fbpx
ಸಮಾಚಾರ

ತೆರೆಗೆ ಬರಲಿದೆ ‘ದಿ ವಾಲ್’ ರಾಹುಲ್ ದ್ರಾವಿಡ್ ಬಯೋಪಿಕ್: ಚಿತ್ರದಲ್ಲಿ ದ್ರಾವಿಡ್ ಪಾತ್ರ ಮಾಡೋ ಹೀರೊ ಯಾರು ಗೊತ್ತಾ?

ಇತ್ತೀಚಿಗಂತೂ ಸಿನಿಮಾ ರಂಗದಲ್ಲಿ ಕೇವಲ ಬಯೋಪಿಕ್ ಗಳದೇ ಕಾರುಬಾರು. ಹೌದು, ಒಂದಾದಮೇಲೆ ಒಂದರಂತೆ ಶ್ರೇಷ್ಠ ಸಾಧನೆಗೈದ ವ್ಯಕ್ತಿಗಳ ಜೀವನ ಚಿತ್ರವನ್ನು ತೆರೆಯೇ ಮೇಲೆ ತರುವ ಪ್ರಯತ್ನ ಎಲ್ಲಾ ಚಿತ್ರರಂಗದಲ್ಲೂ ಭರದಿಂದ ಸಾಗುತ್ತಿದೆ. ಕಪಿಲ್ ದೇವ್, ಸಚಿನ್, ಧೋನಿಯಿಂದ ಹಿಡಿದು ಮೊನ್ನೆಯ ಮಿಥಾಲಿ ರಾಜ್ ಅವರೆಗೂ ಖ್ಯಾತ ಕ್ರಿಕೆಟಿಗರ ಬಯೋಪಿಕ್ ಚಿತ್ರಗಳು ಬಂದಿವೆ. ಇದೀಗ ಈ ಸಲಿಗೆ ರಾಹುಲ್ ದ್ರಾವಿಡ್ ಅವರ ಚಿತ್ರ ಕೂಡ ಸೇರ್ಪಡೆಗೊಳ್ಳುತ್ತಿದೆ.

ತೆಲುಗು ನಿರ್ದೇಶಕ ಅಜಯ್ ಭೂಪತಿ ರಾಹುಲ್​ ದ್ರಾವಿಡ್​ ಸಿನಿಮಾಗೆ ಕಥೆ ರೆಡಿ ಮಾಡಿದ್ದು, ಈಗಾಗಲೇ ರಾಹುಲ್​ ದ್ರಾವಿಡ್​ಗೆ ಕಥೆಯನ್ನ ಹೇಳಿ ಇಂಪ್ರೆಸ್​ ಕೂಡ ಮಾಡಿದ್ದಾರಂತೆ. ದ್ರಾವಿಡ್​ ತಮ್ಮ ಬಯೋಪಿಕ್​ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಪಾತ್ರದಲ್ಲಿ ನಟ ಸಿದ್ಧಾರ್ಥ್ ನಟಿಸುತ್ತಿದ್ದಾರೆ. ಸಿದ್ಧಾರ್ಥ್ ಕೂಡ ಈ ಕತೆ ಒಪ್ಪಿದ್ದಾರೆ ಎಂಬುದು ಸದ್ಯದ ಮಾಹಿತಿ.

 

 

ಹೀರೋ ಸಿದ್ಧಾರ್ಥ್‌ಗೆ ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ದಕ್ಷಿಣದಲ್ಲೂ ಉತ್ತಮ ಹೆಸರಿದೆ. ಅಲ್ಲದೆ, ದ್ರಾವಿಡ್ ಪಾತ್ರವನ್ನು ಸ್ವಾಭಾವಿಕವಾಗಿ ನಿರ್ವಹಿಸುವ ಸಾಮರ್ಥ್ಯ ಸಿದ್ದಾರ್ಥ್​ಗೆ ಇದೆ ಎಂದು ಚಿತ್ರತಂಡ ಭಾವಿಸಿದೆ. ಹಾಗಾಗಿ ಸಿದ್ಧಾರ್ಥ್‌ ಅವರನ್ನು ಸಂಪರ್ಕಿಸಿ ಕಥೆ ವಿವರಿಸಿದ್ದು, ಇದಕ್ಕೆ ಅವರು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡ, ತೆಲುಗು, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗುತ್ತಿದೆ. ಅಂದುಕೊಂಡಂತೆ ಎಲ್ಲವೂ ಆದರೆ, ಸದ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಬಯೋಗ್ರಫಿ ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದೆ.

ಇನ್ನು ಸಿದ್ಧಾರ್ಥ್ ಪ್ರಸ್ತುತ ಶರ್ವಾನಂದ್ ಅವರೊಂದಿಗೆ ‘ಮಹಾಸಮುದ್ರಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಆರ್‌ಎಕ್ಸ್ 100’ ಫೇಮ್ ಅಜಯ್ ಭೂಪತಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಮುಗಿದ ನಂತರ ದ್ರಾವಿಡ್ ಬಯೋಪಿಕ್ ಸೆಟ್ಟೇರುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top