fbpx
ಸಮಾಚಾರ

ಬಾರ್‌ನಲ್ಲಿ ಕುಡಿದು ವಾರ್ನರ್, ಸ್ಲೇಟರ್ ಮಧ್ಯೆ ಫೈಟಿಂಗ್? ವೈರಲ್

ಸನ್‍ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಮತ್ತು ಆಸ್ಟ್ರೇಲಿಯಾದ ವೀಕ್ಷಕ ವಿವರಣೆಗಾರ ಮೈಕಲ್ ಸ್ಲೇಟರ್ ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಆಟಗಾರರಲ್ಲಿ ಕೊರೊನಾ ವೈರಸ್‌ ಕಾಣಿಸಿಕೊಂಡ ಕಾರಣ ಐಪಿಎಲ್ 2021 ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಿ ಎಲ್ಲ ಆಟಗಾರರನ್ನು ತಮ್ಮ ತಮ್ಮ ಮನೆಗೆ ಹಿಂದಿರುಗುವಂತೆ ಮಾಡಲಾಗಿದೆ. ಆದರೆ, ಆಸ್ಟ್ರೇಲಿಯಾ ತನ್ನ ಗಡಿ ಮುಚ್ಚಿರುವ ಐಪಿಎಲ್‌ ಭಾಗವಾಗಿದ್ದ ಕಾರಣ ಕಾಂಗರೂ ಕಲಿಗಳನ್ನು ತವರಿಗೆ ಕಳುಹಿಸಿಕೊಡಲು ಸಾಧ್ಯವಾಗಿಲ್ಲ.

ಹೀಗಾಗಿ ಆಸೀಸ್‌ನ ಗಡಿ ಭಾಗ ತೆರೆಯುವ ವರೆಗೆ ಆಟಗಾರರ ಸಂಪೂರ್ಣ ಹೊಣೆಯನ್ನು ಬಿಸಿಸಿಐ ಹೊತ್ತಿಕೊಂಡಿದೆ. ಈ ನಡುವೆ ಮಾಲ್ಡೀವ್ಸ್‌ನ ಹೋಟೆಲ್ ಒಂದರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮಾಜಿ ನಾಯಕ ಡೇವಿಡ್‌ ವಾರ್ನರ್ ಮತ್ತು ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್‌ ಮೈಕಲ್‌ ಸ್ಲೇಟರ್‌ ನಡುವೆ ಹೊಡೆದಾಟ ನಡೆದಿರುವ ಸುದ್ದಿ ಹರಿದಾಡಿದೆ.

ಬಾರ್​ನಲ್ಲಿ ಮಾತುಕತೆ ನಡುವೆ ವಾಗ್ವಾದ ಉಂಟಾಗಿದ್ದು, ಈ ವೇಳೆ ವಾರ್ನರ್-ಸ್ಲೇಟರ್ ಹೊಡೆದಾಡಿಕೊಂಡಿದ್ದಾರೆ. ತಕ್ಷಣವೇ ಸಿಬ್ಬಂದಿಗಳು ಹಾಗೂ ಜೊತೆಗಿದ್ದರು ಜಗಳವನ್ನು ನಿಯಂತ್ರಿಸಿದ್ದಾರೆ ಎಂದು ಹೇಳಲಾಗಿದೆ. ಈ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಾರ್ನರ್- ಸ್ಲೇಟರ್ ಸ್ಪಷ್ಟನೆ:
ಈ ಸುದ್ದಿಯನ್ನು ಇಬ್ಬರು ನಿರಾಕರಿಸಿದ್ದು, ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಪ್ರತಕ್ಷ ನೋಡದೇ ಸಾಕ್ಷ್ಯವಿಲ್ಲದೇ ವರದಿ ಮಾಡುವುದು ಸರಿಯಲ್ಲ. ಈ ಸುದ್ದಿ ಹೇಗೆ ಹುಟ್ಟಿಕೊಂಡಿತು ಎನ್ನುವುದು ತಿಳಿದಿಲ್ಲ ಎಂದು ಡೇವಿಡ್ ವಾರ್ನರ್ ಪ್ರತಿಕ್ರಿಯಿಸಿದ್ದಾರೆ.

“ಇಲ್ಲಿ ಯಾವುದೇ ಡ್ರಾಮಾ ನಡೆದಿಲ್ಲ. ಈ ರೀತಿಯ ವುಚಾರಗಳು ನಿಮಗೆ ಎಲ್ಲಿಂದ ಸಿಗುತ್ತದೆ ಎಂಬುದೇ ಗೊತ್ತಿಲ್ಲ. ನೀವು ಇಲ್ಲಿದ್ದೀರಾ? ನೀವು ಪ್ರಕಟಿಸಿರುವ ಸುದ್ದಿ ಬಗ್ಗೆ ಏನಾದರೂ ಸಾಕ್ಷಿ ಇದೆಯೇ. ಪುರಾವೆಗಳಿಲ್ಲದೆ ಏನನ್ನೂ ಬರೆಯಬಾರದು. ಇಲ್ಲಿ ಏನೂ ಸಂಭವಿಸಿಲ್ಲ,” ಎಂದು ವಾರ್ನರ್‌ ಸ್ಪಷ್ಟೀಕರಣ ನೀಡಿದ್ದಾರೆ.

“ಇಲ್ಲಿ ಸುಮ್ಮನೆ ವದಂತಿ ಹಬ್ಬಿಸುವುದರಲ್ಲಿ ಅರ್ಥವಿಲ್ಲ. ವಾರ್ನರ್‌ ಮತ್ತು ನಾನು ಇಬ್ಬರೂ ಆತ್ಮೀಯ ಗೆಳೆಯರು. ನಮ್ಮ ನಡುವೆ ಹೊಡೆದಾಟ ನಡೆಯುವ ಪ್ರಶ್ನೆಯೇ ಇಲ್ಲ,” ಎಂದು ಸ್ಲೇಟರ್‌ ಹೇಳಿರುವುದಾಗಿ ಫಾಕ್ಸ್‌ ಸ್ಪೋರ್ಟ್ಸ್‌ ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top