fbpx
ಸಮಾಚಾರ

ತಾತ ಆಗ್ತಿದ್ದಾರೆ ಎಚ್‍ಡಿಕೆ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್-ರೇವತಿ ದಂಪತಿ

ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿಖಿಲ್​ ಹಾಗೂ ರೇವತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕುಮಾರಸ್ವಾಮಿ ಅವರು ತಾನು ತಾತನಾಗುತ್ತಿರುವ ವಿಷಯವನ್ನು ಮಾಧ್ಯಮದ ಜತೆ ಹಂಚಿಕೊಂಡಿದ್ದಾರೆ.

ಇದೀಗ ನಿಖಿಲ್ ಪತ್ನಿ ರೇವತಿಗೆ 5 ತಿಂಗಳು. ಈ ಸುದ್ದಿಯನ್ನು ಮಾಧ್ಯದೆದುರು ಕುಮಾರಸ್ವಾಮಿ ಅವರ ಬಹಿರಂಗಪಡಿಸಿದ್ದಾರೆ. ರೇವತಿ ಗರ್ಭಿಣಿಯಾದಾಗಿನಿಂದಲೇ ಪತಿಯೊಂದಿಗೆ ಬಿಡದಿಯ ತೋಟದ ಮನೆಯಲ್ಲೇ ವಾಸವಿದ್ದಾರಂತೆ.

ನಿಖಿಲ್- ರೇವತಿ ದಂಪತಿಗಳು ಅಪ್ಪ- ಅಮ್ಮ ಆಗುತ್ತಿರುವ ಸಂತಸದಲ್ಲಿದ್ದರೆ, ಈ ಸಿಹಿ ಸುದ್ದಿ ಕೇಳಿ ಇಡೀ ದೇವೇಗೌಡರ ಕುಟುಂಬ ಫುಲ್ ಖುಷ್ ಆಗಿದೆ. ಒಟ್ಟಾರೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರ ಹುಟ್ಟುಹಬ್ಬದ ದಿನದಂದೇ ಈ ವಿಚಾರ ರಿವೀಲ್ ಆಗಿರುವುದು ಅಭಿಮಾನಿಗೆ ಸಂತಸ ತರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top