fbpx
ಸಮಾಚಾರ

“ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ…” ಪ್ರಾಣ ಬಿಡುವುದಕ್ಕೂ ಮುನ್ನ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ

ಬಾಲಿವುಡ್‌ ನಟ ಹಾಗೂ ಯುಟ್ಯೂಬರ್‌ ರಾಹುಲ್‌ ವೋರಾ ಕೋವಿಡ್‌ನಿಂದಾಗಿ ಭಾನುವಾರ ನಿಧನರಾದರು. ಅವರು ಆಮ್ಲಜನಕ ಕೊರತೆಯಿಂದ ಮೃತಪಟ್ಟಿರುವ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

 

 

ಇಂದು ರಾಹುಲ್‌ ಅವರ ಪತ್ನಿ ಜ್ಯೋತಿ ತಿವಾರಿ ಪತಿಯ ಕೊನೆಯ ಹೃದಯವಿದ್ರಾವಕ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದರಲ್ಲಿ ತಾವು ದಾಖಲಾಗಿರುವ ದೆಹಲಿಯ ರಾಜೀವಗಾಂಧಿ ಸೂಪರ್‌ಸ್ಟೆಷ್ಯಾಲಿಟಿ ಆಸ್ಪತ್ರೆಯಲ್ಲಿ ತಾವು ಅನುಭವಿಸುತ್ತಿರುವ ನೋವನ್ನು ವಿಡಿಯೋ ಮಾಡುವ ಮೂಲಕ ಹೇಳಿರುವ ರಾಹುಲ್‌, ಮೃತಪಟ್ಟಿದ್ದಾರೆ. ಆಕ್ಸಿಜನ್​ ಇಲ್ಲದೇ ಆಸ್ಪತ್ರೆಯ ಬೆಡ್​ನಲ್ಲಿ ಮಲಗಿಕೊಂಡು ಕರುಣಾಜನಕ ಸ್ಥಿತಿಯನ್ನು ರಾಹುಲ್​ ವಿವರಿಸುತ್ತಿರುವ ದೃಶ್ಯ ಆ ವಿಡಿಯೋದಲ್ಲಿದೆ.

 

 

‘ರಾಹುಲ್​ ನಿಧನರಾದರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ ಸತ್ತರು ಎಂಬುದು ಯಾರಿಗೂ ಗೊತ್ತಿಲ್ಲ. ಇದು ರಾಜೀವ್​ ಗಾಂಧಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ. ಇಲ್ಲಿ ರೋಗಿಗಳನ್ನು ಈ ರೀತಿ ನೋಡಿಕೊಳ್ಳಲಾಗುತ್ತದೆ’ ಎಂಬ ಕ್ಯಾಪ್ಷನ್ ಜೊತೆ ಜ್ಯೋತಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ನಿಧನರಾಗುವುದಕ್ಕೂ ಮುನ್ನ ರಾಹುಲ್​ ಅವರು ಸಹಾಯಕ್ಕಾಗಿ ​ಅಂಗಲಾಚಿದ್ದರು. ‘ಇಂದು ಆಕ್ಸಿಜನ್​ ಮಾಸ್ಕ್​ ತುಂಬ ಅವಶ್ಯಕವಾಗಿದೆ. ನನಗೆ ಇದನ್ನು ಕೊಟ್ಟಿದ್ದಾರೆ. ಆದರೆ ಇದರಿಂದ ಆಕ್ಸಿಜನ್​ ಕಿಂಚಿತ್ತೂ ಬರುತ್ತಿಲ್ಲ. ಸಹಾಯಕ್ಕಾಗಿ ಎಷ್ಟೇ ಬಾರಿ ಕರೆದರೂ ಯಾರೂ ಬರುತ್ತಿಲ್ಲ. ಒಂದು ನಿಮಿಷ ಎಂದು ಹೇಳಿ ಹೋದವರು 2 ಗಂಟೆ ಆದಮೇಲೆ ಬರುತ್ತಾರೆ’ ಎಂದು ಈ ವಿಡಿಯೋ ಮೂಲಕ ರಾಹುಲ್​ ನೋವು ತೋಡಿಕೊಂಡಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top