fbpx
ಸಮಾಚಾರ

ಜೂನ್ 21: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 21, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಜ್ಯೇಷ್ಠ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಏಕಾದಶೀ 1:31 pm
ನಕ್ಷತ್ರ : ಸ್ವಾತಿ 4:45 pm
ಯೋಗ : ಶಿವ 5:33 pm
ಕರಣ : ವಿಷ್ಟಿ 1:31 pm ಬಾವ 11:58 pm

Time to be Avoided
ರಾಹುಕಾಲ : 7:34 am – 9:09 am
ಯಮಗಂಡ : 10:45 am – 12:21 pm
ದುರ್ಮುಹುರ್ತ : 12:47 pm – 1:38 pm, 3:20 pm – 4:11 pm
ವಿಷ : 9:48 pm – 11:14 pm
ಗುಳಿಕ : 1:57 pm – 3:32 pm

Good Time to be Used
ಅಮೃತಕಾಲ : 8:43 am – 10:10 am
ಅಭಿಜಿತ್ : 11:55 am – 12:47 pm

Other Data
ಸೂರ್ಯೋದಯ : 5:54 am
ಸುರ್ಯಾಸ್ತಮಯ : 6:48 pm
ರವಿರಾಶಿ : ಮಿಥುನ
ಚಂದ್ರರಾಶಿ : ತುಲ

 

 

 

ಕೆಲಸದ ಸ್ಥಳದಲ್ಲಿ ಹೊಸದಾದ ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳು ನಿಮಗೆ ಸಂತೋಷವನ್ನುಂಟು ಮಾಡುವರು. ನಿಮ್ಮ ವೈಯಕ್ತಿಕ ಆರೋಗ್ಯದ ಕಡೆ ಗಮನ ಕೊಡಿ., ಸಾಲ ಬಾಧೆಯ ತೀವ್ರತೆ ಕಡಿಮೆ ಆಗುವುದು.

 

ಅನೇಕ ದಿನಗಳಿಂದ ಕಾಡುತ್ತಿರುವ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮಗೆ ಬರಬೇಕಾದ ಹಣ ಶೀಘ್ರದಲ್ಲಿಯೇ ಕೈಸೇರುವ ಸಾಧ್ಯತೆ ಇರುತ್ತದೆ, ಮನಸ್ಸಿನ ಒತ್ತಡವನ್ನು ಒಬ್ಬರೇ ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ನಿಮ್ಮ ಆತ್ಮೀಯ ಸ್ನೇಹಿತರ ಸಂಗಡ ವಿಚಾರಗಳನ್ನು ಹಂಚಿಕೊಳ್ಳಿ.

 

ನೀವು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಉತ್ತರ ದೊರೆಯುವುದು, ನಿಮ್ಮಿಂದ ಕೆಲಸ ಕಾರ್ಯಗಳನ್ನು ಮಾಡಿಸಿಯೇ ನಿಮಗೆ ಹಣಕಾಸಿನ ಸಹಕಾರ ನೀಡುವರು. ಹಾಗಾಗಿ ಉದಾಸೀನ ತೋರದೆ ಕೆಲಸ ಮಾಡಿ, ಸಂಬಂಧಿಗಳ ಬಳಿ ಹಳೆಯ ವಿಚಾರಗಳನ್ನು ಕೆದಕಲು ಪ್ರಯತ್ನಿಸದಿರಿ.

 

ವ್ಯಾಪಕ ಬುದ್ಧಿ ಚಾತುರ್ಯದಿಂದ ನಿಮ್ಮ ಬಂಧುಬಾಂಧವರೇ ನಿಮ್ಮ ಸನಿಹಕ್ಕೆ ಬರುವರು. ಆದರೆ ಕುಟಿಲ ಯೋಜನೆಗಳಿಗೆ ಬಲಿಯಾಗದಿರಿ. ಬಹುದಿನದ ನಿಮ್ಮ ಕಾರ್ಯ ಕೈಗೂಡುವುದು. ಅದಕ್ಕಾಗಿ ಹಣವೂ ಖರ್ಚಾಗುವುದು.

