fbpx
ಸಮಾಚಾರ

ಕೊರೊನಾ ವೈರಸ್​ನಿಂದಾಗಿ ಐವರು ಆತ್ಮೀಯರು ನಿಧನ: “ಸರ್ಕಾರಗಳು ಏನು ಮಾಡುತ್ತಿದ್ದವು?” ನಿರ್ದೇಶಕ ಶಶಾಂಕ್ ಪ್ರಶ್ನೆ

ಬೆಂಗಳೂರಿನಲ್ಲಿ ಕೊರೊನಾ ಹಾವಳಿ ಮಿತಿ ಮೀರಿದೆ. ಜನ ಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ತಮ್ಮವರನ್ನು ಕಳೆದುಕೊಂಡು ನೋವು ಅನುಭವಿಸುತ್ತಿದ್ದಾರೆ. ನಿರ್ದೇಶಕ ಶಶಾಂಕ್​ ಅವರ ಆತ್ಮೀಯರು ಕೂಡ ಈ ಮಹಾಮಾರಿಗೆ ಬಲಿ ಆಗಿದ್ದು, ಆ ದುಃಖವನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ತೋಡಿಕೊಂಡಿದ್ದಾರೆ.

ಈ ಕುರಿತು ಅವರೊಂದು ಟ್ವೀಟ್ ಮಾಡಿದ್ದಾರೆ. ಕೋವಿಡ್​-19ನಿಂದಾಗಿ, ನಡೆಯು’ವ ದುರಂತ’ನ್ನು ನೋಡಿ,ಎದೆ ಭಾರವಾಗಿದೆ.ನನ್ನ ಆಪ್ತ ವಲಯದಲ್ಲೇ,ಐವರು ಅಸು ನೀಗಿದ್ದಾರೆ. ಮನ ನೊಂದು, ಇದುವರೆಗೂ ಹಿಡಿದಿಟ್ಟಿದ್ದ ನನ್ನ ಒಂದು ಸ್ವಂತ ಅನುಭವ ಮತ್ತು ಅದರಿಂದ ಉದ್ಭವಿಸಿದ ಪ್ರಶ್ನೆ’ನ್ನು ಇಲ್ಲಿ ಹಂಚಿಕೊ’ನೆ. ಇದು, ಒಬ್ಬ ಸಾಮಾನ್ಯ ಪ್ರಜೆಯ ಅಳಲು ಅಷ್ಟೇ! ಹೀಗೆ, ಇಂದಿನ ಪರಿಸ್ಥತಿಯನ್ನ ಪತ್ರದ ಮೂಲಕ ತಿಳಿಸಿದ್ದಾರೆ ಶಶಾಂಕ್

 

 

ಈ ಕುರಿತು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಇಲ್ಲಿದೆ.
”ನನ್ನ ನಿರ್ಮಾಣ ಮತ್ತು ನಿರ್ದೇಶನದ UPPI #54 ಸಿನಿಮಾಗೆ ಒಂದು ವರ್ಷದಿಂದ ಚಾತಕಪಕ್ಷಿಯಂತೆ ಉಪ್ಪಿ ಸರ್ ಡೇಟ್‌ಗಾಗಿ ಕಾಯುತ್ತಿದ್ದ ನನಗೆ, ಗ್ರೀನ್ ಸಿಗ್ನಲ್ ಸಿಕ್ಕಿದ್ದು 2021 ರ ಫೆಬ್ರವರಿಯಲ್ಲಿ! ಪ್ರೀ-ಪ್ರೊಡಕ್ಷನ್ ಕೆಲಸಗಳು ತ್ವರಿತಗತಿಯಲ್ಲಿ ಶುರುವಾದವು, ಏಪ್ರಿಲ್ 22ರಿಂದ ಬೆಳಗಾವಿ ಸುತ್ತಮುತ್ತ ಶೂಟಿಂಗ್ ನಿಗದಿಯಾಯಿತು. ಮಾರ್ಚ್ ಮೂರನೇ ವಾರದ ವೇಳೆಗೆ ಕೋವಿಡ್-19 ಎರಡನೇ ಅಲೆಯ ಮುನ್ಸೂಚನೆ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಶುರುವಾಯಿತು. ಗಾಬರಿಯಾದ ನಾನು, ಹಲವಾರು ತಜ್ಞರ ವರದಿಗಳನ್ನು ಪರಿಶೀಲಿಸಿದೆ. ಕೆಲವರೊಂದಿಗೆ ಚರ್ಚಿಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.”

