fbpx
ಸಮಾಚಾರ

“ನಾನಿನ್ನೂ ಬದುಕಿದ್ದೀನಿ” ಸಾವಿನ ವದಂತಿಗೆ ‘ಶಕ್ತಿಮಾನ್’ ನಟ ಮುಕೇಶ್ ಆಕ್ರೋಶ

ತಮ್ಮ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಕಿರುತೆರೆಯ ‘ಶಕ್ತಿಮಾನ್’ ಧಾರಾವಾಹಿ ಖ್ಯಾತಿಯ ನಟ ಮುಕೇಶ್ ಖನ್ನಾ ಆಕ್ರೋಶ ಹೊರಹಾಕಿದ್ದಾರೆ. ಕೋವಿಡ್‍ ಸೋಂಕಿನಿಂದ ಬಳಲುತ್ತಿದ್ದ ನಟ ಮುಕೇಶ್ ಖನ್ನಾ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಮಂಗಳವಾರ ( ಮೇ.11) ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಸುದ್ದಿ ನಿಜ ಇರಬಹುದೆಂದು ಭಾವಿಸಿ ಸಾಕಷ್ಟು ಜನರು ಸಂತಾಪವನ್ನು ಸೂಚಿಸುತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾವಿನ ವದಂತಿಗೆ ಸ್ಪಷ್ಟನ ನೀಡಿರುವ ಮುಖೇಶ್ ಖನ್ನಾ, ಯಾರೊಬ್ಬರ ಜೀವನದ ಬಗ್ಗೆಯೂ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಸಬೇಡಿ, ಮೊದಲು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣವೇ ಹೊಣೆಯಾಗಲಿದೆ. ಇಂಥ ಮಾನಸಿಕ ಅಸ್ಥಿರವಾಗಿರುವ ಜನರಿಗೆ ಯಾವ ಚಿಕಿತ್ಸೆ ನೀಡಬೇಕು. ಅವರನ್ನು ಯಾರು ಶಿಕ್ಷಿಸುತ್ತಾರೆ. ಸಾಕು, ಈಗಲೇ ಜಾಸ್ತಿ ಆಗಿದೆ. ಇಂಥ ನಕಲಿ ಸುದ್ದಿಗಳನ್ನು ನಿಲ್ಲಿಸಿ’ ಕೋಪಗೊಂಡಿದ್ದಾರೆ.

“ನನಗೆ ಕರೊನಾ ಪಾಸಿಟಿವ್​ ಆಗಿಲ್ಲ. ಹಾಗೆಯೇ ನಾನು ಯಾವುದೇ ಕೋವಿಡ್​ ಸೆಂಟರ್​ಗೆ ಸಹ ದಾಖಲಾಗಿಲ್ಲ. ಆದರೂ ನಾನು ಸತ್ತಿದ್ದೇನೆ ಎಂಬ ಸುದ್ದಿ ಹರಡಿದೆ. ಹಲವರು ಫೋನ್​ ಮಾಡಿ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಏನೂ ಆಗಿಲ್ಲ. ನಾನು ಆರೋಗ್ಯವಾಗಿರುವುದಷ್ಟೇ ಅಲ್ಲ, ಸುರಕ್ಷಿತವಾಗಿದ್ದೇನೆ. ದಯವಿಟ್ಟು ನನ್ನ ಆರೋಗ್ಯದ ಬಗ್ಗೆ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top