fbpx
ಸಮಾಚಾರ

‘ಸಂಚಾರಿ ವಿಜಯ್ ಬಗ್ಗೆ ಸುಳ್ಳು ವದಂತಿ ಹಬ್ಬಿಸಬೇಡಿ’ ಕುಟುಂಬದ ಮನವಿ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಸಂಚಾರಿ ವಿಜಯ್​ ಅವರು ನಿಧನರಾಗಿದ್ದು ನಿಜಕ್ಕೂ ನೋವಿನ ಸಂಗತಿ. ಒಬ್ಬ ಅದ್ಭುತ ಕಲಾವಿದನನ್ನು ಕಳೆದುಕೊಂಡು ಸ್ಯಾಂಡಲ್​ವುಡ್​ ಬಡವಾಗಿದೆ. ಈ ನೋವಿನ ನಡುವಲ್ಲೇ ಸಂಚಾರಿ ವಿಜಯ್​ ಬಗ್ಗೆ ಹಲವು ಮಾಹಿತಿಗಳು ಹರಿದಾಡುತ್ತಿವೆ. ಅದರ ಸತ್ಯಾಸತ್ಯತೆ ಬಗ್ಗೆ ಈಗ ಪ್ರಶ್ನೆ ಉದ್ಭವ ಆಗಿದೆ. ಈ ಬಗ್ಗೆ ಅವರ ಕುಟುಂಬ ಮನವಿಯೊಂದನ್ನ ಮಾಡಿಕೊಂಡಿದೆ.

 

 

ಸಂಚಾರಿ ವಿಜಯ್‌ಗೆ ಜಾತಿ ಸಮಸ್ಯೆ ಇತ್ತಂತೆ, ತುಂಬ ಕಷ್ಟದಲ್ಲಿದ್ದರಂತೆ, ಅವಕಾಶಗಳೇ ಇರಲಿಲ್ಲವಂತೆ.. ಹೀಗೆ ನಾನಾ ಬಗೆಯಲ್ಲಿ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಇದೀಗ ಆ ಬಗ್ಗೆ ಸ್ವತಃ ಸಂಚಾರಿ ವಿಜಯ್ ಅವರ ಸಹೋದರ ವಿರೂಪಾಕ್ಷ ಅವರೇ ಸ್ಪಷ್ಟನೆ ನೀಡಿದ್ದಾರೆ.

‘ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ನನ್ನ ತಮ್ಮ ಹಾಗೂ ನಮ್ಮ ಕುಟುಂಬದ ಹಿನ್ನೆಲೆಗೆ ಸಂಬಂಧಪಟ್ಟಂತೆ ಹುಟ್ಟಿಕೊಂಡಿರುವ ಎಲ್ಲ ಕಟ್ಟುಕಥೆಗಳಿಗೂ ಉತ್ತರವಾಗಿ ವಾಸ್ತವವನ್ನು ತೆರೆದಿಡುತ್ತಿದ್ದೇನೆ. ದಯವಿಟ್ಟು ನಮ್ಮ ಕುಟುಂಬಕ್ಕೆ ಆಗುತ್ತಿರುವ ನೋವನ್ನು ಅರ್ಥ ಮಾಡಿಕೊಂಡು, ಚರ್ಚೆಗಳನ್ನು ಇಲ್ಲಿಗೆ ನಿಲ್ಲಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ’ ಎಂದು ವಿರೂಪಾಕ್ಷ ಅವರು ಹೇಳಿದ್ದಾರೆ.

“ವಿಜಯ್‌ ನಿಧನದ ಬಳಿಕ ಯಾಕೆ ಈಗ ಚರ್ಚೆ ಮಾಡುತ್ತಿದ್ದೀರಿ.? ಜಾತಿ ವಿಚಾರವನ್ನು ಎಳೆದು ತರುವುದು ಯಾಕೆ? ನಮ್ಮ ಕುಟುಂಬಕ್ಕೆ ಆಗುತ್ತಿರುವ ನೋವನ್ನು ಅರ್ಥ ಮಾಡಿಕೊಂಡು, ಚರ್ಚೆಗಳನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top