fbpx
ಸಮಾಚಾರ

ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ರಘು ಗೌಡಗೆ ಸಿನಿಮಾ ಆಫರ್​; ‘ದ್ವಿಪಾತ್ರ’ದಲ್ಲಿ ನಟನೆ

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ವಿವಾದಗಳು ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ.

ಅದೇನೆ ಇರಲಿ, ಈಗಿನ ಸುದ್ದಿ ಈ ಬಾರಿಯ ಬಿಗ್​ ಬಾಸ್​ ಅರ್ಧಕ್ಕೆ ನಿಂತಿದ್ದರಿಂದ ಮನೆಯಲ್ಲಿದ್ದ 11 ಸ್ಪರ್ಧಿಗಳು ತಮ್ಮ ಮನೆ ಸೇರಿದ್ದಾರೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಬೆನ್ನಲ್ಲೇ ರಘು ಗೌಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.

 

 

ಕೊರೊನಾ ವೈರಸ್​ ಕಾರಣಕ್ಕೆ ಬಿಗ್​ ಬಾಸ್​ ಸೀಸನ್​ 8 ಅರ್ಧಕ್ಕೆ ನಿಂತಿದೆ. 70 ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ರಘು ಇದ್ದರು,. ಈಗ ರಘು ಅವರಿಗೆ ಸಿನಿಮಾ ಆಫರ್ ಸಿಕ್ಕಿದ್ದು ‘ದ್ವಿಪಾತ್ರ ಎಂಬ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದ್ವಿಪಾತ್ರ’ವನ್ನು ಶ್ರೀವತ್ಸ ಆರ್. ನಿರ್ದೇಶನ ಮಾಡುತ್ತಿದ್ದಾರೆ. ಕ್ರೈಂ ಥ್ರಿಲ್ಲರ್​ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಚಂದು ಗೌಡ ಹಾಗೂ ಸತ್ಯಾಶ್ರಯ ಲೀಡ್​ರೋಲ್​ ನಿರ್ವಹಿಸುತ್ತಿದ್ದಾರೆ. ರಘು ಕೂಡ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.,, ಲಾಕ್​ಡೌನ್​ ಪೂರ್ಣಗೊಂಡ ಮೇಲೆ ಇದನ್ನು ಶೂಟ್​ ಮಾಡುವ ಆಲೋಚನೆ ನಿರ್ದೇಶಕರದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top