fbpx
ಸಮಾಚಾರ

2007ರ ವಿಶ್ವಕಪ್ ಹೀರೋ ಆರ್​.ಪಿ ಸಿಂಗ್ ತಂದೆ ಕೊರೊನಾಗೆ ಬಲಿ

ಕೋವಿಡ್ -19 ರ ಎರಡನೇ ಅಲೆ ದೇಶಾದ್ಯಂತ ಅಪಾರ ಜೀವಹಾನಿಯನ್ನು ಮಾಡಿದೆ. ಇಲ್ಲಿಯವರೆಗೆ, ಅನೇಕ ಕ್ರಿಕೆಟಿಗರು ಮತ್ತು ಇತರ ಕ್ರೀಡಾಪಟುಗಳು ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಅಂತಹಾ ಇನ್ನೊಂದು ಹೃದಯವಿದ್ರಾವಕ ಸುದ್ದಿ ಎಂದರೆ ಭಾರತದ ಮಾಜಿ ವೇಗದ ಬೌಲರ್ ಆರ್.ಪಿ.ಸಿಂಗ್ ಅವರ ತಂದೆ ಶಿವ ಪ್ರಸಾದ್ ಸಿಂಗ್ ಅವರು ಕೊರೋನಾವೈರಸ್ ಕಾರಣ ಬುಧವಾರ ನಿಧನರಾದರು.

 

 

ಆರ್.ಪಿ.ಸಿಂಗ್ ಅವರ ತಂದೆ ಶಿವಪ್ರಸಾದ್ ಸಿಂಗ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೇ 12 ರಂದು ಅವರು ಕೊನೆಯುಸಿರೆಳೆದಿದ್ದಾರೆ. ಆರ್.ಪಿ ಸಿಂಗ್ ಅವರು ತಮ್ಮ ತಂದೆಯ ಅನಾರೋಗ್ಯದಿಂದಾಗಿ ಐಪಿಎಲ್ 2021 ಅನ್ನು ಮಧ್ಯದಲ್ಲಿ ತೊರೆದಿದ್ದರು. ಅವರು ಈ ಪಂದ್ಯಾವಳಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ತನ್ನ ತಂದೆ ಕೋವಿಡ್ -19 ನಿಂದ ಬಳಲುತ್ತಿದ್ದರು ಎಂದು ಭಾರತ ದ ಮಾಜಿ ಕ್ರಿಕೆಟಿಗ ಸಾಮಾಜಿಕ ಮಾಧ್ಯಮದಲ್ಲಿ ಟಿಪ್ಪಣಿ ಹಂಚಿಕೊಂಡಿದ್ದಾರೆ. “ಇಂದು ನನ್ನ ತಂದೆ ಶಿವ ಪ್ರಸಾದ್ ಸಿಂಗ್ ಅವರ ನಿಧನವನ್ನು ನಾವು ಅತ್ಯಂತ ದುಃಖದಿಂದ ತಿಳಿಸುತ್ತೇವೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರು ಮೇ 12 ರಂದು ನಿಧನರಾದರು. ನನ್ನ ಪ್ರೀತಿಯ ತಂದೆಯ ಆತ್ಮಕ್ಕೆ ಶಾಂತಿ ಕೋರಿ ನೀವೆಲ್ಲರೂ ಪ್ರಾರ್ಥಿಸಿ ಎಂದು ನಾವು ನಿಮ್ಮನ್ನು ವಿನಂತಿಸುತ್ತೇವೆ. ಆರ್ ಐ ಪಿ ಪಾಪಾ’’ ಎಂದು ಆರ್.ಪಿ. ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top