fbpx
ಸಮಾಚಾರ

ಗೆಳೆಯ ಸಂಚಾರಿ ವಿಜಯ್​ ಅಗಲಿಕೆ ನೋವಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ನೀನಾಸಂ ಸತೀಶ್​

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಿಧನರಾಗಿ 5 ದಿನ ಕಳೆದಿದ್ದರೂ, ಅವರ ನೆನಪು ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಸದ್ಯ ಗೆಳೆಯನ ಅಗಲಿಕೆಯಿಂದ ಬಹಳ ದುಃಖದಲ್ಲಿರುವ ನಟ ನೀನಾಸಂ ಸತೀಶ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾರೆ.

 

 

ಜೂನ್​ 20 ಸತೀಶ್​ ಜನ್ಮದಿನ. ಪ್ರತಿ ವರ್ಷ ಅವರು ಅಭಿಮಾನಿಗಳ ಜತೆ ಸೇರಿ ಕೇಕ್​ ಕತ್ತರಿಸುತ್ತಿದ್ದರು. ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದರೆ, ಸಂಚಾರಿ ವಿಜಯ್​ ಮೃತಪಟ್ಟ ನೋವನ್ನು ಸತೀಶ್​ಗೆ ಮರೆಯೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನ್ಮದಿನ ಆಚರಿಸಿಕೊಳ್ಳಲೇ ಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಗೆಳೆಯರೇ ಇದೇ 20 ನನ್ನ ಹುಟ್ಟು ಹಬ್ಬ. ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರುವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್ ಟೀಸರ್ ಕೂಡ ಮುಂದೂಡಿದ್ದೇವೆ ಥ್ಯಾಂಕ್ ಯೂ’ ಎಂದು ಬರೆದುಕೊಂಡಿದ್ದಾರೆ.

ಸತೀಶ್ ಹಾಗೂ ಸಂಚಾರಿ ವಿಜಯ್ ಒಟ್ಟಿಗೆ ಸೇರಿ ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಕಾರ್ಯಕ್ಕಿಳಿದಿದ್ದರು. ವಿಜಯ್ ಅಪಘಾತ ಹಿಂದಿನ ದಿನವೂ ಸಹ ಸತೀಶ್ ಜೊತೆ ಸೇರಿ ದಿನಸಿ ವಿತರಣೆ ಮಾಡಿದ್ದರು. ದಿನಸಿ ಕಿಟ್‌ಗಳನ್ನು ತಯಾರು ಮಾಡುತ್ತಿರುವ ವಿಡಿಯೋವನ್ನು ಸತೀಶ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ವಿಜಯ್ ಸಹ ಸತೀಶ್‌ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದರು. ಆದರೆ ವಿಧಿ ಈ ಇಬ್ಬರು ಗೆಳೆಯರನ್ನು ಬೇರೆ ಮಾಡಿಬಿಟ್ಟಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top