜನರು ಕೊರೊನಾದಿಂದ ಸಾಯುತ್ತಿರುವಾಗ ಅದನ್ನು ಒಂದು ಸಣ್ಣ ಜ್ವರ ಎಂದು ಹೇಳಿ ತಪ್ಪು ಮಾಹಿತಿ ಹರಡಿ, ಎಲ್ಲರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಕ್ಕಾಗಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಕಮೆಂಟ್​ಗಳ ಮೂಲಕ ಕಂಗನಾಗೆ ಛೀಮಾರಿ ಹಾಕಿದ್ದರು. ಪರಿಣಾವಾಗಿ ಕಂಗನಾ ಅವರ ಆ ಪೋಸ್ಟ್​ ಅನ್ನು ಇನ್​ಸ್ಟಾಗ್ರಾಮ್​​ ಡಿಲಿಟ್ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top