fbpx
ಸಮಾಚಾರ

“ಮುಖಕ್ಕೆ ಎಂಜಲು ಹಚ್ಚಿಕೊಳ್ಳುತ್ತೇನೆ” ವಿಚಿತ್ರ ಸೀಕ್ರೆಟ್ ಬಿಚ್ಚಿಟ್ಟ ನಟಿ ತಮನ್ನಾ!

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಸೌಂದರ್ಯದ ಗುಟ್ಟನ್ನು ಹೇಳಿದ್ದಾರೆ. ಆದರೆ ಕೋಮಲವಾದ ತಮ್ಮ ತ್ವಚೆಯ ಸೀಕ್ರೆಟ್‍ಅನ್ನು ಹೇಳಿ ಅಭಿಮಾನಿಗಳು ಆಶ್ಚರ್ಯವ್ಯಕ್ತಪಡಿಸಿದ್ದಾರೆ. ನಟಿ ತಮನ್ನಾ ಮುಖಕ್ಕೆ ತಮ್ಮದೇ ಎಂಜಲನ್ನು ಹಚ್ಚಿಕೊಳ್ಳುತ್ತಾರಂತೆ? ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ಎಲ್ಲರಂತೆ ತಮನ್ನಾಗೂ ಕೂಡ ಮೊಡವೆ ಸಮಸ್ಯೆ ಇತ್ತಂತೆ. ಅದನ್ನು ಹೋಗಲಾಡಿಸಲು ತುಂಬ ರೀತಿಯ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಯಾವುದೂ ಫಲಪ್ರದವಾಗದ ಹಿನ್ನಲೆಯಲ್ಲಿ ಇಂಥದ್ದೊಂದು ಐಡಿಯಾ ಮಾಡಿದ್ರಂತೆ! ‘ನನ್ನ ಮುಖಕ್ಕೆ ನಾನು ಹಚ್ಚಿದ ಅತೀ ವಿಚಿತ್ರ ವಸ್ತು ಎಂದರೆ ಅದು ನನ್ನ ಎಂಜಲು! ಮುಖ್ಯವಾಗಿ ಬೆಳಗಿನಜಾವದ ಸಮಯದಲ್ಲಿ ಬರುವ ಎಂಜಲನ್ನು ಮುಖಕ್ಕೆ ಹಚ್ಚಿಕೊಂಡಿದ್ದೇನೆ. ಕಾರಣ, ಅದಕ್ಕೆ ಮೊಡವೆಗಳನ್ನು ಒಣಗಿಸುವ ಸಾಮರ್ಥ್ಯವಿದೆ! ಈ ಬಗ್ಗೆ ಕೇಳುವುದಕ್ಕೆ ನಿಮಗೆಲ್ಲ ತುಂಬ ವಿಚಿತ್ರ ಎನಿಸಬಹುದು. ಆದ್ರೆ, ಇದು ತುಂಬ ಪರಿಣಾಮಕಾರಿಯಾಗಿದೆ’ ಎಂದು ಮಿಲ್ಕಿ ಬ್ಯೂಟಿ ಹೇಳಿಕೊಂಡಿದ್ದಾರೆ!

ತಮನ್ನಾಳ ಸೌಂದರ್ಯದ ಗುಟ್ಟನ್ನು ಕೇಳಿದ ಬಹುತೇಕರು ಇದನ್ನು ನಂಬುವುದಕ್ಕೂ ಸಿದ್ಧರಿಲ್ಲ. ಆದರೆ, ಇನ್ನೂ ಕೆಲವರು, ಇದು ನಿಜವಿದ್ದರೂ ಇರಬಹುದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ ಮಿಲ್ಕಿ ಬ್ಯೂಟಿಯ ಸೌಂದರ್ಯ ರಹಸ್ಯವನ್ನು ತಿಳಿದ ಅನೇಕ ಅಭಿಮಾನಿಗಳು ಹೀಗೂ ನಮ್ಮ ಸೌಂದರ್ಯ ಕಾಪಡಿಕೊಳ್ಳಬಹುದಾ ಎಂದು ಹೇಳುತ್ತಿದ್ದಾರೆ. ತಮನ್ನಾ ಹೇಳಿದ ಮಾತನ್ನು ನಂಬುವುದು ಅಥವಾ ನಂಬದಿರುವುದು ಅವರ ಅಭಿಮಾನಿಗಳ ಆಯ್ಕೆಗೆ ಬಿಟ್ಟ ವಿಚಾರ. ಆದರೆ ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top