fbpx
ಸಮಾಚಾರ

ತಪ್ಪಾದ ಭಾರತದ ಭೂಪಟ ಪ್ರಕಟ: ಟ್ವಿಟ್ಟರ್‌ ಎಂಡಿ ವಿರುದ್ದ ಎಫ್‌ಐಆರ್‌

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳನ್ನು ಪ್ರತ್ಯೇಕ ದೇಶ ಎಂಬಂತೆ ಭೂಪಟ ತೋರಿಸುವ ಮೂಲಕ ವಿವಾದ ಸೃಷ್ಟಿಸಿರುವ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ಸರಕಾರದ ಜತೆಗಿನ ಟ್ವಿಟ್ಟರ್ ಸಂಘರ್ಷದ ಮಧ್ಯೆ ಉತ್ತರ ಪ್ರದೇಶದಲ್ಲಿ ಈ ತಿಂಗಳು ಸಾಮಾಜಿಕ ಮಾಧ್ಯಮದ ವಿರುದ್ಧ ದಾಖಲಾದ ಎರಡನೆಯ ಎಫ್‌ಐಆರ್ ಇದಾಗಿದೆ.

ಈ ತಪ್ಪಾದ ಭೂಪಟ ಪ್ರಕಟ ಮಾಡಿದ ಹಿನ್ನೆಲೆ ಉತ್ತರಪ್ರದೇಶದಲ್ಲಿ ಬಲಪಂಥೀಯ ಗುಂಪು ಭಜರಂಗದಳದ ನಾಯಕ ಪ್ರವೀಣ್ ಭತಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಈ ದೂರಿನಲ್ಲಿ, “ದೇಶದ್ರೋಹದ ಈ ಕೃತ್ಯವು ಉದ್ದೇಶಪೂರ್ವಕವಾಗಿ ನಡೆದಿದೆ. ಈ ಹಿನ್ನೆಲೆ ಕ್ರಮ ತೆಗೆದುಕೊಳ್ಳಬೇಕು,” ಎಂದು ಮನವಿ ಮಾಡಲಾಗಿದೆ.

ಅಂದಹಾಗೆ ಟ್ವಿಟರ್ ನಲ್ಲಿ ಪ್ರಕಟಗೊಂಡಿದ್ದ ಭೂಪಟದಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಜಮ್ಮು-ಕಾಶ್ಮೀರಗಳನ್ನು ಭಾರತದ ಹೊರ ಭಾಗದಲ್ಲಿ ಚಿತ್ರೀಕರಿಸಲಾಗಿತ್ತು. ಈ ಪ್ರಮಾದ ಸೋಮವಾರ (ಜೂ.28 ರಂದು) ಬೆಳಕಿಗೆ ಬಂದಿದ್ದು, ನೆಟಿಜನ್ ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಟ್ವಿಟರ್ ಸಂಜೆಯ ವೇಳೆಗೆ ಭೂಪಟವನ್ನು ತೆಗೆದುಹಾಕಿತ್ತು. “ವಿಶ್ವಭೂಪಟದಲ್ಲಿ ಲಡಾಖ್, ಜಮ್ಮು-ಕಾಶ್ಮೀರಗಳನ್ನು ಭಾರತದ ಒಳಗೆ ಚಿತ್ರೀಕರಿಸಲಾಗಿಲ್ಲ. ಇದು ಕಾಕತಾಳೀಯವಲ್ಲ. ಈ ನಡೆಯಿಂದ ಭಾರತೀಯರಿಗೆ ತೀವ್ರವಾದ ನೋವುಂಟಾಗಿದೆ ಎಂದು ಪಶ್ಚಿಮ ಉತ್ತರ ಪ್ರದೇಶದ ಬಜರಂಗದಳದ ಸಂಚಾಲಕ ಪ್ರವೀಣ್ ಭಾಟಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top