fbpx
ಸಮಾಚಾರ

“ಪ್ಲೀಸ್ ಯಾರೂ ಬೇಜಾರು ಮಾಡ್ಕೋಬೇಡಿ’’ ಶಿವಣ್ಣ ಮಹತ್ವದ ನಿರ್ಧಾರ

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ಕೊರೊನಾ ಹಾವಳಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಶಿವಣ್ಣ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿರುವ ಶಿವಣ್ಣ ತಮ್ಮ ಅಭಿಮಾನಿಗಳಲ್ಲಿ ಕೋರಿಕೆಯೊಂದನ್ನು ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ಕೊರೊನಾ ವೈರಸ್ ಕುರಿತು ಜಾಗೃತಿ ಕೂಡ ಮೂಡಿಸಿದ್ದಾರೆ.

ಶಿವಣ್ಣ ಹೇಳಿದ್ದೇನು?
ನನ್ನ ಹುಟ್ಟುಹಬ್ಬಕ್ಕಿಂತಲೂ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಕಡಿಮೆ ಆಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕು’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

‘ಜು.12 ನಾನು ಹುಟ್ಟಿದ ದಿನ. ಕೆಲವು ಕಾರಣದಿಂದ ನಾನು ಬೆಂಗಳೂರಲ್ಲಿ ಇರುವುದಿಲ್ಲ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ನಿಮಗೆ ಎಷ್ಟು ಬೇಜಾರು ಆಗುತ್ತಿದೆಯೋ ನನಗೂ ಅಷ್ಟೇ ಬೇಜಾರಾಗುತ್ತಿದೆ. ನಿಮ್ಮ ಶುಭಾಶಯಗಳನ್ನು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿ. ಯಾಕೆಂದರೆ, ನಿಮ್ಮೆಲ್ಲರ ಹಾರೈಕೆ, ಪ್ರೀತಿ, ಪ್ರೋತ್ಸಾಹ ನನಗೆ ಯಾವಾಗಲೂ ಇರಬೇಕು. ಅದನ್ನೇ ನಾನು ಬಯಸೋದು’ ಎಂದು ‘ಹ್ಯಾಟ್ರಿಕ್​ ಹೀರೋ’ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top