fbpx
ಸಮಾಚಾರ

“ನನ್ನ ಬಯೋಪಿಕ್ ಸಿನಿಮಾಗೆ ಈ ನಟರು ಮಾತ್ರ ಜೀವ ತುಂಬಬಲ್ಲರು” ಸುರೇಶ್ ರೈನಾ

ಇತ್ತೀಚಿಗಂತೂ ಸಿನಿಮಾ ರಂಗದಲ್ಲಿ ಕೇವಲ ಬಯೋಪಿಕ್ ಗಳದೇ ಕಾರುಬಾರು. ಹೌದು, ಒಂದಾದಮೇಲೆ ಒಂದರಂತೆ ಶ್ರೇಷ್ಠ ಸಾಧನೆಗೈದ ವ್ಯಕ್ತಿಗಳ ಜೀವನ ಚಿತ್ರವನ್ನು ತೆರೆಯೇ ಮೇಲೆ ತರುವ ಪ್ರಯತ್ನ ಎಲ್ಲಾ ಚಿತ್ರರಂಗದಲ್ಲೂ ಭರದಿಂದ ಸಾಗುತ್ತಿದೆ. ಕಪಿಲ್ ದೇವ್, ಸಚಿನ್, ಧೋನಿಯಿಂದ ಹಿಡಿದು ಮೊನ್ನೆಯ ಮಿಥಾಲಿ ರಾಜ್ ಅವರೆಗೂ ಖ್ಯಾತ ಕ್ರಿಕೆಟಿಗರ ಬಯೋಪಿಕ್ ಚಿತ್ರಗಳು ಬಂದಿವೆ.

 

 

ಈಗ ಸುರೇಶ್ ರೈನಾ ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲಿದೆ. ರೈನಾ ಬಯೋಪಿಕ್‌ ಇನ್ನು ಮಾತುಕತೆಯ ಹಂತದಲ್ಲಿದೆ. ನಿರ್ದೇಶಕರು ಹಾಗೂ ನಿರ್ಮಾಣ ಸಂಸ್ಥೆಯ ಹೆಸರು ಅಂತಿಮವಾಗಿಲ್ಲ. ಸನ್‌ ಪಿಕ್ಚರ್‌ ರೈನಾ ಸಿನಿಮಾ ನಿರ್ಮಣ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಸುರೇಶ್‌ ರೈನಾ ಅವರ ಬಯೋಪಿಕ್‌ ನಿರ್ಮಾಣಕ್ಕೆ ಬಾಲಿವುಡ್‌ನಲ್ಲಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ದಕ್ಷಿಣದ ಈ ಇಬ್ಬರು ನಟರು ನನ್ನ ಬಯೋಪಿಕ್‌ಗೆ ಜೀವ ತುಂಬ ಬಲ್ಲರು ಎಂದು ರೈನಾ ಹೇಳಿದ್ದಾರೆ.

ಸ್ವತಃ ಸುರೇಶ್‍ರೈನಾ ಅವರೇ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನನ್ನ ಜೀವನ ಆಧಾರಿಸಿ ಚಿತ್ರ ನಿರ್ಮಿಸಿದರೆ ಅದರಲ್ಲಿ ನನ್ನ ಪಾತ್ರವನ್ನು ತಮಿಳಿನ ಖ್ಯಾತ ನಟ ಸೂರ್ಯ ಅಥವಾ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು ಮಾಡಬೇಕೆಂಬ ಇಂಗಿತವನ್ನು ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top