fbpx
ಸಮಾಚಾರ

ಈಡೇರದೆ ಉಳಿದ ಸಂಚಾರಿ ವಿಜಯ್ ಆಸೆಗಳನ್ನು ಪೂರೈಸಲು ಹೊರಟ ‘ಉಸಿರು’ ಬಳಗ

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜನ ಆಮ್ಲಜನಕದ ಕೊರತೆಯಿಂದ ಒದ್ದಾಡುತ್ತಿರಬೇಕಾದರೆ ಚಿತ್ರ ಸಾಹಿತಿ ಕವಿರಾಜ್ ಹಾಗೂ ಸಮಾನ ಮನಸ್ಕ ಗೆಳೆಯರು ಸೇರಿ ‘ಉಸಿರು’ ಬಳಗ ಕಟ್ಟಿಕೊಂಡು ಜನರ ಹಾಗೂ ಕೋವಿಡ್ ರೋಗಿಗಳ ನೆರವಿಗೆ ನಿಂತರು. ಸೇವೆ ಮಾಡಬೇಕೆಂಬ ಸ್ವಯಂ ಪ್ರೇರಣೆಯಿಂದ ಸಂಚಾರಿ ವಿಜಯ್ ‘ಉಸಿರು’ ಬಳಗ ಸೇರಿಕೊಂಡು ಹಲವರಿಗೆ ಸಹಾಯ ಮಾಡಿದ್ದರು. ಒಬ್ಬ ಮಾನವೀಯ ವ್ಯಕ್ತಿಯಾಗಿ ‘ಉಸಿರು’ ಬಳಗದಲ್ಲಿ ಗುರುತಿಸಿಕೊಂಡಿದ್ದರು.

 

 

ಆದರೆ ಅದೆಲ್ಲ ಕಾರ್ಯರೂಪಕ್ಕೆ ಬರುವ ಮುನ್ನವೇ ದುರಾದೃಷ್ಟವಶಾತ್ ಅಪಘಾತಕ್ಕೀಡಾಗಿ ಸಂಚಾರಿ ವಿಜಯ್ ಬಾರದ ಲೋಕಕ್ಕೆ ತೆರಳಿಬಿಟ್ಟರು. ಇದೀಗ ಸಂಚಾರಿ ವಿಜಯ್ ಅವರ ಅಪೂರ್ಣ ಆಸೆಗಳನ್ನು ಪೂರೈಸಲು ‘ಉಸಿರು’ ಬಳಗ ಮುಂದಾಗಿದೆ. ಈ ಬಗ್ಗೆ ನಿರ್ದೇಶಕಿ ಕವಿತಾ ಲಂಕೇಶ್ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಕವಿತಾ ಲಂಕೇಶ್ ಪೋಸ್ಟ್ ಈ ರೀತಿ ಇದೆ:
”ಬಂಡೀಪುರ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸುವ ವಿಚಾರವಾಗಿ ವಿಜಯ್ ನಮ್ಮ ಬಳಗದಲ್ಲಿ ಬಹಳ ಆಸಕ್ತಿ ವಹಿಸಿದ್ದರು. ಅಷ್ಟೇ ಅಲ್ಲದೆ ಗುಲ್ಬರ್ಗಾ ಜಿಲ್ಲೆಯ ಕಡುಬಡತನದ ಕುಟುಂಬವೊಂದರ ನಾಲ್ಕು ವರ್ಷದ ಹೆಣ್ಣು ಮಗುವೊಂದರ ಹೃದಯ ಚಿಕಿತ್ಸೆಗೆ ನೆರವಾಗಲು ವಿಜಯ್ ಮುಂದಾಗಿದ್ದರು. ಸದ್ಯ ತಿಳಿದು ಬಂದ ಮಾಹಿತಿಯಂತೆ ಆ ಮಗು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದೆ. ಸಂಪೂರ್ಣ ಸುಧಾರಿಸಿದ ನಂತರ ಈ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಇವೆರಡೂ ಕಾರ್ಯಗಳನ್ನು ಪೂರೈಸುವ ಮೂಲಕ ವಿಜಯ್ ಅವರಿಗೆ ಗೌರವ ನಮನ ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ವಿಜಯ್ ಸಾರ್ ನಿಮ್ಮೊಂದಿಗೆ ಸದಾ ನಮ್ಮ ಉಸಿರು” ಎಂದು ಫೇಸ್‌ಬುಕ್‌ನಲ್ಲಿ ಕವಿತಾ ಲಂಕೇಶ್ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top