fbpx
ಸಮಾಚಾರ

BiggBoss 8 Kannada: ಮೊದಲ ದಿನವೇ ನಾಮಿನೇಟ್ ಆದ ಸದಸ್ಯರು ಇವರೇ ನೋಡಿ!

ಕೊರೋನಾ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಬಿಗ್‍ಬಾಸ್ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. 12 ಜನ ಸ್ಪರ್ಧಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೊದಲ ದಿನವೇ ನಾಮಿನೇಷನ್ ನಡೆದಿದೆ. ಈ ಮೂಲಕವಾಗಿ ಬಿಗ್‍ಬಾಸ್ ಆಟ ಮೊದಲ ದಿನವೇ ರೋಚಕತೆಯನ್ನು ಪಡೆದುಕೊಂಡಿದೆ.

ಮನೆಗೆ ಹೋಗಿ ಹಳೇ ಸಂಚಿಕೆಗಳನ್ನು ನೋಡಿ ಬಂದಿದ್ದ ಸ್ಪರ್ಧಿಗಳಿಗೆ ಯಾರು ಸ್ನೇಹಿತರು ಹಾಗೂ ಯಾರು ಹಿಂದೆ ಬೆನ್ನಿಗೆ ಚೂರಿ ಹಾಕಿದ್ದಾರೆ ಅನ್ನೋದು ತಿಳಿದಿದೆ. ಇದರಿಂದಾಗಿಯೇ ಮೊಲದ ದಿನ ನಡೆದ ನಾಮಿನೇಷನ್​ ಮನೆಯಲ್ಲಿ ನಿಜಕ್ಕೂ ಬೆಂಕಿಯ ಕಿಡಿ ಹೊತ್ತಿಸಿದೆ.

ಅಂತಿಮವಾಗಿ ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಮಂಜು ಪಾವಗಡ, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ ಮತ್ತು ಪ್ರಿಯಾಂಕಾ ತಿಮ್ಮೇಶ್‌ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಹೆಚ್ಚು ಮತಗಳನ್ನು ಪಡೆದವರು ಅಂದರೆ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​.

ನಾನು ನಿಮ್ಮ ಸ್ನೇಹಿತೆ ಅಲ್ಲ, ನೀವು ನನ್ನ ಗೆಳೆಯನಲ್ಲ. ಹಿಂದೆ ಒಂದು ರೀತಿ, ಮಂದೆ ಇನ್ನೊಂದು ರೀತಿ ಮಾತನಾಡುತ್ತೀಯಾ. ನನ್ನ ನಗೂ ಫೇಕ್ ಎಂದಿದ್ದೀಯಾ ನನಗೆ ಬೇಸರವಾಯಿತ್ತು. ನನಗೂ ಕುಟುಂಬ ಇದೆ ಹೀಗೆ ಮಾತನಾಡುವುದು ಸರಿ ಅಲ್ಲ. ನಾನು ನಿನ್ನ ಒಳ್ಳೆಯ ಸ್ನೇಹಿತ ಅನ್ಕೋಂಡಿದ್ದೆ. ಬಾಯಿಗೆ ಬಂದಾಗೆ ಮಾತನಾಡಬೇಡಿ. ದೃಢ ನಿರ್ಧಾರ ಒಂದೂ ಇಲ್ಲ, ಈ ಮನೆಗೆ ನೀನು ಬೇಡಾ, ಕ್ಯಾಮೆರಾ ಮುಂದೆ ಇದೆ ಎಂದರೆ ಏನಾದರೂ ಮಾತನಾಡುತ್ತೀರಾ ಎಂದೆಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ದೂರಿಕೊಂಡು ನಾಮಿನೇಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top