fbpx
ಸಮಾಚಾರ

ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು: ರಣರಂಗವಾಯ್ತು ‘ಸೂಪರ್ ಸಂಡೆ’

ಬಿಗ್ ಬಾಸ್ ಕನ್ನಡ ಸೀಸನ್‌ 8ರ ಸೆಕೆಂಡ್ ಇನಿಂಗ್ಸ್ ಭರ್ಜರಿಯಾಗಿಯೇ ಆರಂಭಗೊಂಡಿತ್ತು. ಮೊದಲ ದಿನವೇ ನಾಮಿನೇಷನ್ ಕೂಡ ನಡೆದಿದ್ದು, ಸ್ಪರ್ಧಿಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದು ಆಗಿತ್ತು. ಎರಡ್ಮೂರು ದಿನ ಕಳೆದಂತೆ ಎಲ್ಲವೂ ಮೊದಲಿನಂತಾಗಿ ಸದಸ್ಯರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ, ಸೂಪರ್ ಸಂಡೆ ವಿತ್‌ ಕಿಚ್ಚ ಸುದೀಪ್‌ ಎಪಿಸೋಡ್‌ನಲ್ಲಿ ಮಾತ್ರ ಬಿಗ್ ಬಾಸ್ ಮನೆ ಅಕ್ಷರಶಃ ರಣರಂಗವಾಯ್ತು. ಚಕ್ರವರ್ತಿ ಚಂದ್ರಚೂಡ್ ತಮ್ಮೊಳಗೆ ಅಡಗಿಸಿಟ್ಟಿದ್ದ ಸಿಟ್ಟನ್ನು ಒಮ್ಮೆಲೆ ಹೊರಹಾಕಿದರು!

ಕಿಚ್ಚನ ಜೊತೆ ಮಾತನಾಡುತ್ತಿದ್ದ ಸ್ಪರ್ಧಿಗಳಲ್ಲಿ ಮೊದಲಿಗೆ ಚಕ್ರವರ್ತಿ ಹಾಗೂ ಪ್ರಶಾಂತ್​ ಸಂಬರಗಿ ಅವರು ಎಂದಿನಂತೆ ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಅವರ ನಡುವಿನ ಬಾಂಡಿಂಗ್​ ಬಗ್ಗೆ ಬೆರಳು ಮಾಡಿದರು. ಇದೇ ವಿಷಯವಾಗಿ ಮಂಜು ಸಹ ತಮ್ಮ ಅಭಿಪ್ರಾಯ ಹಂಚಿಕೊಂಡರು. ಹೀಗಿರುವಾಗಲೇ ಚಕ್ರವರ್ತಿ ಚಂದ್ರಚೂಡ ಅವರಿಗೆ ಮಂಜು ಪಾವಗಡ ಅವರ ಬಗ್ಗೆ ಇದ್ದ ಅಸಮಾಧಾನವನ್ನು ಹೊರ ಹಾಕಲು ಒಂದು ಅವಕಾಶ ಸಿಕ್ಕಿತ್ತು. ಮಂಜು ಪಾವಗಡ ಅವರು ಬಿಗ್ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್ ಅವರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಮಾತು ಆರಂಭಿಸಿದ ಚಕ್ರವರ್ತಿ, ನಂತರದಲ್ಲಿ ತಾವು ಮಂಜು ಅವರ ಆಟವನ್ನು ಅರ್ಥ ಮಾಡಿಕೊಂಡಿದ್ದನ್ನು ವಿವರಿಸಿದರು.

ನನ್ನ ತಂದೆ ತಾಯಿ ನನಗೆ ಸರಸಕ್ಕೆ ಕರೆಯುವುದನ್ನು ಕಲಿಸಿಲ್ಲ. ಮಾವಿನ ಹಣ್ಣಿನ ಜೋಕ್‍ಗಳ ತರಹ, ಪತ್ತರವಳ್ಳಿ ಎಂಬ ಪದ ಇದೆ. ಪತ್ತರವಳ್ಳಿ ಎಂದರೆ ಕರ್ನಾಟಕದ ಡಿಕ್ಷನರಿಯಲ್ಲಿ ಆರು ಉಪಭಾಷೆಗಳಲ್ಲಿ ಬರುತ್ತದೆ. ಅದರ ಅರ್ಥ ಬೇಲಿ ಸಂದಿಯಲ್ಲಿ ನಡೆಯುವ ಕಾಮ. ಅದು ನಾನು ಹುಟ್ಟಾಕಿರುವುದಲ್ಲ, ಅವರು ಮನೆಯಲ್ಲಿ ಕರೆಯುತ್ತಿರುವ ಪದ. ಹೊರಗಡೆ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಲ್ಲೂ ಹಾಗೆಯೇ ಇರಬೇಕಾಗಿತ್ತು, ಈಗ ಸರಿಪಡಿಸಿಕೊಳ್ಳುತ್ತಿದ್ದಾರೆ ಅದನ್ನು ಮೆಚ್ಚುತ್ತೇನೆ.

