fbpx
ಸಮಾಚಾರ

ಸಂಚಾರಿ ವಿಜಯ್ ಗೆ ಅವಮಾನ: ವಾಣಿಜ್ಯ ಮಂಡಳಿ ವಿರುದ್ಧ ವೀರಶೈವ ಲಿಂಗಾಯತ ವೇದಿಕೆ ಆಕ್ರೋಶ

ಕೊರೋನಾ ಸಮಯದಲ್ಲಿ ಸಾವನ್ನಪ್ಪಿದ ಸಿನಿಮಾ ರಂಗದ ಗಣ್ಯರಿಗೆ ಸದಸ್ಯರಿಗೆ ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಶ್ರದ್ಧಾಂಜಲಿ ಸಲ್ಲಿಸಿತು. ಫಿಲ್ಮ್ ಚೇಂಬರ್ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ್ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಆದರೆ ಈ ವೇಳೆ ಇತ್ತಿಚೆಗಷ್ಟೇ ಇಹಲೋಕ ತ್ಯಜಿಸಿದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅವರ್ ಫೋಟೋವನ್ನ ಅಗಲಿದವರ ಸಾಲಿನಲ್ಲಿ ಇಡುವುದಾಗಲೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಲೀ ಮಾಡಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಈ ಬಗ್ಗೆ ವೀರಶೈವ ಲಿಂಗಾಯತ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಪತ್ರ ಬರದಿರುವ ವೀರಶೈವ ಲಿಂಗಾಯತ ಯುವ ವೇದಿಕೆ ವಾಣಿಜ್ಯ ಮಂಡಳಿಯ ಈ ನಡೆಯನ್ನು ಉಗ್ರವಾಗಿ ಖಂಡಿಸಿದೆ.

 

 

ವೀರಶೈವ ಲಿಂಗಾಯತ ಯುವ ವೇದಿಕೆ ಪತ್ರ ಈ ರೀತಿ ಇದೆ:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಡೆದ ಚಿತ್ರರಂಗದ ಗಣ್ಯರಿಗೆ ಶ್ರದ್ಧಾಂಜಲಿ ಸಭೆ ಯನ್ನು ತಾವು ಮಾಡಿರುವುದು ಬಹಳ ಒಳ್ಳೆಯ ಕೆಲಸವೇ ಸರಿ, ಆದರೆ ಈ ಶ್ರದ್ಧಾಂಜಲಿ ಸಭೆಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಸಾವನ್ನಪ್ಪಿದ ಯುವನಾಯಕ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ ರವರ ಭಾವಚಿತ್ರವನ್ನು ಇಡಲು ತಾವು ತೋರಿಸಿರುವ ನಿರಾಸಕ್ತಿ ಇಡೀ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿರುತ್ತದೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಈ ನಡೆಯನ್ನು ವೀರಶೈವ ಲಿಂಗಾಯತ ಯುವ ವೇದಿಕೆ ಉಗ್ರವಾಗಿ ಖಂಡಿಸುತ್ತದೆ.

ಸಾವಿನಲ್ಲೂ ಜಾತಿ ಹುಡುಕುವ ಕೆಲಸವನ್ನು ಮಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಧಿಕ್ಕಾರವಿರಲಿ. ಈ ಕೂಡಲೇ ಎಚ್ಚೆತ್ತುಕೊಂಡು ಯುವ ನಾಯಕ ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಸಂಚಾರಿ ವಿಜಯರವರಿಗೆ ತೋರಿರುವ ಅಸಡ್ಡೆಯನ್ನು ತಿದ್ದಿಕೊಂಡು ಸರಿಪಡಿಸಬೇಕೆಂದು ಆಗ್ರಹಿಸುತ್ತೇವೆ.

ಇನ್ನು ಮುಂದಾದರೂ ಎಲ್ಲರನ್ನೂ ಸರಿಸಮವಾಗಿ ಕಾಣುವ ಬುದ್ಧಿಯನ್ನು ವಿಶ್ವಗುರು ಬಸವಣ್ಣನವರು ವಾಣಿಜ್ಯ ಮಂಡಳಿಯ ಆಡಳಿತ ನಡೆಸುವ ಪದಾಧಿಕಾರಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top