fbpx
ಸಮಾಚಾರ

IPL​ನಿಂದ ತವರಿಗೆ ಮರಳುವ ಮುನ್ನ ಗುಡ್​ನ್ಯೂಸ್​ ಪಡೆದ ಪ್ಯಾಟ್​ ಕಮ್ಮಿನ್ಸ್: ಮದುವೆಗೂ ಮುನ್ನ ತಂದೆಯಾಗುತ್ತಿದ್ದಾರೆ ಸ್ಟಾರ್ ಕ್ರಿಕೆಟಿಗ!

ಏಪ್ರಿಲ್ 9ರಂದು ಭಾರತದಲ್ಲಿ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೇ 4ರವರೆಗೂ ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿಯೇ ನಡೆದುಕೊಂಡುಬಂದಿತ್ತು. ತದನಂತರ ಐಪಿಎಲ್ ಬಯೋ-ಬಬಲ್ ಒಳಗೂ ಕೊರೊನಾ ಪ್ರವೇಶಿಸಿ ಕೆಲ ಆಟಗಾರರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ.

ಐಪಿಎಲ್​ ವೇಳೆ ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಆಕ್ಸಿಜನ್​ ಪೂರೈಕೆಗಾಗಿ ಆರ್ಥಿಕ ನೆರವು ನೀಡುವ ಮೂಲಕ ಭಾರತೀಯರ ಮನಗೆದ್ದಿದ್ದ ಆಸ್ಟ್ರೆಲಿಯಾದ ವೇಗಿ ಪ್ಯಾಟ್​ ಕಮ್ಮಿನ್ಸ್​, ಟೂರ್ನಿ ಸ್ಥಗಿತಗೊಂಡ ಬಳಿಕ ತವರಿನತ್ತ ಹೊರಟಿದ್ದಾರೆ. ಸದ್ಯ ಮಾಲ್ಡೀವ್ಸ್​ನಲ್ಲಿ ಕ್ವಾರಂಟೈನ್​ ಆಗಿರುವ ಕೋಲ್ಕತ ನೈಟ್​ರೈಡರ್ಸ್​ ಆಟಗಾರ ಕಮ್ಮಿನ್ಸ್​ಗೆ ಅಮ್ಮಂದಿರ ದಿನದಂದೇ ಶುಭ ಸುದ್ದಿಯೊಂದು ಲಭಿಸಿದೆ. ಅವರ ಗೆಳತಿ ಹಾಗೂ ಭಾವಿ ಪತ್ನಿ ಬೆಕಿ ಬೋಲ್ಟನ್​ ಅಮ್ಮನಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

 

 

ಆಸ್ಟ್ರೇಲಿಯಾ ಸ್ಟಾರ್ ವೇಗಿ ಕಮಿನ್ಸ್‌ ಗೆಳತಿ ಬೆಕೆ ಬೋಸ್ಟನ್ ಇಂಗ್ಲೆಂಡ್‌ ದೇಶದವರು. 2014ರಲ್ಲಿ ಬೆಕೆ ಬೋಸ್ಟನ್‌ ವೇಗಿ ಕಮಿನ್ಸ್‌ ಜತೆಗಿರುವ ಫೋಟೋವನ್ನು ಮೊಟ್ಟಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ತಮ್ಮ ಗೆಳೆತನವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.

ಬರೋಬ್ಬರಿ 6 ವರ್ಷಗಳ ಕಾಲ ಡೇಟಿಂಗ್ ನಡೆಸಿದ ಬಳಿಕ ಪ್ಯಾಟ್ ಕಮಿನ್ಸ್‌ 2020ರ ಫೆಬ್ರವರಿಯಲ್ಲಿ ಮದುವೆಯಾಗಲು ಬೆಕೆ ಬೋಸ್ಟನ್‌ ಅವರಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಬಳಿಕ ಫೆಬ್ರವರಿ ತಿಂಗಳಿನಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ, ಆದರೆ ಇಲ್ಲಿಯ ತನಕ ಮದುವೆಯಾಗಿಲ್ಲ. ಇದೀಗ ಮದುವೆಗೂ ಮುನ್ನ ಕಮಿನ್ಸ್ ತಂದೆಯಾಗುತ್ತಿದ್ದಾರೆ.

ಪ್ಯಾಟ್ ಕಮಿನ್ಸ್‌ಗೆ ಸಮಯ ಸಿಕ್ಕಾಗಲೆಲ್ಲಾ ತಮ್ಮ ಕುಟುಂಬ ಹಾಗೂ ಭಾವಿ ಪತ್ನಿ ಬೆಕೆ ಬೋಸ್ಟನ್ ಜತೆ ಸಮಯ ಕಳೆಯುತ್ತಾರೆ. ಬೆಕೆ ಜತೆಗಿನ ಸಂತೋಷದಾಯಕ ಫೋಟೋಗಳನ್ನು ಕಮಿನ್ಸ್‌ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top