fbpx
ಸಮಾಚಾರ

ಬಹುನಿರೀಕ್ಷಿತ ‘ವಿಕ್ರಾಂತ್‌ ರೋಣ’ ಡಬ್ಬಿಂಗ್ ಮುಗಿಸಿದ ಸುದೀಪ್ ಹೇಳಿದ್ದೇನು ಗೊತ್ತಾ?

ನಾನಾ ಕಾರಣಗಳಿಂದ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲ್ಸಗಳು ಬರದಿಂದ ಸಾಗುತ್ತಿಸಾಗುತ್ತಿದ್ದು ಸದ್ಯ ಪಾತ್ರವರ್ಗಗಳ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.

ಇದೀಗ ಚಿತ್ರಕ್ಕೆ ನಟ ಸುದೀಪ್ ಡಬ್ಬಿಂಗ್ ಮುಗಿಸಿದ್ದಾರೆ. ಈ ವಿಚಾರವನ್ನು ಸ್ವತಃ ಸುದೀಪ್ ಅವರೇ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಸುದೀಪ್ ಟ್ವೀಟ್:
‘ವಿಕ್ರಾಂತ್​ ರೋಣ ಚಿತ್ರಕ್ಕಾಗಿ ನಾನು ಧ್ವನಿ ನೀಡುವ ಕೆಲಸ ಪೂರ್ಣಗೊಳಿಸಿದ್ದೇನೆ. ಇದೊಂದು ಅದ್ಭುತ ಅನುಭವ. ಹೊಸ ಬಗೆಯಲ್ಲಿ ಪಾತ್ರವನ್ನು ಕಟ್ಟಿಕೊಡುತ್ತಿದ್ದೇವೆ. 3ಡಿ ವರ್ಷನ್​ನ ಕೆಲವು ಸ್ಯಾಂಪಲ್​ಗಳನ್ನು ನೋಡಿದೆ. ವಿಕ್ರಾಂತ್​ ರೋಣನ ಪ್ರಪಂಚಕ್ಕೆ ಜೀವ ಬರುವುದನ್ನು ನೋಡಿ ಥ್ರಿಲ್​ ಆಗುತ್ತದೆ. ಹಾಡುಗಳ ಶೂಟಿಂಗ್​ಗಾಗಿ ಎದುರು ನೋಡುತ್ತಿದ್ದೇನೆ’ ಎಂದು ಕಿಚ್ಚ ಹೇಳಿದ್ದಾರೆ.

ಅಂದಹಾಗೆ ಅನೂಪ್ ಭಂಡಾರಿ ನಿರ್ದೇಶನದ, ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಚಿತ್ರದಲ್ಲಿ ರವಿಶಂಕರ್ ಗೌಡ, ನೀತಾ ಅಶೋಕ್ ನಟಿಸಿದ್ದಾರೆ.ಅಜನೀಶ್​ ಲೋಕನಾಥ್​ ಸಂಗೀತ ನಿರ್ದೇಶನ, ವಿಲಿಯಮ್ ಡೇವಿಡ್​ ಛಾಯಾಗ್ರಹಣ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್‌ಗೂ ಮುನ್ನ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top