fbpx
ಸಮಾಚಾರ

ಹೆಣ್ಣಿನ ಬಗ್ಗೆ ಹೇಗೆ ಮಾತನಾಡಬೇಕು ಎಂಬುದನ್ನು ಮಾಜಿ ಸಿಎಂ ಕಲಿಯಬೇಕು: HDK ವಿರುದ್ಧ ಸುಮಲತಾ ಆಕ್ರೋಶ

ಮಾಜಿ ಸಿಎಂ ಆದವರು ಹೇಗೆ ಮಾತಾಡಬೇಕು ಅಂತ ಗೊತ್ತಿಲ್ಲವಾ. ಸಂಸದರು ಅನ್ನೋದು ಬಿಡು ಒಂದು ಹೆಣ್ಣಿನ ಬಗ್ಗೆ ಹೇಗೆ ಮಾತಾಡಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಎಚ್‌ಡಿಕೆ ಅವರ ಮಾತುಗಳಿಂದ ಅವರ ಸಂಸ್ಕಾರ ಗೊತ್ತಾಗ್ತಿದೆ. ಅವರ ವ್ಯಕ್ತಿತ್ವ ಎಂತದ್ದು ಅನ್ನುವುದನ್ನು ಬಿಚ್ಚಿಟ್ಟುಕೊಳ್ತಿದ್ದಾರೆ. ಕೆಆರ್ ಎಸ್ ಬಗ್ಗೆ ನಾನು ಕಾಳಜಿ ವಹಿಸ್ತಿದ್ದೇನೆ, ಇವರಿಗೆ ಯಾಕೆ ಸಮಸ್ಯೆ ಆಗ್ತಿದೆ. ಮಂಡ್ಯದಲ್ಲಿ ಏನೇನು ನಡೆಯುತ್ತಿದೆ ಎಲ್ಲ ಗೊತ್ತು ಎಂದು ಕುಮಾರಸ್ವಾಮಿ ವಿರುದ್ಧ ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆ ಬಗ್ಗೆ ಪರ್ಸನಲ್ ಟೀಕೆ ಎಷ್ಟು ಸರಿ..? ಮಾಜಿ ಸಿಎಂ ಆದವರು ಹೀಗೆ ಮಾತಾಡೋದು ಸರಿನಾ..? ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್. ಚುನಾವಣೆ ಸಮಯದಲ್ಲಿ ನಾನು ಇಂತಹ ಪದ ಬಳಿಕೆ ಮಾಡಿಲ್ಲ. ಕೆಅರ್.ಎಸ್ ಬಿರುಕು ವಿಚಾರದಲ್ಲಿ ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ನಾನು ಗಣಿ ಸಚಿವರನ್ನ ಕರೆದುಕೊಂಡು ಹೋಗಿ ತೋರಿಸಿದ್ದೇನೆ. ಆಗ 100 ಕೋಟಿ ದಂಡ ಹಾಕಿದ್ದಾರೆ. ಯಾಕೆ ಕುಮಾರಸ್ವಾಮಿ ಹೀಗೆ ಮಾತಾಡ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top