fbpx
ಸಮಾಚಾರ

ಬಿಗ್ ಬಾಸ್ 2ನೇ ಇನ್ನಿಂಗ್ಸ್ ಮೊದಲ ದಿನವೇ ಜಡೆ ಜಗಳ: DU,DS ಕಿತ್ತಾಟ ಶುರು

ಬಿಗ್‍ಬಾಸ್ ಮನೆಗೆ ಸ್ಪರ್ಧಿಗಳು ಗ್ರ್ಯಾಂಡ್ ಎಂಟ್ರಿ ಕೊಟ್ಟು ಬಿಗ್‍ಬಾಸ್ ಮೇಲೆ ಇರುವ ನಿರೀಕ್ಷೆಯನ್ನು ಹೆಚ್ಚಿಸಿದ್ದರು. ಅದಕ್ಕೆ ಪೂರಕವಾಗಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಮೊದಲ ದಿನವೇ ಕಿತ್ತಾಡಿಕೊಂಡಿದ್ದಾರೆ.

ಆಟದ ವಿಚಾರವಾಗಿ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಮಧ್ಯೆ ಫುಲ್ ಜಡೆ ಜಗಳ ನಡೆದಿದ್ದು, ಇಬ್ಬರೂ ಬಿದ್ದು ಹೊರಳಾಡಿ, ಒಬ್ಬರಿಗೊಬ್ಬರ ಜಡೆ ಹಿಡಿದು ಫುಲ್ ಫೈಟ್ ಮಾಡಿದ್ದಾರೆ. ಇದನ್ನು ನೋಡಿದ ವೀಕ್ಷಕರು ಫುಲ್ ಶಾಕ್ ಆಗಿದ್ದು, ಅಷ್ಟು ಗಂಭಿರವಾಗಿ ಫೈಟ್ ಮಾಡಿದ್ದನ್ನು ಕಂಡು ದಂಗಾಗಿದ್ದಾರೆ.

 

 

ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಒಬ್ಬರ ಮೇಲೊಬ್ಬರು ಬಿದ್ದು, ಜಡೆ ಹಿಡಿದು, ಹೊರಳಾಡಿ ತಮ್ಮ ಗೆಲುವಿಗಾಗಿ ಹೋರಾಡಿದ್ದಾರೆ. ಕೊನೆಗೂ ದಿವ್ಯಾ ಸುರೇಶ್ ಗೆದ್ದಿದ್ದಾರೆ. ಬಳಿಕ ಬಿಗ್ ಬಾಸ್ ದಿವ್ಯಾ ಸುರೇಶ್ ಅವರನ್ನು ಲೀಡರ್ಸ್ ತಂಡದ ನಾಯಕಿ ಎಂದು ಘೋಷಿಸುತ್ತಾರೆ.

ಇಬ್ಬರ ಕೈಗೆ ಬಿಂದಿ ಪಾಕೆಟ್‍ನ್ನು ಕೊಡಲಾಗುತ್ತದೆ. ಅದರಲ್ಲಿನ ಒಂದು ಬಿಂದಿಯನ್ನು ಎದುರಾಳಿಯ ಹಣೆಗೆ ಅಂಟಿಸಬೇಕು ಎಂದು ಹೇಳುತ್ತಾರೆ. ಯಾರು ಮೊದಲು ಎದುರಾಳಿಯ ಹಣೆಗೆ ಬಿಂದಿಯನ್ನು ಅಂಟಿಸುತ್ತಾರೋ ಅವರು ಪಂದ್ಯ ಗೆಲ್ಲುತ್ತಾರೆ ಎಂದು ಹೇಳಿ ಒಳಗೆ ಕಳುಹಿಸುತ್ತಾರೆ. ಬಳಿಕ ಮನೆಯ ಒಳಗೆ ರೋಚಕ ಫೈಟಿಂಗ್ ಬಳಿಕ ದಿವ್ಯಾ ಸುರೇಶ್ ಗೆಲುವು ಸಾಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top