ಒಂದು ಹಳ್ಳಿಯ ಹುಡುಗ ಹೇಗೆ ಹೀಗೆ ನಡೆದುಕೊಳ್ಳಲು ಸಾಧ್ಯ. ಯಾರ ಕಥೆಗಳನ್ನು ಕೇಳುವುದಿಲ್ಲ, ಯಾರ ಪ್ರತಿಭೆಗಳನ್ನು ಕೇಳುವುದಿಲ್ಲ, ಯಾರ ಮಾತನ್ನು ಕೇಳುವುದಿಲ್ಲ. ತನ್ನದೇ ತೃತೀಯ ದರ್ಜೆಗಳ ಜೋಕ್‍ಗಳನ್ನು ನಾವು ಕೇಳಬೇಕು ಎಂದು ಹರಿಹಾಯ್ದಿದ್ದಾರೆ.

ನೀನು ಹೇಗೆ ಬಂದೆ ಎಂಬುದು ಗೊತ್ತಿದೆ:
ಚಂದ್ರಚೂಡ್ ಆರೋಪಕ್ಕೆ ಉತ್ತರಿಸಿದ ಮಂಜು, ಅದು ತಮಾಷೆ ಎಂದು ಎಲ್ಲರಿಗೂ ತಿಳಿದಿದೆ. ಆಗ ಚೆನ್ನಾಗಿ ನಕ್ಕು ಈಗ ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಆಗಲೇ ಹೇಳಬಹುದಿತ್ತಲ್ಲ ಎಂದು ಮರುಪ್ರಶ್ನೆ ಹಾಕಿದ್ದಾರೆ. ಹೆಣ್ಣು ಮಕ್ಕಳು ಅಂತಾ ಹೇಳ್ತೀಯಲ್ಲ, ನೀನು ಇಲ್ಲಿಗೆ ಹೇಗೆ ಬಂದೆ ಎಂಬುದು ಗೊತ್ತಿದೆ ಎಂದು ಹೇಳುವ ಮೂಲಕ ಚಂದ್ರಚೂಡ್ ಅವರ ವೈಯಕ್ತಿಕ ಜೀವನವನ್ನು ಕೆದಕಿ ಮಂಜು ಮತ್ತೆ ಪೇಚಿಗೆ ಸಿಲುಕಿದರು. ನಾನು ಹೇಗೆ ಬಂದಿರುವೆ ಹೇಳು ಎಂದು ಚಂದ್ರಚೂಡ್, ಮಂಜು ವಿರುದ್ಧ ಮತ್ತೆ ಸೆಟೆದು ನಿಂತರು. ಇದಕ್ಕೆ ಮಂಜು ಬಳಿ ಉತ್ತರವೇ ಇರಲಿಲ್ಲ. ಇದಕ್ಕೆ ಉತ್ತರಿಸಿದ ಸುದೀಪ್, ನೀವು ಏನಾದರು ಹೇಳಿದರೆ ಅದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ತಿಳಿ ಹೇಳಿದರು.

ನನಗೆ ಎರಡು ವಿಚ್ಛೇದನ ಆಗಿದೆ:
ಮಂಜು ಮಾತಿಗೆ ಮತ್ತೆ ಎಗರಾಡಿದ ಚಂದ್ರಚೂಡ್ ನನಗೆ ಎರಡು ವಿಚ್ಛೇದನ ಆಗಿದೆ. ಭಾರತೀಯ ಸಂವಿಧಾನದ ಮೂಲಕ ವಿಚ್ಛೇದನ ಪಡೆದಿದ್ದೇನೆ. ಮಂಜು ಸಂವಿಧಾನಕ್ಕಿಂತ ದೊಡ್ಡವನಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾನೆ ಎಂದು ಕಿರುಚಾಡಿದರು.

ನನ್ನ ಜೀವನವನ್ನು ಈ ಮನುಷ್ಯ ಏನು ನೋಡಿದಾನೆ? ನನಗೆ ಎರಡು ಡಿವೋರ್ಸ್​ ಆಗಿದೆ. 11 ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀನಿ. ಒಬ್ಬರು ಖ್ಯಾತ ನಟಿಗೆ (ಶ್ರುತಿ) ಡಿವೋರ್ಸ್​​ ನೀಡಿದ್ದೇನೆ. ಅವರು ‘ಮಜಾ ಭಾರತ’ದಲ್ಲಿ ಇದ್ದರು. ಭಾರತದ ಸಂವಿಧಾನದ ಪ್ರಕಾರ ವಿಚ್ಛೇದನ ಪಡೆದಿದ್ದೇನೆ. ನಾನು ನಾಟಕ ಮಾಡಿ ಡಿವೋರ್ಸ್​ ಪಡೆದಿಲ್ಲ. ಇದಕ್ಕೆ ನಾನು ಬೇರೆ ಬೇರೆ ಕಡೆ ಉತ್ತರ ಕೊಡುತ್ತೇನೆ’ ಎಂದು ಚಕ್ರವರ್ತಿ ಕೂಗಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top