fbpx
ಸಮಾಚಾರ

ಮೇ 11: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಮೇ 11, 2021 ಮಂಗಳವಾರ
ವರ್ಷ : 1943 ಪ್ಲಾವ
ತಿಂಗಳು : ಚೈತ್ರ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಮಾವಾಸ್ಯೆ 12:28 am
ನಕ್ಷತ್ರ : ಭರಣಿ 11:31 pm
ಯೋಗ : ಸೌಭಾಗ್ಯ 10:42 pm
ಕರಣ : ಚತುಷ್ಪಾದa 11:11 am ನಾಗ 12:28 am

Time to be Avoided
ರಾಹುಕಾಲ : 3:24 pm – 4:58 pm
ಯಮಗಂಡ : 9:07 am – 10:41 am
ದುರ್ಮುಹುರ್ತ : 8:29 am – 9:20 am, 11:07 pm – 11:53 pm
ವಿಷ : 7:15 am – 9:04 am
ಗುಳಿಕ : 12:16 pm – 1:50 pm

Good Time to be Used
ಅಮೃತಕಾಲ : 6:06 pm – 7:54 pm
ಅಭಿಜಿತ್ : 11:50 am – 12:41 pm

Other Data
ಸೂರ್ಯೋದಯ : 5:55 am
ಸುರ್ಯಾಸ್ತಮಯ : 6:36 pm
ರವಿರಾಶಿ : ಮೇಷ
ಚಂದ್ರರಾಶಿ : ಮೇಷ

 

 

 

ಮೇಷ (Mesha)

 

ಎಲ್ಲ ಕಾಲದಲ್ಲೂ ನಿಮ್ಮ ಮಾತೇ ಅಂತಿಮ ಎನ್ನುವ ಧೋರಣೆ ಬಿಡಿ. ಇತರರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರವಾಗಿರುತ್ತದೆ. ಸಂಗಾತಿಯು ಮಾತಾಡುವ ವಿಷಯಗಳಿಗೆ ಅಪಾರ್ಥ ಕಲ್ಪಿಸಕೊಳ್ಳದಿರಿ.

ವೃಷಭ (Vrushabh)


ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು. ಸುಖಾ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳು ಮಾಡಿಕೊಳ್ಳದಿರಿ.

ಮಿಥುನ (Mithuna)


ಆಸ್ತಿ ಖರೀದಿಯ ಬಗ್ಗೆ ನಿಧಾನ ಪ್ರಗತಿ ಉಂಟಾಗುವುದು. ಸ್ನೇಹಿತರು ಸಹಾಯ ಮಾಡುವರು. ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೋಸ ಹೋಗುವ ಸಾಧ್ಯತೆ. ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿರಿ.

ಕರ್ಕ (Karka)


ವೃಥಾ ಕಾರಣಗಳಿಗಾಗಿ ಯಾರನ್ನೂ ವಿರೋಧಿಸಲು ಮುಂದಾಗದಿರಿ. ಈದಿನ ಗ್ರಹಸ್ಥಿತಿಗಳು ನಿಮ್ಮ ವಿರುದ್ಧ ತೀರ್ಪನ್ನು ನೀಡುವವು. ಹಾಗಾಗಿ ತಾಳ್ಮೆಯನ್ನು ಕಳೆದುಕೊಳ್ಳದಿರಿ.

ಸಿಂಹ (Simha)


 ಕೆಲ ಗ್ರಹಗಳ ಅಶುಭ ಸಂಚಾರದಿಂದ ಬರುವ ಹಣಕಾಸು ಪೂರ್ಣವಾಗಿ ಬರುವುದಿಲ್ಲ. ಕಂತಿನ ರೂಪದಲ್ಲಿ ಹಣ ಬರುವ ಸಾಧ್ಯತೆ ಇದೆ. ಮನೆಯ ಯಂತ್ರೋಪಕರಣಗಳ ರಿಪೇರಿಗಾಗಿ ಹಣ ಖರ್ಚಾಗುವುದು.

ಕನ್ಯಾರಾಶಿ (Kanya)


ಈದಿನ ಹಣಕಾಸಿನ ತೊಂದರೆ ಇರುವುದಿಲ್ಲ. ಬಾಳ ಸಂಗಾತಿಯೊಡನೆ ಚರ್ಚಿಸಿ ಸಲಹೆ ಪಡೆಯಲು ಇಂದು ಸಕಾಲವಾಗಿದೆ. ನೀವಾಡುವ ಮಾತು ಇತರರಿಗೆ ರುಚಿಸುವುದಿಲ್ಲ. ಆರೋಗ್ಯದ ಸಲುವಾಗಿ ಗಣಪತಿಯನ್ನು ಪ್ರಾರ್ಥಿಸಿರಿ.

ತುಲಾ (Tula)


ಹಣ ಖರ್ಚಾಗುವ ಪರಿ ಕಂಡು ಆಶ್ಚರ್ಯವಾಗುವುದು. ದುಡಿದ ಹಣವು ಅನಾರೋಗ್ಯ ಸಲುವಾಗಿ ಖರ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಭಗವಂತನ ಕಾರ್ಯಗಳಿಗೆ ಮತ್ತು ದೀನದಲಿತರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಚಯವಾಗುತ್ತದೆ.

ವೃಶ್ಚಿಕ (Vrushchika)


ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯವನ್ನು ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ಇಂದು ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಧನು ರಾಶಿ (Dhanu)


ನೆರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರಿ. ಭಗವಂತನ ಆಶೀರ್ವಾದ ದೊರೆಯುವುದು.

ಮಕರ (Makara)


ಮನೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವಿರಿ. ದೂರದ ಊರಿನಿಂದ ಬಂಧುಗಳು / ಇಷ್ಟಮಿತ್ರರು ಬರುವ ಸಂಭವ. ವ್ಯಾಪಾರ-ವ್ಯವಹಾರಸ್ಥರಿಗೆ ಉತ್ತಮ ದಿನ. ಹಣಕಾಸಿನ ಸ್ಥಿತಿ ತಿಳಿಗೊಳ್ಳುವುದು.

ಕುಂಭರಾಶಿ (Kumbha)


ಮನೋಭಿಲಾಷೆಗಳು ಪೂರ್ಣಗೊಳ್ಳುವುದು. ಸಂಗಾತಿಯು ಸಕಾಲದಲ್ಲಿ ಎಚ್ಚರಿಕೆಯನ್ನು ನೀಡುವುದರಿಂದ ಹಣ ಕೈ ಜಾರಿ ಹೋಗುವುದನ್ನು ತಪ್ಪಿಸಿಕೊಳ್ಳುವಿರಿ. ಇದರಿಂದ ಮಡದಿಯ ಮೇಲೆ ಪ್ರೀತಿ ಹೆಚ್ಚಾಗುವುದು.

ಮೀನರಾಶಿ (Meena)


ಸ್ನೇಹಿತರೊಂದಿಗೆ ಅತ್ಯುತ್ತಮ ಸಮಯ ಕಳೆಯುವಿರಿ. ಜೀವನಶೈಲಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಬೇಕಾಗುವುದು. ಸಹೋದ್ಯೋಗಿಗಳು ನಿಮಗೆ ಸಕಾರಾತ್ಮಕವಾಗಿ ಸ್ಪಂದಿಸುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top