fbpx
ಸಮಾಚಾರ

ಜೂನ್ 30: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 30, 2021 ಬುಧವಾರ
ವರ್ಷ : 1943 ಪ್ಲಾವ
ತಿಂಗಳು : ಜ್ಯೇಷ್ಠ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಷಷ್ಠೀ 1:17 pm
ನಕ್ಷತ್ರ : ಪೂರ್ವಾ ಭಾದ್ರ 2:03 am
ಯೋಗ : ಆಯುಷ್ಮಾನ್ 11:14 am
ಕರಣ : ವಾಣಿಜ 1:17 pm ವಿಷ್ಟಿ 1:33 am

Time to be Avoided
ರಾಹುಕಾಲ : 12:23 pm – 1:59 pm
ಯಮಗಂಡ : 7:36 am – 9:12 am
ದುರ್ಮುಹುರ್ತ : 11:57 am – 12:48 pm
ವಿಷ : 7:42 am – 9:22 am
ಗುಳಿಕ : 10:47 am – 12:23 pm

Good Time to be Used
ಅಮೃತಕಾಲ : 5:42 pm – 7:22 pm

Other Data
ಸೂರ್ಯೋದಯ : 5:56 am
ಸುರ್ಯಾಸ್ತಮಯ : 6:49 pm
ರವಿರಾಶಿ : ಮಿಥುನ
ಚಂದ್ರರಾಶಿ : ಕುಂಭ upto 19:43

 

 

 

ಅಧಿಕ ಶ್ರಮಕ್ಕೆ ತಕ್ಕಷ್ಟು ಆದಾಯವೂ ಬರುವುದರಿಂದ ಹಣಕಾಸಿನ ತೊಂದರೆ ಇರುವುದಿಲ್ಲ. ಹೊಸದೇನೋ ಒಂದು ನಿಮ್ಮ ಜೀವನವನ್ನು ಪ್ರವೇಶಿಸಲಿದ್ದು, ಇದರಿಂದ ಉತ್ತಮವಾಗುವುದು. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿ.

 

ನೀವೇ ಮುಂದಾಗಿ ನಿಂತು ನಡೆಸುವ ಕೆಲಸಕ್ಕೆ ಮನಸ್ಸಿನ ಸಿದ್ಧತೆ ಬೇಕಾಗುವುದು. ಏಕಾಗ್ರತೆಯಿಂದ ಕೆಲಸವನ್ನು ಆರಂಭಿಸಿ. ಮನೋಕಾಮನೆಗಳು ಪೂರ್ಣಗೊಳ್ಳುವುದು ಆದಷ್ಟು ತಾಳ್ಮೆಯಿಂದಿರಿ.

 

ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

 

ನೇರ ಮಾತುಗಾರರಾದ ನೀವು ಇಂದು ತಮಾಷೆಗಾಗಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

 

 

ಬೆನ್ನು ನೋವು ಅಥವಾ ಮಂಡಿನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡುವುದು ಒಳ್ಳೆಯದು.

 

 

ವ್ಯರ್ಥವಾದ ಪ್ರಯತ್ನಗಳಿಂದ ಕಂಗೆಟ್ಟಿರುವ ನೀವು ಬೆಟ್ಟಿಂಗ್‌, ಜೂಜು ಇತ್ಯಾದಿಗಳಲ್ಲಿ ಹಣ ಹೂಡುವುದು ತರವಲ್ಲ. ಹಣವನ್ನು ಆದಷ್ಟು ಕಡಿಮೆ ಖರ್ಚು ಮಾಡುವುದು ಒಳ್ಳೆಯದು.

 

 

ದೂರದ ಜನರಿಂದ ಮಾತ್ರ ನಿಮಗೆ ಕಿರಿಕಿರಿಗಳು ಉಂಟಾಗುವುದಿಲ್ಲ. ನಿಮ್ಮ ಹತ್ತಿರದವರೂ ನಿಮ್ಮ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಮಾಡುವುದರಿಂದ ಮನಸ್ಸಿಗೆ ಘಾಸಿಯಾಗುವುದು. ಇದಕ್ಕೆ ನೊಂದುಕೊಳ್ಳದೆ ಭಗವಂತನನ್ನು ಅನನ್ಯತೆಯಿಂದ ಪ್ರಾರ್ಥಿಸಿ.

 

 

ವಿನಾಕಾರಣ ನಿಮ್ಮ ಮೇಲೆ ಜಗಳ ಕಾಯುವ ಜನ, ನಿಮ್ಮನ್ನೆ ಜಗಳಗಂಟ ಎಂದು ದೂರುವ ಸಾಧ್ಯತೆ ಇದೆ. ಆದಷ್ಟು ಯಾರ ಜತೆಯಲ್ಲಿಯೂ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳದಿರಿ. ಕುಲದೇವರನ್ನು ಮನಸಾ ಸ್ಮರಿಸಿ.

 

ಶಾಂತವಾಗಿ ಆರಂಭವಾಗುವ ಈ ದಿನ ಸಂಜೆಯ ವೇಳೆಗೆ ಉದ್ವಿಗ್ನಗೊಳ್ಳುವ ಸಾಧ್ಯತೆ ಇರುವುದು. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ.

 

 

ನಿಮ್ಮ ಮಾನಸಿಕ ಒತ್ತಡವನ್ನು ಕಳೆದುಕೊಳ್ಳಲು ಚಿಕ್ಕಮಕ್ಕಳೊಂದಿಗೆ ಕಾಲ ಕಳೆಯುವಿರಿ. ಇದರಿಂದ ಮನಸ್ಸಿನ ದುಗುಡತೆಗಳು ಕಡಿಮೆ ಆಗುವುದು. ಗುರುಜನರ ಆಶೀರ್ವಾದ ಪಡೆಯಿರಿ ಮತ್ತು ಕೆಲಸಗಳನ್ನು ಪೂರೈಸಿಕೊಳ್ಳಿ.

 

ನಿಮ್ಮಲ್ಲಿನ ಸಾಮಾಜಿಕ ಕಳಕಳಿಯು ಹಿರಿಯರಿಂದ ಪ್ರಶಂಸೆಗೆ ಕಾರಣವಾಗುವುದು. ದೀರ್ಘಕಾಲದ ನಂತರ ಮನಸ್ಸಿಗೆ ನೆಮ್ಮದಿ ದೊರೆಯುವುದು. ಆಂಜನೇಯ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.

 

ಪರಿಪೂರ್ಣವಾದ ಯಶಸ್ಸನ್ನು ಹೊಂದಲು ಬಂಧುಗಳು ಹಾಗೂ ಸಹಪಾಠಿಗಳು ಸಹಕರಿಸುವರು. ಗುಣವಂತರ ದರ್ಶನ ಮತ್ತು ಅವರೊಡನೆ ಒಡನಾಟವು ವೃದ್ಧಿಸುವುದು. ಇದರಿಂದ ಸಾಮಾಜಿಕ ಪ್ರತಿಷ್ಟೆ ಹೆಚ್ಚಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top