fbpx
ಸಮಾಚಾರ

ಕಾರ್ಮಿಕರ ನೆರವಿಗೆ ನಿಂತ ಉಪೇಂದ್ರಗೆ ಕೈಜೋಡಿಸಿದ ಶಾಸ್ತ್ರೀ ನಟಿ ಮಾನ್ಯಾ

ಕನ್ನಡ ಚಿತ್ರರಂಗದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ಉಪೇಂದ್ರ ನಿರ್ಧರಿಸಿದ್ದಾರೆ. ಉಪೇಂದ್ರ ಅವರ ಈ ನಡೆಗೆ ಹಲವು ತಾರೆಯರೂ ಕೈ ಜೋಡಿಸಿದ್ದು, ಇದೀಗ ಅದೇ ಪಟ್ಟಿಗೆ ನಟಿ ಮಾನ್ಯ ಸೇರ್ಪಡೆಗೊಂಡಿದ್ದಾರೆ.

 

 

ಕೊರೋನಾದಿಂದಾಗಿ ಕನ್ನಡ ಸಿನಿ ಕಾರ್ಮಿಕರು ಹಾಗೂ ಕಲಾವಿದರು ಕಷ್ಟದಲ್ಲಿದ್ದಾರೆಂದು ತಿಳಿದ ಕೂಡಲೇ ಸಹಾಯ ಹಸ್ತ ಚಾಚಿದ್ದಾರೆ. ಉಪೇಂದ್ರ ಅವರನ್ನು ಸಂಪರ್ಕಿಸಿರುವ ನಟಿ ಸಿನಿ ಕಲಾವಿದರಿಗಾಗಿ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಸದ್ಯ ಅಮೇರಿಕಾದಲ್ಲಿ ನೆಲೆಸಿರುವ ನಟಿ ಮಾನ್ಯ, ಉಪೇಂದ್ರ ಅವರಿಗೆ ಒಂದು ಲಕ್ಷ ರೂಪಾಯಿ ಕಳುಹಿಸಿದ್ದಾರೆ. ಆ ಹಣದಲ್ಲಿ ಕಷ್ಟದಲ್ಲಿ ಇರುವವರಿಗೆ ದಿನಸಿ ಕಿಟ್ ವಿತರಿಸಲು ಉಪೇಂದ್ರರವರಲ್ಲಿ ನಟಿ ಮಾನ್ಯ ಕೋರಿದ್ದಾರೆ.

ಈ ವಿಚಾರವನ್ನು ಸ್ವತಃ ಉಪೇಂದ್ರ ಅವರೇ ಟ್ವಿಟರ್ ನಲ್ಲಿ ತಿಳಿಸಿದ್ದು ಮಾನ್ಯಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. “ಶಾಸ್ತ್ರಿ ಚಿತ್ರದ ನಾಯಕ ನಟಿ ಮಾನ್ಯ ಈಗ ಅಮೆರಿಕದಲ್ಲಿ ನೆಲೆಸಿದ್ದು ಇಲ್ಲಿನ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಒಂದು ಲಕ್ಷ ರುಪಾಯಿ ಕಳಿಸಿದ್ದಾರೆ. ಈ ಹಣದಿಂದ ದಿನಸಿ ಕಿಟ್ ಸದ್ಯದಲ್ಲೇ ವಿತರಿಸಿ ಅದರ ವಿವರ ತಿಳಿಸುತ್ತೇವೆ.” ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top