fbpx
ಸಮಾಚಾರ

‘ಜುಲೈ 6′ ಸುದೀಪ್ ಜೀವನದಲ್ಲಿ ಎಂದೂ ಮರೆಯದ ದಿನ…ಯಾಕೆ ಗೊತ್ತಾ?

ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾರದ ದಿನ ಇದ್ದೆ ಇರುತ್ತದೆ. ಹಾಗೆಯೆ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಜೂಲೈ 6 ಮರೆಲಾರದ ದಿನವಂತೆ. ಸುದೀಪ್ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಇವರು ತೆಲುಗು ಚಿತ್ರರಂಗದಲ್ಲಿಯೂ ಬೇಡಿಕೆಯ ನಟರಾಗಿ ಹೆಸರು ಮಾಡಿದ್ಡಾರೆ. ಜುಲೈ 6 ಏಕೆ ಸುದೀಪ್ ಗೆ ವಿಶೇಷ ದಿನ ಎಂದು ಯೋಚನೆ ಮಾಡುತ್ತಿದ್ದೀರಾ ಹಾಗಾದರೆ ಮುಂದೆ ಓದಿ.

 

 

ಕಿಚ್ಚ ಸುದೀಪ್ ತಮ್ಮ ಸಿನಿಮಾ ವೃತ್ತಿ ಜೀವನಕ್ಕೆ ಕಾಲಿಟ್ಟು ಅನೇಕ ಸಿನಿಮಾ ಮಾಡಿದ್ದಾರೆ. ಜುಲೈ 6 ಅವರ ವೃತ್ತಿ ಜೀವನಕ್ಕೆ ಹೊಸ ತಿರುವು ಕೊಟ್ಟ ಎರಡು ಚಿತ್ರಗಳು ಬಿಡುಗಡೆ ಆದ ದಿನ. ಸುದೀಪ್ ಅಭಿನಯದ ‘ಹುಚ್ಚ’ ಹಾಗು ತೆಲುಗು ಚಿತ್ರ ‘ಈಗಾ’ ಬಿಡುಗಡೆ ಆದ ದಿನ.

‘ಹುಚ್ಚ’ ಸಿನಿಮಾ ಜುಲೈ 6- 2001 ರಂದು ರಾಜ್ಯಾದ್ಯಂತ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಅಂದಿನಿಂದ ಸುದೀಪ್ ಭರವಸೆಯ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದರು. ಇನ್ನು ‘ಈಗ’ ಸಿನಿಮಾ ಕೂಡ ಜುಲೈ 6 ಕ್ಕೆ ಬಿಡುಗಡೆ ಆಯಿತು. ಈ ಸಿನಿಮಾ ನಂತರ ಸುದೀಪ್ ಬೇರೆ ಭಾಷೆಯಲ್ಲಿ ಕೂಡ ಹೆಸರು ಮಾಡಿದರು.

ಈ ಬಗ್ಗೆ ಕಿಚ್ಚ ಸುದೀಪ್ ಟ್ವಿಟ್ ಮಾಡಿದ್ದು ತಮ್ಮ ವೃತ್ತಿ ಜೀವನದಲ್ಲಿ ಹೊಸ ಬದಲಾವಣೆ ತಂದ ಈ ಎರಡು ಚಿತ್ರಗಳ ಬಗ್ಗೆ ಸ್ಮರಿಸಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಮರೆಯಲಾಗದ ಎರಡು ಸಿನಿಮಾಗಳು ಒಂದೇ ದಿನ, 11 ವರ್ಷಗಳ ಅಂತರದಲ್ಲಿ. ರೆಹಮಾನ್ ಮತ್ತು ಓಂ ಪ್ರಕಾಶ್, ಸಾಯಿ ಗುರು ಹಾಗೂ ರಾಜಮೌಳಿಯವರಿಗೆ ಬಹಳ ಧನ್ಯವಾದ, ಲವ್ ಯೂ ಆಲ್ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top