“ಎಲೆಕ್ಷನ್‌ನಲ್ಲಿ ಬ್ಯುಸಿ ಇದ್ದ ನಮ್ಮ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾಡುವುದಿಲ್ಲ ಎಂಬ ಘೋಷಣೆಗಳನ್ನು ದಿನವೂ ಮೊಳಗಿಸುತ್ತಿದ್ದರು. ಅವರ ಹಲವು ನಾಲಿಗೆ ಗುಣದ ಅರಿವಿದ್ದ ನಾನು ತಜ್ಞರ ಸಲಹೆ ಆಧರಿಸಿ, ನನ್ನ ಚಿತ್ರವನ್ನು ಮುಂದೂಡುವ ನಿರ್ಧಾರಕ್ಕೆ ಬಂದೆ ಮತ್ತು ಅದನ್ನು ಉಪ್ಪಿ ಸರ್‌ಗೆ ಸಹ ತಿಳಿಸಿದೆ. ಅಂದು ದಿನಾಂಕ ಮಾರ್ಚ್ 23! ಏನೇ ಅಡೆತಡೆ ಬಂದರೂ, ಬದುಕು ಸಾಗಲೇಬೇಕಲ್ಲವೇ? ಅದಕ್ಕಾಗಿ ಎಲೆಕ್ಷನ್ ಮುಗಿದ ನಂತರ ನಿದ್ದೆಯಿಂದ ಎದ್ದು ಸರ್ಕಾರ ವಿಧಿಸಬಹುದಾದ SOP ವ್ಯಾಪ್ತಿಯಲ್ಲೇ ಚಿತ್ರಿಸಬಹುದಾದ ಒಂದು ಹೊಸಬರ ಚಿತ್ರ ಮಾಡಲು ನಿರ್ಧರಿಸಿದೆ.”

“ಅಂದು ನಾನು ಆ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳದೆ, ಹುಂಬತನದಿಂದ ಮುಂದುವರೆದಿದ್ದರೆ, ತಜ್ಞರ ವರದಿಯಂತೆಯೇ ಅಪ್ಪಳಿಸಿದ ಕೋವಿಡ್-19 ಎರಡನೇ ಅಲೆಗೆ, ನಮ್ಮ ಯೋಜನೆಗಳೆಲ್ಲ ತಲೆಕೆಳಗಾಗಿ, ಕಡಿಮೆಯೆಂದರೂ 50 ಲಕ್ಷ ರೂ. ನಷ್ಟದ ಹೊರೆ ನನ್ನ ತಲೆಯ ಮೇಲೆ ಬೀಳುತ್ತಿತ್ತು ಮತ್ತು ನನ್ನ ತಂಡದಲ್ಲಿ ಹಲವರಿಗೆ ಕೋವಿಡ್-19 ವೈರಸ್ ತಗುಲುವ ಅಪಾಯವಿತ್ತು. ನನ್ನವರ ಹಿತಾಸಕ್ತಿ ಮತ್ತು ನಷ್ಟದ ಭಯ, ನನ್ನನ್ನು ಸರಿಯಾದ ಸಮಯದಲ್ಲಿ, ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು.”

ಶಾಂಕಾಂಕ್ ಪ್ರಶ್ನೆ:
*ನನ್ನಂತಹ ಒಬ್ಬ ಸಾಮಾನ್ಯ ವ್ಯಕ್ತಿ, ಕೇವಲ ಸಾಮಾನ್ಯ ಜ್ಞಾನದಿಂದ ಇಷ್ಟು ಮುಂಜಾಗ್ರತೆ ವಹಿಸಬಹುದಾದರೆ, ಒಂದು ವ್ಯವಸ್ಥೆ- ತಜ್ಞರ ತಂಡಗಳನ್ನು ಬೆನ್ನಿಗಿಟ್ಟುಕೊಂಡಿರುವ ಸರ್ಕಾರಗಳು ಎಷ್ಟು ಮುಂಜಾಗ್ರತೆ ವಹಿಸಬಹುದಲ್ಲವೇ?

*ಜನರ ತೆರಿಗೆಯ ಹಣದಲ್ಲಿ- ಜನರಿಗಾಗಿ ನಡೆಯುವ ಸರ್ಕಾರಗಳಿಗೆ ಇರಬೇಕಾದದ್ದು ಇದೇ ಭಯ- ಕಾಳಜಿಯಲ್ಲವೇ?

*ಎಲ್ಲಕ್ಕಿಂತ ಮಾನವೀಯತೆ ಮುಖ್ಯ ಎಂದು ಸರ್ಕಾರಗಳು ಕಾರ್ಯ ನಿರ್ವಹಿಸಿದ್ದರೆ, ಇಂದು ನೂರಾರು ಜೀವಗಳು ಉಳಿಯುತ್ತಿದ್ದವಲ್ಲವೇ?

*ಪರಿಸ್ಥಿತಿ ಕೈಮೀರಿ, ತಿಂಗಳುಗಟ್ಟಲೇ ಲಾಕ್‌ಡೌನ್ ಮಾಡುವ ಸ್ಥಿತಿ ಬರದೆ, ಎಷ್ಟೋ ಸಂಸಾರಗಳು ಬೀದಿ ಪಾಲಾಗುವುದು ತಪ್ಪುತಿತ್ತಲ್ಲವೇ?

*ಎಲ್ಲದಕ್ಕೂ ಜನರೇ ಹೊಣೆ ಎನ್ನುವುದಾದರೆ, ಸರ್ಕಾರಗಳು ಏಕೆ ಬೇಕಲ್ಲವೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top