fbpx
ಸಮಾಚಾರ

ಸರಳತೆಯ ಸಾಧಕಿ ಸುಧಾಮೂರ್ತಿ ಅವರಿಗೆ ಕನ್ನಡದ ಈ ನಟ ಫೆವರೇಟ್

ಲೇಖಕಿ ಮತ್ತು ಸಮಾಜಸೇವಕಿಯಾಗಿರುವ ಶ್ರೀಮತಿ ಸುಧಾ ಮೂರ್ತಿ ಅವರು ತಮ್ಮ ಮಾತೃ ಹೃದಯದಲ್ಲಿರುವ ಅಪಾರ ಪ್ರೀತಿಯನ್ನು ಬಡವರಿಗೆ, ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ಹಂಚುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನು ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ಹೇಳೋ ಆವಶ್ಯಕತನೆ ಇಲ್ಲ. ಆದರೆ ಅವರ ಬಗ್ಗೆ ಹೆಚ್ಚು ಜನರಿಗೆ ತಿಳಿಯದೇ ಇರುವ ವಿಷಯವೊಂದಿದೆ. ಅದೇನಂದ್ರೆ ಸುಧಾಮೂರ್ತಿಯವರು ಸಿನೆಮಾಗಳ ಬಹಳ ದೊಡ್ಡ ಅಭಿಮಾನಿ.

 

 

ಸುಧಾ ಮೂರ್ತಿ ಅವರು ಬಹುತೇಕ ಕನ್ನಡ ಸಿನಿಮಾಗಳನ್ನು ನೋಡುತ್ತಾರಂತೆ. ಮನೆಯಲ್ಲಿ ಸಿನಿಮಾ ನೋಡುವುದಕ್ಕಿಂತ ಥಿಯೇಟರ್ ನಲ್ಲಿ ವೀಕ್ಷಿಸುವುದು ಬಹಳ ಇಷ್ಟವಂತೆ. ಇನ್ನು ಕನ್ನಡ ನಟರುಗಳಲ್ಲಿ ಸುಧಾ ಮೂರ್ತಿ ಅವರಿಗೆ ರಕ್ಷಿತ್ ಶೆಟ್ಟಿ ನೆಚ್ಚಿನ ನಟನಂತೆ. ಹೀಗಂತ ಸ್ವತಃ ಸುಧಾ ಮೂರ್ತಿ ಅವರೇ ವೆಬ್ ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

“ನಂಗೆ ಥಿಯೇಟರ್‌ನಲ್ಲಿ ಸಿನೆಮಾ ನೋಡೋದಂದ್ರೆ ತುಂಬಾ ಇಷ್ಟ. ಮನೆಯಲ್ಲಿ ನಾನು ಸಿನೆಮಾ ನೋಡೋದಕ್ಕೆ ಇಷ್ಟ ಪಡಲ್ಲ. ಸಸ್ಪೆನ್ಸ್- ಥ್ರಿಲ್ಲರ್ ದೃಶ್ಯಗಳನ್ನು ನೋಡುತ್ತಿರುವಾಗ ಯಾರಾದ್ರೂ ನಡುವೆ ಬಂದು ತೊಂದರೆ ಕೊಡೋದು ಇಷ್ಟ ಆಗಲ್ಲ. ಥಿಯೇಟರ್‌ನಲ್ಲಿ ಆ ಸಮಸ್ಯೆ ಇರಲ್ಲ. ಪ್ರತಿದಿನ ಒಂದು ಪುಸ್ತಕ ಓದುವ ಅಥವಾ ಸಿನೆಮಾ ನೋಡುವ ಹವ್ಯಾಸ ಬೆಳೆಸಿಕೊಂಡಿದ್ದೇನೆ” ಎಂದು ಸುಧಾ ಮೂರ್ತಿ ಹೇಳಿದ್ದಾರೆ.

“ನಾನು ಕನ್ನಡ ಹಾಗೂ ಇತರೆ ಎಲ್ಲಾ ಭಾಷೆಗಳ ಸಿನೆಮಾಗಳನ್ನು ನೋಡುತ್ತೇನೆ. ಯೋಗರಾಜ್ ಭಟ್ರ ದನ ಕಾಯೋನು ಸಿನೆಮಾ ನೋಡಿದೆ. ಅದರಲ್ಲಿ ಕೊಟ್ಟ ಸಂದೇಶ ಹಾಗೂ ಕಥೆ ಬಹಳ ಇಷ್ಟವಾಯಿತು. ಪ್ರಕಾಶ್ ರಾಜ್‌ ಅವರ ‘ಇದೊಳ್ಳೆ‌ ರಾಮಾಯಣ’ ಚಿತ್ರ ನೋಡಿದೆ. ಚಿತ್ರ ಅದ್ಭುತವಾಗಿತ್ತು. ಅವರ ‘ನಾನು ನನ್ನ ಕನಸು’, ‘ಒಗ್ಗರಣೆ ಡಬ್ಬಿ’ ಸಿನೆಮಾ ಕೂಡಾ ನೋಡಿದ್ದೇನೆ. ಅವು ಕೂಡ ಅಷ್ಟೇ ಚೆನ್ನಾಗಿದ್ದವು.” ಎನ್ನುತ್ತಾರೆ ಸುಧಾಮೂರ್ತಿ‌.

ರಕ್ಷಿತ್ ಶೆಟ್ಟಿ ಅಂದ್ರೆ ಅಚ್ಚುಮೆಚ್ಚು:
“ನನಗೆ ನಟರಲ್ಲಿ ರಕ್ಷಿತ್​ ಶೆಟ್ಟಿ ಅಂದ್ರೆ ಇಷ್ಟ. ಅದರಲ್ಲೂ ಅವರ ಸಿಂಪಲ್​ ಆಗಿ ಒಂದು ಲವ್​ ಸ್ಟೋರಿ ಸಿನಿಮಾ ನೋಡಿ ಬಹಳ ಇಷ್ಟಪಟ್ಟೆ. ಅದರ ಕಥೆ, ಡೈಲಾಗ್ಸ್​, ಸಂಗೀತ ಹಾಗೇ ಸಾಹಿತ್ಯ ತುಂಬಾ ಚೆನ್ನಾಗಿದೆ. “ಅಂತಾರೆ ಸುಧಾ ಮೂರ್ತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top