fbpx
ಸಮಾಚಾರ

ಕೇಂದ್ರದ ಮಾಜಿ ಸಚಿವರ ಪತ್ನಿ ದಿಲ್ಲಿಯ ನಿವಾಸದಲ್ಲಿ ಬರ್ಬರ ಹತ್ಯೆ

ದಿವಂಗತ ಮಾಜಿ ಕೇಂದ್ರ ಸಚಿವ ಕುಮಾರಮಂಗಲಮ್ ಅವರ ಪತ್ನಿಯ ಬರ್ಬರ ಕಿಟ್ಟಿ ಕುಮಾರಮಂಗಲಮ್ ಅವರನ್ನು ದುಷ್ಕರ್ಮಿಗಳು ಇಂದು ಬರ್ಬರವಾಗಿ ಕೊಲೆಗೈದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದಕ್ಷಿಣ ದೆಹಲಿಯ ವಸಂತ್ ಸಾಗರ್‌ನ ಅವರ ನಿವಾಸದಲ್ಲಿ 67 ವಯಸ್ಸಿನ ಕಿಟ್ಟಿ ಅವರ ಮೃತದೇಹ ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ತಲೆ ದಿಂಬಿನಿಂದ ಮಹಿಳೆಗೆ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ. ಕೊಲೆಯ ಹಿಂದೆ ದರೋಡೆ ಮಾಡುವ ಉದ್ಧೇಶ ಇರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ 8.30ರ ಸುಮಾರಿಗೆ ಲಾಂಡ್ರಿಮ್ಯಾನ್ ಮನೆಗೆ ಬಂದಿದ್ದನು. ನಂತರ ಮತ್ತಿಬ್ಬರು ಬಂದು ನನ್ನನ್ನು ಕಟ್ಟಿಹಾಕಿ ಕಿಟ್ಟಿ ಕುಮಾರಮಂಗಲಂ ಅವರನ್ನು ಹತ್ಯೆಗೈದಿದ್ದಾರೆ ಎಂದು ಮನೆಗೆಲಸ ವ್ಯಕ್ತಿ ಹೇಳಿದ್ದಾರೆ. ಮನೆಗೆಲಸದವರ ಹೇಳಿಕೆಯಂತೆ ಲಾಂಡ್ರಿಮ್ಯಾನ್ ನ್ನು ಪೊಲೀಸರು ಬಂಧಿಸಿದ್ದಾರೆ.

ಕಿಟ್ಟಿ ಕುಮಾರಮಂಗಲಂ ಅವರು ಸುಪ್ರೀಂಕೋರ್ಟ್ ವಕೀಲೆಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಪತಿ ಪಿ. ರಂಗರಾಜನ್ ಕುಮಾರಮಂಗಲಂ ಅವರು 1984ರಲ್ಲಿ ಮೊದಲ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. 1991-92ರ ಅವಧಿಯಲ್ಲಿ ರಾಜ್ಯ, ಸಂಸದೀಯ ವ್ಯವಹಾರಗಳು ಮತ್ತು ಕಾನೂನು, ನ್ಯಾಯ ಹಾಗೂ ಕಂಪೆನಿ ವ್ಯವಹಾರಗಳ ಸಚಿವರಾಗಿದ್ದರು. 1992-93ರಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರೆ, 1998ರಲ್ಲಿ ಕೇಂದ್ರ ವಿದ್ಯುತ್ ಸಚಿವರಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top