fbpx
ಸಮಾಚಾರ

ಜೂನ್ 24: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 24, 2021 ಗುರುವಾರ
ವರ್ಷ : 1943 ಪ್ಲಾವ
ತಿಂಗಳು : ಜ್ಯೇಷ್ಠ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪೂರ್ಣಿಮಾ 12:08 am
ನಕ್ಷತ್ರ : ಜ್ಯೇಷ್ಠ 9:10 am
ಯೋಗ : ಶುಭ 6:06 am ಶುಕ್ಲ 2:16 am
ಕರಣ : ವಿಷ್ಟಿ 1:49 pm ಬಾವ 12:08 am

Time to be Avoided
ರಾಹುಕಾಲ : 1:57 pm – 3:33 pm
ಯಮಗಂಡ : 5:59 am – 7:34 am
ದುರ್ಮುಹುರ್ತ : 10:14 am – 11:05 am, 3:20 pm – 4:11 pm
ವಿಷ : 4:20 pm – 5:46 pm, 7:45 am – 9:10 am
ಗುಳಿಕ : 9:10 am – 10:46 am

Good Time to be Used
ಅಮೃತಕಾಲ : 12:56 am – 2:22 am
ಅಭಿಜಿತ್ : 11:56 am – 12:47 pm

Other Data
ಸೂರ್ಯೋದಯ : 5:55 am
ಸುರ್ಯಾಸ್ತಮಯ : 6:48 pm
ರವಿರಾಶಿ : ಮಿಥುನ
ಚಂದ್ರರಾಶಿ : ವೃಶ್ಚಿಕ upto 09:10

 

 

 

ಅಯ್ಯೋ ಪಾಪ ಎಂದರೆ ಆಯುಷ್ಯ ಕಡಿಮೆ ಆಗುವಂತಹ ಸಂದರ್ಭವಿದೆ. ಪರರ ಕಷ್ಟಕ್ಕೆ ಮರುಗಿ ದಾನಶೂರ ಕರ್ಣನಂತೆ ಇದ್ದುದೆಲ್ಲವನ್ನು ಪರರಿಗೆ ಹಂಚುವ ಔದಾರ್ಯದಿಂದ ಕೆಲಕಾಲ ಹಿಂದೆ ಸರಿಯುವುದು ಒಳ್ಳೆಯದು.

 

ಕುಟುಂಬದಲ್ಲಿನ ಅಸಮತೋಲನವನ್ನು ತಪ್ಪಿಸಲು ಮನೆಯ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ. ನಂತರ ನೀವು ತೀರ್ಮಾನ ಕೈಕೊಂಡಲ್ಲಿ ಎಲ್ಲರೂ ನಿಮ್ಮ ತೀರ್ಮಾನವನ್ನು ಒಪ್ಪುವ ಸಾಧ್ಯತೆ ಇರುತ್ತದೆ. ಆದರೆ ಒಬ್ಬರ ವಿಚಾರ ಮತ್ತೊಬ್ಬರ ಬಳಿ ಹೇಳದಿರಿ.

 

ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಸಂಧಿಸುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸದೇ ಆದ ತಿರುವೊಂದು ದೊರೆಯಲಿದೆ. ಧರ್ಮಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ಈದಿನ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

ಸುಖಾಸುಮ್ಮನೆ ಒಂದು ವ್ಯಾಜ್ಯದಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಹಾಗಾಗಿ ಅನವಶ್ಯಕವಾಗಿ ಪರರ ಕಾರ್ಯ ವೈಖರಿ ಬಗ್ಗೆ ಟೀಕೆ ಟಿಪ್ಪಣಿ ಮಾಡದಿರಿ. ಇದರಿಂದ ತೊಂದರೆ ಎದುರಿಸಬೇಕಾಗುತ್ತದೆ.

 

 

ನಯವಾದ ಮಾತುಗಳ ಮೂಲಕ ನಿಮ್ಮ ಅಂತರಂಗದ ವಿಚಾರಗಳನ್ನು ಬಹಿರಂಗ ಪಡಿಸಲು ಕೆಲವರು ಹವಣಿಸುವರು. ಇದರ ಸೂಕ್ಷ ್ಮತೆ ಅರಿತು ನೀವು ಅವರಿಗೆ ಸರಿಯಾದ ಬುದ್ಧಿ ಕಲಿಸುವಿರಿ.

 

 

ಹೊಸದಾದ ಸಂತೋಷವನ್ನು, ಚೈತನ್ಯವನ್ನು ಹೊಂದುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ.

 

 

ಹಣದ ಹರಿವು ಹೆಚ್ಚಾಗಲಿದೆ. ಖರ್ಚು ವೆಚ್ಚಗಳ ಮೇಲೆ ನಿಗಾ ಇಡಿ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವಿರಿ. ಇದರಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗುವುದು.

 

 

ಮುಂಗೋಪದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ಆದಷ್ಟು ಜಾಗ್ರತೆ. ಹಣಕಾಸಿನ ವಿಷಯದಲ್ಲಿ ತುಸು ನೆಮ್ಮದಿ ಕಾಣುವಿರಿ.

 

ಯಾವುದೇ ವಸ್ತುವಾಗಲಿ ಅಥವಾ ವ್ಯಕ್ತಿಯಾಗಲಿ ಎದುರಿಗಿದ್ದಾಗ ಅವರ ಬೆಲೆ ಗೊತ್ತಾಗುವುದಿಲ್ಲ. ಅವರು ಕಣ್ಮರೆಯಾದಾಗಲೇ ಅದರ ಮಹತ್ವ ಗೊತ್ತಾಗುವುದು. ಹಾಗಾಗಿ ಇದ್ದ ಸಮಯದಲ್ಲಿಯೇ ಅವರ ಗುಣಗಾನ ಮಾಡುವುದು ಕ್ಷೇಮ.

 

 

ಬಾಳ ಸಂಗಾತಿಯೊಡನೆ ವಾದ ವಿವಾದ ಬೆಳೆಸಬೇಡಿ. ಬಹುಮುಖ್ಯವಾದ ಸಂಗತಿಯನ್ನು ಸಂಗಾತಿಯೊಡನೆ ಚರ್ಚಿಸಿಯೇ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿಯು ದಿನದಿಂದ ದಿನಕ್ಕೆ ಪ್ರಗತಿಯತ್ತ ಸಾಗುವುದು.

 

ಸ್ನೇಹಿತರು ಸಹಾಯಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿ.

 

ವಿಚಿತ್ರವಾದ ರೀತಿಯಲ್ಲಿ ನಿಮ್ಮ ವಿರೋಧಿಗಳೇ ನಿಮ್ಮನ್ನು ಬೆಂಬಲಿಸುವರು. ಹಾಗಾಗಿ ನಿಮ್ಮ ಯಶಸ್ಸಿನ ಹಾದಿಗೆ ಅಡ್ಡಲಾಗಿದ್ದ ಕೆಲವು ವಿಚಾರಗಳು ಅಲ್ಲಿಯೇ ಸ್ಥಗಿತಗೊಂಡು ಯಶಸ್ಸಿನ ಹಾದಿ ಸುಗಮವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top