fbpx
ಸಮಾಚಾರ

ಈ ಸಲದ ಬಿಗ್‍ಬಾಸ್ ವಿನ್ನರ್ ಯಾರೆಂದು ಬಹಿರಂಗಪಡಿಸಿದ ಕಿಚ್ಚ ಸುದೀಪ್

ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಭೀತಿಯಿಂದ ಹಾಗೂ ಲಾಕ್‌ಡೌನ್ ಮಾರ್ಗಸೂಚಿಗಳ ಅನುಗುಣವಾಗಿ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ. ಹೊರಜಗತ್ತಿನಲ್ಲಿ ಸಂಭವಿಸುತ್ತಿರುವ ಕೊರೊನಾ ಎರಡನೇ ಅಲೆಯ ಕರಾಳ ಅಧ್ಯಾಯ ಹಾಗೂ ಲಾಕ್‌ಡೌನ್ ಹೇರಿಕೆ ವಿಚಾರ ತಿಳಿದ ಕೂಡಲೆ ಎಲ್ಲಾ ಸ್ಪರ್ಧಿಗಳು ಆಘಾತಗೊಂಡರು.

 

 

‘ಬಿಗ್ ಬಾಸ್’ ಶೋ ಸ್ಥಗಿತವಾಗುತ್ತಿರುವ ವಿಷಯವನ್ನು ಕೇಳಿದ್ಮೇಲೆ ಸ್ಪರ್ಧಿಗಳೆಲ್ಲಾ ಕಣ್ಣೀರು ಹಾಕಿದರು. ಕೊನೆಯಲ್ಲಿ ನಾನುವು ಸುದೀಪ್ ಸರ್ ಜೊತೆಗೆ ಮಾತನಾಡಬೇಕು ಎಂದು ಸ್ಪರ್ಧಿಗಳು ಕೇಳಿದ್ದಾರೆ. ಆಗ ಕಿಚ್ಚಾ ಸುದೀಪ್ ಸ್ಪರ್ಧಿಗಳಿಗೆ ಕಿವಿಮಾತು ಹೇಳಿ ಸಂದೇಶವನ್ನು ನೀಡಿದರು.

 

 

ಎಲ್ಲಾರಿಗೂ ಈ ಕಿಚ್ಚನ ನಮಸ್ಕಾರಗಳು…ಕೆಲವು ವಾರಗಳ ದಿಂದ ನನಗೆ ಬರಲು ಸಾಧ್ಯವಾಗಿರಲಿಲ್ಲ. ಕೊರೊನಾ ಇರುವ ಕಾರಣದಿಂದಾಗಿ ಕಾರ್ಯಕ್ರಮವನ್ನು ವಿಕೇಂಡ್‍ನಲ್ಲಿ ನಡೆಸಲು ಸಾಧ್ಯಗುತ್ತಿರಲಿಲ್ಲ. ಈ ಬಿಗ್‍ಬಾಸ್ ಜರ್ನಿ ನಿಮಗೆ ಒಳ್ಳೆಯದ್ದು ಮಾಡಲಿ. ಬಿಗ್‍ಬಾಸ್ ಅರ್ಧಕ್ಕೆ ಮುಗಿಯುತ್ತಿರುವುದಕ್ಕೆ ನನಗೆ ತುಂಬಾ ದುಃಖವಾಗುತ್ತಿದೆ. ನೀವೆಲ್ಲರೂ ಬಿಗ್‍ಬಾಸ್ ವಿನ್ನರ್ ಆಗಿದ್ದೀರಾ…. ನಾನು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾ ಸಮಾಧಾನದ ಕೆಲವು ಹೀತ ನುಡಿಗಳನ್ನು ಸುದೀಪ್ ಬೇಸರದಿಂದ ಸ್ಪರ್ಧಿಗಳಿಗೆ ಹೇಳಿದ್ದಾರೆ.

ಸುದೀಪ್ ಅವರ ಕೆಲವು ಮಾತುಗಳು ಸ್ಪರ್ಧಿಗಳಿಗೆ ಕೊಂಚ ಸಮಾಧಾನವನ್ನುಂಟು ಮಾಡಿದೆ. ಬಿಗ್‍ಬಾಸ್‍ನಲ್ಲಿ ಸ್ಪರ್ಧಿಗಳ ಜರ್ನಿ ಅಂತ್ಯವಾಗಿರಬಹುದು ಆದರೆ ಸಾಧನೆಯ ಹಾದಿ ಇನ್ನು ಇದೆ. ಬಿಗ್‍ಬಾಸ್ ನಂತರದ ಜೀವನ ಹೇಗಿರಲಿದೆ ಎನ್ನುವುದು ಸ್ಪರ್ಧಿಗಳ ಮುಂದೆ ಇರುವ ದೊಡ್ಡ ಪ್ರಶ್ನೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top