fbpx
ಸಮಾಚಾರ

ಸಂಚಾರಿ ವಿಜಯ್‌ಗೆ ಅಪಘಾತವಾದ ಸಹಾಯ ಮಾಡಿದ ಸುದೀಪ್‌ಗೆ ಥ್ಯಾಂಕ್ಸ್ ಹೇಳಿದ ಚಕ್ರವರ್ತಿ ಚಂದ್ರಚೂಡ್

ವಿಜಯ್​ ಅವರಿಗೆ ಅಪಘಾತವಾದಾಗ ವಿಜಯ್​ ಸ್ನೇಹಿತರು ಮೊದಲು ಕರೆ ಮಾಡಿದ್ದು ಕಿಚ್ಚ ಸುದೀಪ್​ಅವರಿಗೆ. ಸುದೀಪ್ ಕೂಡಲೇ ಕಷ್ಟಕ್ಕೆ ಸ್ಪಂದಿಸಿ ಆಸ್ಪತ್ರೆಯ ಸಿಇಓಗೆ ಕರೆ ಮಾಡಿ ಚಿಕಿತ್ಸೆಗೆ ಏನೆಲ್ಲಾ ವ್ಯವಸ್ಥೆ ಆಗಬೇಕೋ ಅದನ್ನ ನಾನು ಮಾಡುತ್ತೇನೆ ಎಂದಿದ್ದರಂತೆ.. ಸುದೀಪ್ ತಮ್ಮ ಕಾರನ್ನು ಕಳುಹಿಸಿ ಮನೆಯಲ್ಲಿದ್ದ ವೈದ್ಯರನ್ನು ಆಸ್ಪತ್ರೆಗೆ ಕರೆಸಿದ್ದರಂತೆ. ನಂತರ ತಕ್ಷಣ ಆಪರೇಷನ್ ಗಾಗಿ 12 ಲಕ್ಷ ನೀಡಿದ್ದರಂತೆ.

ಸಂಚಾರಿ ವಿಜಯ್‌ಗೆ ಅಪಘಾತ ಉಂಟಾದಾಗ ತ್ವರಿತಗತಿಯಲ್ಲಿ ಸ್ಪಂದಿಸಿದ ನಟ ಸುದೀಪ್‌ಗೆ ಚಕ್ರವರ್ತಿ ಚಂದ್ರಚೂಡ್ ಧನ್ಯವಾದ ಅರ್ಪಿಸಿದರು. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಪುನರಾರಂಭಗೊಂಡಿದ್ದು ‘ಬಿಗ್ ಬಾಸ್’ ಮನೆಯೊಳಗೆ ಕಾಲಿಡುವ ಮುನ್ನ ವೇದಿಕೆ ಮೇಲೆ ಕಿಚ್ಚ ಸುದೀಪ್‌ಗೆ ಚಕ್ರವರ್ತಿ ಚಂದ್ರಚೂಡ್ ಧನ್ಯವಾದಗಳನ್ನು ತಿಳಿಸಿದರು.

ಚಕ್ರವರ್ತಿ ಚಂದ್ರಚೂಡ್ ಹೇಳಿದ್ದೇನು?
”ನಿಮಗೆ ಧನ್ಯವಾದಗಳು. ನನ್ನ ಜೀವದ ಗೆಳೆಯನನ್ನು ನಾನು ಕಳೆದುಕೊಂಡೆ. 12 ವರ್ಷದ ಸುದೀರ್ಘ ಒಡನಾಡಿ ಅಪಘಾತಕ್ಕೀಡಾಗಿದ್ದಾನೆ ಎಂದು ಗೊತ್ತಾದ ಕೂಡಲೆ ಸ್ಪೀಡಾಗಿ ಗೋಲ್ಡನ್ ಅವರ್‌ನಲ್ಲಿ ನೀವು ವಾಹನ ಮಾಡಿ ಕಳುಹಿಸಿದ್ರಿ. ಮನೆಯಲ್ಲಿದ್ದ ವೈದ್ಯರನ್ನು ಕರೆದುಕೊಂಡು ಹೋಗಿ ಆಪರೇಶನ್ ಮಾಡಿಸಿದ್ರಿ. ಬೆಳಗಿನ ಜಾವದವರೆಗೂ ಎಚ್ಚರವಿದ್ರಿ. ಸಂಚಾರಿ ವಿಜಯ್ ಅವರನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯತ್ನ ಪಟ್ರಿ. ಈ ಪ್ರಕೃತಿ ನಿಮಗೆ ಇನ್ನಷ್ಟು ಶಕ್ತಿ ಕೊಡಲಿ. ನಿಮಗೆ ಸಾಷ್ಟಾಂಗ ನಮಸ್ಕಾರಗಳು ಸಾರ್” ಎಂದು ಸುದೀಪ್‌ಗೆ ಚಕ್ರವರ್ತಿ ಚಂದ್ರಚೂಡ್ ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top