fbpx
ಸಮಾಚಾರ

WTC Final: ನ್ಯೂಜಿಲೆಂಡ್ ಆಟಗಾರರನ್ನು ನಿಂದಿಸಿದ ಇಬ್ಬರು ಟೀಮ್ ಇಂಡಿಯಾ ಅಭಿಮಾನಿಗಳು ಮೈದಾನದಿಂದ ಹೊರಕ್ಕೆ

ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯ 5ನೇ ದಿನವಾದ ಮಂಗಳವಾರ ನ್ಯೂಜಿಲೆಂಡ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ ರಾಸ್ ಟೇಲರ್‌ ಅವರನ್ನು ಜನಾಂಗೀಯವಾಗಿ ನಿಂದಿಸಿದ ಘಟನೆ ನಡೆದಿದೆ.

ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಿಸುತ್ತಿದ್ದ ನ್ಯೂಜಿಲೆಂಡ್‌ ಅಭಿಮಾನಿಯೊಬ್ಬರು ಈ ಘಟನೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಗಮನಕ್ಕೆ ತಂದಿದ್ದರು. ಇದರಿಂದ ಎಚ್ಚೆತ್ತುಕೊಂಡ ರೋಸ್‌ ಬೌಲ್‌ ಅಂಗಣದ ರಕ್ಷಣಾ ಸಿಬ್ಬಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರ ಪ್ರೇಕ್ಷಕರನ್ನು ಹೊರಗಡೆ ಕಳುಹಿಸಿದರು.

ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ ಷಿಫ್‌ ಫೈನಲ್ ಪಂದ್ಯದ ಐದನೇ ದಿನದಾಟದಲ್ಲಿ ಕ್ರೀಡಾಂಗಣದಲ್ಲಿ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಮೈದಾನದಲ್ಲಿ ಕೊಂಚ ಭಾರತೀಯ ಪ್ರೇಕ್ಷಕರೇ ಹೆಚ್ಚಿದ್ದರು. ಈ ವೇಳೆ ಇಬ್ಬರು ಭಾರತ ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ಹೊಗಳುವ ಭರದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರನ್ನು ನಿಂದಿಸಿದ್ದಾರೆ. ಈ ಕುರಿತಂತೆ ಆಟಗಾರರು ಅಂಪೈರ್ ಗಳಿಗೆ ಮಾಹಿತಿ ನೀಡಿದ್ದು, ಅಂಪೈರ್ ಗಳ ಸೂಚನೆಯಂತೆ ಕೆಟ್ಟದಾಗಿ ನಡೆದುಕೊಂಡ ಇಬ್ಬರು ಪ್ರೇಕ್ಷಕರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ.

ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಅವರನ್ನು ಗುರಿಯಾಗಿಸಿ ಪ್ರಮುಖವಾಗಿ ನಿಂದಿಸಲಾಗಿದೆ. ಆದರೆ ಈ ವಿಚಾರವಾಗಿ ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥೀ ಪ್ರತಿಕ್ರಿಯಿಸಿದ್ದು ಈ ಘಟನೆಯ ಬಗ್ಗೆ ನಮ್ಮ ತಂಡದ ಯಾವುದೇ ಆಟಗಾರನಿಗೂ ಮಾಹಿತಿಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top