fbpx
ಸಮಾಚಾರ

ಜೂನ್ 27: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 27, 2021 ಭಾನುವಾರ
ವರ್ಷ : 1943 ಪ್ಲಾವ
ತಿಂಗಳು : ಜ್ಯೇಷ್ಠ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ 3:53 pm
ನಕ್ಷತ್ರ : ಶ್ರವಣ 1:21 am
ಯೋಗ : ವೈಧೃತಿ 4:26 pm
ಕರಣ : ವಿಷ್ಟಿ 3:53 pm ಬಾವ 2:59 am

Time to be Avoided
ರಾಹುಕಾಲ : 5:09 pm – 6:45 pm
ಯಮಗಂಡ : 12:22 pm – 1:58 pm
ದುರ್ಮುಹುರ್ತ : 5:03 pm – 5:54 pm
ವಿಷ : 6:24 am – 7:55 am, 12:00 am – 6:50 am
ಗುಳಿಕ : 3:34 pm – 5:09 pm

Good Time to be Used
ಅಮೃತಕಾಲ : 3:30 pm – 5:01 pm
ಅಭಿಜಿತ್ : 11:57 am – 12:48 pm

Other Data
ಸೂರ್ಯೋದಯ : 5:56 am
ಸುರ್ಯಾಸ್ತಮಯ : 6:49 pm
ರವಿರಾಶಿ : ಮಿಥುನ
ಚಂದ್ರರಾಶಿ : ಮಕರ

 

 

 

ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆ ಬೇಡ. ಮುನ್ನುಗ್ಗಿ ನೀವು ಅಂದುಕೊಂಡ ಕಾರ್ಯವನ್ನು ಆರಂಭಿಸಿರಿ. ಕೆಲಸ ಸಿದ್ಧಿಸುವುದು ಮತ್ತು ಆ ಕೆಲಸದಲ್ಲಿ ಜಯವೂ ಲಭಿಸುವುದು.

 

ಅನೇಕ ರೀತಿಯ ಅಡೆತಡೆಗಳನ್ನು ದಾಟಿಕೊಂಡು ಬಂದಿದ್ದೀರಿ. ಸಂಕಲ್ಪಶಕ್ತಿಯಿಂದ ದೊಡ್ಡದೊಂದು ಕಾರ್ಯವನ್ನು ಮಾಡಿ ಈದಿನ ಗೆಲುವು ಸಾಧಿಸುವಿರಿ. ಗ್ರಹಗಳು ಇದಕ್ಕೆ ಪೂರಕವಾಗಿ ನಿಮಗೆ ಸಹಾಯ ನೀಡುವುದು

 

ವೃಥಾ ಅಪವಾದದಲ್ಲಿ ಕಳೆಯುವಂತಹ ಸೋಮಾರಿಯಾದ ಗೆಳೆಯರನ್ನು ದೂರವಿಡಿ. ಒಳ್ಳೆಯ ದಿನಗಳು ನಿಮಗೆ ಕಾದಿವೆ. ನಿಮ್ಮ ಕುಲದೇವರನ್ನು ಪ್ರಾರ್ಥಿಸಿರಿ. ನಿಮ್ಮ ಕಾರ್ಯ ಸಾಧನೆಯಲ್ಲಿ ಗೆಲುವು ಸಿಗಲು ಸಾಧ್ಯವಿದೆ.

 

ನಿಮ್ಮ ಇಡೀ ಕುಟುಂಬವೇ ಸಂತಸ ಪಡುವಂತಹ ಬೆಳವಣಿಗೆಯೊಂದನ್ನು ಇಂದಿನ ದಿನ ನೀವು ಕಾಣುವಿರಿ. ಮನೆಯಲ್ಲಿ ಹರ್ಷದ ವಾತಾವರಣ. ಮನೆಗೆ ನೂತನ ಸದಸ್ಯೆನ ಆಗಮನವಾಗುವುದು.

