fbpx
ಸಮಾಚಾರ

ಕೊಂಕಣ ರೈಲ್ವೆಯಲ್ಲಿ ಉದ್ಯೋಗಾವಕಾಶ: ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (KRCL) ವಿವಿಧ 12 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಕೆಳಗೆ ತಿಳಿಸಲಾದ ವಿವಿಧ ಹುದ್ದೆಗಳಲ್ಲಿ ಆಸಕ್ತಿಯುಳ್ಳವರು ಆನ್‌ಲೈನ್‌ ಮೂಲಕ ದಿನಾಂಕ 01-07-2021ರೊಳಗೆ ಅರ್ಜಿ ಸಲ್ಲಿಸಿ.

ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.34,200 ರಿಂದ 92,200 ವರೆಗೆ ವೇತನ ನೀಡಲಾಗುತ್ತದೆ. 2021 ರ ಜುಲೈ 01 ಕ್ಕೆ ಗರಿಷ್ಠ 45 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ 03 ವರ್ಷದಿಂದ 7 ವರ್ಷದವರೆಗೆ ಕಾರ್ಯಾನುಭವವುಳ್ಳವರು ಅರ್ಜಿ ಸಲ್ಲಿಸಬೇಕು.

ಮೊದಲಿಗೆ ಎರಡು ವರ್ಷಗಳ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಅಭ್ಯರ್ಥಿಯ ಕಾರ್ಯದಕ್ಷತೆಯ ಆಧಾರದಲ್ಲಿ ವರ್ಷದಿಂದ ವರ್ಷಕ್ಕೆ ಹುದ್ದೆಯ ಅವಧಿ ಮುಂದೂಡಲಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: ನೋಟಿಫಿಕೇಶನ್‌ನಲ್ಲಿ ನೀಡಲಾದ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಪಿಡಿಎಫ್‌ಗೆ ಬದಲಾವಣೆ ಮಾಡಿ ಇ-ಮೇಲ್ ವಿಳಾಸ helpdskrectcell@krcl.co.in ಗೆ ಕಳುಹಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top