 

 

ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತ ಕೂರದಿರಿ. ಗುರುವಿನ ಮಂತ್ರ ಪಠಿಸಿ. ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ. ಮನಸ್ಸಿಗೆ ಶಾಂತಿ ದೊರಕುವುದು. ಮೌನದಿಂದ ಕಾರ್ಯ ನಿರ್ವಹಿಸಿ.

 

 

ವ್ಯಾಪಾರದ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ನೀವು ಧೈರ್ಯದಿಂದ ಮುಂದೆ ಹೆಜ್ಜೆಯನ್ನು ಇಡಿ. ಕುಲದೇವರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ಆಗುತ್ತದೆ.

 

 

ವ್ಯಾಜ್ಯದ ವಿಚಾರವೊಂದರಲ್ಲಿ ನಿಮ್ಮನ್ನು ಸಿಲುಕಿಸಲು ನಡೆಯುತ್ತಿರುವ ಷಡ್ಯಂತ್ರದ ಬಗೆಗೆ ಎಚ್ಚರ ಇರಲಿ. ಯಾವುದೇ ರೀತಿಯ ಹಣಕಾಸಿನ ವಿಷಯದಲ್ಲಿ ಹುಷಾರು, ಒಂದು ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ. ಹೆತ್ತವರ ಜೊತೆ ಸಮಯವನ್ನು ಕಳೆಯುವಿರಿ.

 

 

ಜನಪ್ರಿಯತೆ ಹಾಗೂ ಸಂಭಾವನೆ ಹೆಚ್ಚಾಗಲಿದೆ. ಹಣಕಾಸಿನ ಸ್ಥಿತಿ ಸಾಕಷ್ಟು ಸುಧಾರಿಸಲಿದೆ. ಚಿಕ್ಕ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಸಹೋದರನ ಸಂಗಡ ವಾದ ವಿವಾದ ಬೇಡ.

 

 

ಸಾಧ್ಯವಾದಷ್ಟು ನೀವು ನಿಮ್ಮ ಪಾಡಿಗೆ ಇರುವುದು ಕ್ಷೇಮ. ಮನಸ್ಸು ಧಾರ್ಮಿಕ ವಿಚಾರಗಳ ಕಡೆ ಸೆಳೆಯಲಿದ್ದು ಅಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ರೈತರು ರಾಜಕೀಯ ವ್ಯಕ್ತಿಗಳನ್ನು ನಂಬದಿರುವುದು ಒಳ್ಳೆಯದು.

 

 

ಲದೇವತಾನುಗ್ರಹದಿಂದ ನೀವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಮಡದಿ ಮಕ್ಕಳು ನಿಮಗೆ ಸಂತಸ ನೀಡುವರು. ಕಾರಣವಿಲ್ಲದೆ ಮತ್ತೊಬ್ಬರನ್ನು ಅವಮಾನಿಸಬೇಡಿ. ಆಡುವ ಮಾತಿನಲ್ಲಿ ಹಿಡಿತವಿರಲಿ.

 

ಗುರು ಹಿರಿಯರ ಆಶೀರ್ವಾದದಿಂದ ಕಚೇರಿ ಕೆಲಸಗಳಲ್ಲಿ ಅನುಕೂಲವಾಗುವವು. ಬಂಧುಗಳ ನಡುವೆ ಇದ್ದ ವೈರತ್ವವು ಹಿರಿಯರ ಮಧ್ಯಸ್ಥಿಕೆಯಿಂದ ತಿಳಿಯಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ನೀಡಿ.

 

ಅತಿಯಾದ ಲಾಭಾಂಶದ ಆಸೆಗೆ ಬಿದ್ದು ನಿಮ್ಮ ಶಕ್ತಿಗೆ ಮೀರಿ ಕೆಲಸ ಕಾರ್ಯಗಳನ್ನು ಪೂರೈಸಿಕೊಡುತ್ತೇನೆ ಎಂದು ಭಾವಿಸಿ ಏಕಕಾಲಕ್ಕೆ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಇದರಿಂದ ಮಾನಸಿಕ ಕ್ಷೋಭೆ ಮತ್ತು ಹಣಕಾಸಿನ ತೊಂದರೆ ಎದುರಿಸಬೇಕಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top