fbpx
ಸಮಾಚಾರ

ದೇಶದ ಗಮನ ಸೆಳೆದಿದ್ದ ‘ಬಾಬಾ ಕಾ ಡಾಬಾ’ ಮಾಲೀಕ ಆತ್ಮಹತ್ಯೆಗೆ ಪ್ರಯತ್ನ: ಆಸ್ಪತ್ರೆಗೆ ದಾಖಲು

ಯೂಟ್ಯೂಬ್​ ಮೂಲಕ ಹೆಸರು ಗಳಿಸಿದ ‘ಬಾಬಾ ಕಾ ಡಾಬಾ’ ಮಾಲೀಕ ಕಾಂತ ಪ್ರಸಾದ್​ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಗಂಭೀರಗೊಂಡಿರುವ ಅವರನ್ನು ದೆಹಲಿಯ ಸಫ್ದರ್​ಜಂಗ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರವಾರ 11.15ಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರ ರಕ್ಷಣೆಗೆ ಮುಂದಾಗಿದ್ದಾರೆ.

80 ವರ್ಷದ ಕಾಂತ ಪ್ರಸಾದ್ ಅವರು ತಮ್ಮ ಆರ್ಥಿಕ ಸ್ಥಿತಿಯಿಂದ ತೀವ್ರ ನೊಂದುಕೊಂಡು ನಿದ್ದೆ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ. ಕಾಂತ ಪ್ರಸಾದ್ ಭಾರಿ ಸಾಲದಲ್ಲಿ ಮುಳುಗಿದ್ದಾರೆ. ಅದನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಹೊಸದಾಗಿ ಆರಂಭಿಸಿದ ರೆಸ್ಟೋರೆಂಟ್ ಮುಚ್ಚಿದ ಬಳಿಕ ಕಾಂತ ಪ್ರಸಾದ್ ಕಳೆದೊಂದು ವಾರದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಜೊತೆಗೆ ರೆಸ್ಟೋರೆಂಟ್ ಸಾಲದ ಬಾಧೆ ಕೂಡ ಹೊರೆಯಾಗುತ್ತಿದೆ. ಹೀಗಾಗಿ ಆತ್ಯಹತ್ಯೆಗೆ ಯತ್ನಿಸಿದ್ದಾರೆ ಎಂದು ಕಾಂತ ಪ್ರಸಾದ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೊಸದಿಲ್ಲಿಯಲ್ಲಿ ತಾವು ಆರಂಭಿಸಿದ ರೆಸ್ಟೋರೆಂಟ್‌ನ ಬಾಡಿಗೆ ಒಂದು ಲಕ್ಷ ರೂಪಾಯಿ ಇದೆ. ಆದರೆ ತಿಂಗಳಿಗೆ ಪ್ರಸ್ತುತ ಸುಮಾರು 30,000 ರೂ ಆದಾಯ ಬರುತ್ತಿದೆ. ಹೀಗಾಗಿ ಸಾಲ ತೀರಿಸುವುದರ ಬಗ್ಗೆ ಕಾಂತ ಪ್ರಸಾದ್ ತೀವ್ರ ಚಿಂತೆಗೆ ಒಳಗಾಗಿದ್ದರು ಎಂದು ಅವರ ಪತ್ನಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top