fbpx
ಸಮಾಚಾರ

ಭೇಟಿಯಾಗಲು ಬಂದು ಪರದಾಡಿದ್ದ ಅಭಿಮಾನಿಗೊಂದು ಪ್ರೀತಿಯ ಸಂದೇಶ ಕೊಟ್ಟ ರಶ್ಮಿಕಾ ಮಂದಣ್ಣ..!

ತೆಲಂಗಾಣದಿಂದ ವಿರಾಜಪೇಟೆಗೆ ಬಂದು ನೆಚ್ಚಿನ ನಟಿ ರಶ್ಮಿಕಾರನ್ನು ಭೇಟಿಯಾಗಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಪರದಾಡಿದ್ದ ಅಭಿಮಾನಿಯ ವಿಷಯ ಗೊತ್ತೇ ಇದೆ. ಈಗ ಈ ಅಭಿಮಾನಿಗಾಗಿಯೇ ರಶ್ಮಿಕಾ ಒಂದು ಟ್ವೀಟ್ ಮಾಡಿದ್ದು, ಪ್ರೀತಿಯ ಸಂದೇಶ ನೀಡಿದ್ದಾರೆ.

 

 

ಕಳೆದ ವಾರ ತೆಲಂಗಾಣ ಮೂಲದ ಆಕಾಶ್ ತ್ರಿಪಾಠಿ ಎಂಬವರು ವಿರಾಜಪೇಟೆಗೆ ಬಂದು ಪೇಚಿಗೆ ಸಿಲುಕಿಕೊಂಡಿದ್ದರು. ಸದ್ಯ ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ತಮ್ಮ ಅಭಿಮಾನಿಗಳಿಗೆ ಟ್ವೀಟ್ ಮೂಲಕ ಸಂದೇಶ ಕಳುಹಿಸಿದ್ದಾರೆ.

ಅಭಿಮಾನಿಗಳಲ್ಲಿ ಒಬ್ಬರು ನನ್ನನ್ನು ಭೇಟಿಯಾಗಲು ವಿರಾಜಪೇಟೆಯಲ್ಲಿರುವ ನನ್ನ ಮನೆವರೆಗೂ ಹೋಗಿರುವ ವಿಷಯ ತಿಳಿಯಿತು. ದಯವಿಟ್ಟು ಈ ರೀತಿ ಮಾಡಬೇಡಿ. ನಿಮ್ಮನ್ನು ಭೇಟಿಯಾಗದಿದ್ದಕ್ಕೆ ನನಗೂ ಬೇಸರವಿದೆ. ಒಂದು ದಿನ ಖಂಡಿತಾ ನಿಮ್ಮನ್ನು ಭೇಟಿಯಾಗುತ್ತೇನೆ. ನಿಮ್ಮ ಈ ಪ್ರೀತಿ ಕಂಡು ನಾನು ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top