 

 

ಎಲ್ಲರನ್ನು ತೂಗಿಸಿಕೊಂಡು ಹೋಗುವಂತಹ ನಿಮ್ಮ ಜಾಣ್ಮೆಯು ವಿಶೇಷವಾಗಿ ಎಲ್ಲರಿಂದ ಪ್ರಶಂಸೆಗೆ ಒಳಗಾಗುವುದು. ಭಗವಂತನು ಕೊಟ್ಟಿರುವ ಈ ಜಾಣ್ಮೆಯನ್ನು ಶುಭ ಕಾರ್ಯಗಳಿಗೆ ಉಪಯೋಗಿಸಿಕೊಂಡಲ್ಲಿ ಹೆಚ್ಚು ಅನುಕೂಲವಾಗುವುದು.

 

 

ಯಾವುದೇ ರೀತಿಯ ಹೊಸ ಯೋಜನೆಗಳ ಬಗ್ಗೆ ದಿಢೀರನೆ ಸ್ಪಂದಿಸದಿರಿ ಮತ್ತು ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡದಿರಿ. ನಿಮ್ಮ ಒಳ್ಳೆಯತನದ ದುರುಪಯೋಗಪಡಿಸಿಕೊಳ್ಳಲು ಇತರರು ಕಾದಿರುತ್ತಾರೆ. ಇದಕ್ಕೆ ಆಸ್ಪದ ನೀಡದಿರಿ.

 

 

ಕಚೇರಿಯ ಕೆಲಸಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಆರೋಗ್ಯದಲ್ಲಿ ಉತ್ತಮ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

 

 

ಸಂಪಾದನೆಗಿಂತ ಖರ್ಚು ಹೆಚ್ಚು ಎಂದು ರೋಸಿ ಹೋಗಿದ್ದೀರಿ. ಆದರೆ ಇದಕ್ಕೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವೆಂದು ಹೇಳಬೇಕಾಗಿಲ್ಲ. ಹೆಚ್ಚು ಹಣ ಬಂದಾಗ ಅದರಲ್ಲಿ ಸ್ವಲ್ಪ ಭಾಗವಾದರೂ ಉಳಿತಾಯ ಮಾಡಿರಿ.

 

ನೂತನ ಪರಿಸರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದ್ದು ಇದು ನಿಮ್ಮ ವೃತ್ತಿಗೆ ಪೂರಕವಾಗಿದೆ. ನಿಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿರಿ.

 

 

ಈ ದಿನ ನಿಮ್ಮ ಮಾತಿಗೆ ಬೆಲೆ ಬರುವುದು. ನಿಮ್ಮ ಹಿತಚಿಂತಕರನ್ನು ಅಥವಾ ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದು ನಿಮಗೆ ಲಾಭವನ್ನುಂಟು ಮಾಡುವುದು. ದೂರದ ಪ್ರಯಾಣವನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಅಲ್ಪ ಹಿನ್ನಡೆ.

 

ನಂಬಿದವರೇ ಇಂದು ಕೈ ಕೊಡುವ ಸಾಧ್ಯತೆ. ಬಂಧುಮಿತ್ರರೊಡನೆ ವಿರೋಧದಿಂದಾಗಿ ಜೀವನ ಮತ್ತು ವೃತ್ತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಕುಟುಂಬದವರ ನೈತಿಕ ಬೆಂಬಲ ನಿಮಗೆ ಸ್ಫೂರ್ತಿದಾಯಕವಾಗಲಿದೆ

 

ಸ್ವಾಭಿಮಾನದಿಂದ ಬದುಕಬೇಕೆನ್ನುವ ನೀವು ಇನ್ನೊಬ್ಬರ ಹಂಗಿನಲ್ಲಿ ಬದುಕಲು ಇಷ್ಟಪಡುವುದಿಲ್ಲ. ಇದನ್ನೇ ಇತರರು ಅಹಂಕಾರ ಎಂದು ಭಾವಿಸುವರು. ಬೇರೆಯವರು ಏನಾದರೂ ಅಂದುಕೊಳ್ಳಲಿ. ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬೇಡಿ. ಸಹನೆಯನ್ನು ರೂಢಿಸಿಕೊಳ್ಳಿರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top