fbpx
ಸಮಾಚಾರ

ಕೊರೋನಾ ಎಫೆಕ್ಟ್: ಜೀವನ ಸಾಗಿಸಲು ರಸ್ತೆ ಬದಿ ಮೀನು ಮಾರಾಟಕ್ಕಿಳಿದ ಜನಪ್ರಿಯ ಕಿರುತೆರೆ ನಟ

ಲಾಕ್‌ಡೌನ್‌ ಎನ್ನುವುದು ಅದೆಷ್ಟೋ ಮಂದಿಯ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಅದರಲ್ಲಿಯೂ ಒಂದೇ ಉದ್ಯೋಗದ ಮೇಲೆ ಅವಲಂಬಿತರಾಗಿ ಬೇರೆ ಏನನ್ನೂ ಮಾಡುವುದು ತಿಳಿಯದವರ ಪಾಲಿಗಂತೂ ಕರೊನಾ ಅಕ್ಷರಶಃ ನರಕವನ್ನೇ ತೋರಿಸಿಬಿಟ್ಟಿದೆ.

ಅಂತೆಯೇ ಬೆಂಗಾಳಿ ಕಿರುತೆರೆ ನಟರೊಬ್ಬರು ತಮ್ಮ ಬದುಕಿನ ಬಂಡಿ ಓಡಿಸಲು ಮೀನು ಮಾರಾಟಕ್ಕಿಳಿದಿದ್ದಾರೆ. ಹೌದು. ಕಿರುತೆರೆ ಲೋಕದಲ್ಲಿ ಜನಪ್ರಿಯ ನಟನಾಗಿ ಗುರುತಿಸಿಕೊಂಡಿರುವ ಅರಿಂದರ್ ಪ್ರಮಣಿಕ್‍ಗೆ ರಸ್ತೆ ಬದಿ ಮೀನು ಮಾರಾಟ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ಬಂದೊದಗಿದೆ. ನಟನ ಈ ಸ್ಥಿತಿಗೆ ಕಲಾಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ನಟ, ನನ್ನ ತಂದೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಆಗ ನಾನು ಜನಪ್ರಿಯ ನಟನಾಗಬೇಕೆಂಬ ಕನಸು ಕಂಡಿದ್ದೆ. ಹೀಗೆ ನಟನೆಗೆ ಇಳಿದೆ. ನಾನು ನಟನೆ ಮಾಡಲು ಆರಂಭಿಸುತ್ತಿದ್ದಂತೆಯೇ ನಮ್ಮ ತಂದೆ ತರಕಾರಿ ಮಾರಾಟ ಮಾಡುವುದುನ್ನು ನಿಲ್ಲಿಸಿದ್ದರು. ಆದರೆ ಇದೀಗ ಕೊರೊನಾದಿಂದ ನನಗೂ ಕೆಲಸ ಸಿಗುತ್ತಿಲ್ಲ. ಇತ್ತ ಕುಟುಂಬವೂ ತೀವ್ರ ಸಂಕಷ್ಟಕ್ಕೀಡಾಯಿತು. ಹೀಗಾಗಿ ನನ್ನ ಕುಟುಂಬ ನೋಡಿಕೊಳ್ಳಲು ನಾನು ಮೀನು ಮರಾಟಕ್ಕೆ ಇಳಿದೆ ಎಂದು ತಿಳಿಸಿದ್ದಾರೆ.

ಇಷ್ಟು ವರ್ಷ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ಇದೀಗ ಉದ್ಯೋಗ ಇಲ್ಲದೆಯೇ ಮೀನು ವ್ಯಾಪಾರಕ್ಕೆ ಇಳಿದಿದ್ದಾರೆ. ತಮಗೆ ವ್ಯಾಪಾರದ ಗಂಧಗಾಳಿಯೂ ಇಲ್ಲ. ಆದರೂ ಜೀವನ ಬಂಡಿಯನ್ನು ಸಾಗಿಸಲು ಇದು ಅನಿವಾರ್ಯವಾಗಿದೆ ಎಂದು ನಟ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top