fbpx
ಸಮಾಚಾರ

ಬಿಗ್‍ಬಾಸ್: 2ನೇ ಇನ್ನಿಂಗ್ಸ್ ನ ಮೊದಲನೇ ದಿನವೇ ಮನೆಯಲ್ಲಿ ನಾಮಿನೇಷನ್ ಬೆಂಕಿ ಶುರು

ಕೊರೋನಾ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಬಿಗ್‍ಬಾಸ್ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. 12 ಜನ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೊದಲ ದಿನವೇ ನಾಮಿನೇಷನ್ ನಡೆದಿದೆ. ಈ ಮೂಲಕವಾಗಿ ಬಿಗ್‍ಬಾಸ್ ಆಟ ಮೊದಲ ದಿನವೇ ರೋಚಕತೆಯನ್ನು ಪಡೆದುಕೊಂಡಿದೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

 

 

ಕ್ಯಾಮೆರಾ ಎದುರು ಒಂದು ರೀತಿ ಮಾತನಾಡುತ್ತಿದ್ದ ಅನೇಕರು ಕ್ಯಾಮೆರಾ ಹಿಂದೆ ಮತ್ತೊಂದು ರೀತಿಯಲ್ಲಿ ಇರುತ್ತಿದ್ದರು. ಈಗ ಮನೆ ಸೇರಿರುವ ಎಲ್ಲರಿಗೂ ಯಾರು ಹೇಗೆ ಅನ್ನೋದು ಗೊತ್ತಾಗಿದೆ. ಈ ಕಾರಣಕ್ಕೆ ಮೊದಲ ದಿನ ನಡೆದ ಎಲಿಮಿನೇಷನ್​ನಲ್ಲಿ ಒಬ್ಬರಿಗೊಬ್ಬರು ಸಿಟ್ಟು ಕಾರಿದ್ದಾರೆ.

 

 

ನಾನು ನಿಮ್ಮ ಸ್ನೇಹಿತೆ ಅಲ್ಲ, ನೀವು ನನ್ನ ಗೆಳೆಯನಲ್ಲ. ಹಿಂದೆ ಒಂದು ರೀತಿ, ಮಂದೆ ಇನ್ನೊಂದು ರೀತಿ ಮಾತನಾಡುತ್ತೀಯಾ. ನನ್ನ ನಗೂ ಫೇಕ್ ಎಂದಿದ್ದೀಯಾ ನನಗೆ ಬೇಸರವಾಯಿತ್ತು. ನನಗೂ ಕುಟುಂಬ ಇದೆ ಹೀಗೆ ಮಾತನಾಡುವುದು ಸರಿ ಅಲ್ಲ. ನಾನು ನಿನ್ನ ಒಳ್ಳೆಯ ಸ್ನೇಹಿತ ಅನ್ಕೋಂಡಿದ್ದೆ. ಬಾಯಿಗೆ ಬಂದಾಗೆ ಮಾತನಾಡಬೇಡಿ. ದೃಢ ನಿರ್ಧಾರ ಒಂದೂ ಇಲ್ಲ, ಈ ಮನೆಗೆ ನೀನು ಬೇಡಾ, ಕ್ಯಾಮೆರಾ ಮುಂದೆ ಇದೆ ಎಂದರೆ ಏನಾದರೂ ಮಾತನಾಡುತ್ತೀರಾ ಎಂದೆಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ದೂರಿಕೊಂಡು ನಾಮಿನೇಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top