fbpx
ಸಮಾಚಾರ

‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದ ಜಾಕ್ವೆಲಿನ್: ಎಷ್ಟು ಗೊತ್ತಾ?

ನಾನಾ ಕಾರಣಗಳಿಂದ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾದ ಪ್ರತಿಯೊಂದು ವಿಚಾರಗಳು ಸಿನಿಪ್ರೇಮಿಗಳ ತಲೆ ಕೆಡಿಸುತ್ತಿದೆ. ಸದ್ಯ ಒಂದು ಹಾಡಿನ ಚಿತ್ರೀಕರಣವನ್ನು ಬಿಟ್ಟು ಎಲ್ಲಾ ಶೂಟಿಂಗ್ ಮುಗಿಸಿರುವ ಚಿತ್ರತಂಡ ಆ ಹಾಡಿನ ಶೂಟಿಂಗ್ ಗೆ ಸಜ್ಜಾಗಿದೆ.

ಜುಲೈ 10 ರಿಂದ ಪುನಃ ಪ್ರಾರಂಭವಾಗುತ್ತಿದ್ದು, ಹಾಡುಗಳ ಚಿತ್ರೀಕರಣವಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ಸಿನಿಮಾದ ವಿಶೇಷ ಹಾಡಿಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಕರೆತರಲಾಗುತ್ತಿದ್ದು, ಐದು ನಿಮಿಷದ ಹಾಡಿಗಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಜಾಕ್ವೆಲಿನ್‌ಗೆ ಸಹ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತಿದೆ.

ಕೋತಿ ಸಂಭಾವನೆ:
ಹಲವು ವಿಶೇಷಗಳೊಂದಿಗೆ ಮೂಡಿಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದಕ್ಕೆ ಇದೇ ಮೊದಲ ಬಾರಿಗೆ ಬಾಲಿವುಡ್‍ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಡೀಸ್ ನೃತ್ಯ ಮಾಡಲಿದ್ದಾರೆ. ಸಿನಿಮಾದಲ್ಲಿ ಬರುವ ಕೇವಲ 5 ನಿಮಿಷದ ಹಾಡಿಗೆ ಡ್ಯಾನ್ಸ್ ಮಾಡಲು ಗ್ರೀನ್ ಸಿಗ್ನಲ್ ನೀಡುವ ಜಾಕ್ವೆಲಿನ್, ಇದಕ್ಕಾಗಿ ಬರೋಬ್ಬರಿ 1 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂದ್ಹಾಗೆ ವಿಕ್ರಾಂತ್​ ರೋಣ ಸಿನಿಮಾದ ಐಟಂ ಸಾಂಗ್​ ಶೂಟಿಂಗ್​, ಇದೇ ಜುಲೈ 10ಕ್ಕೆ​ ಬೆಂಗಳೂರಿನ ಮೋಹನ್​ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯಲಿದ್ದು, ಇದಕ್ಕಾಗಿ ದೊಡ್ಡ ದೊಡ್ಡ ಸೆಟ್​ಗಳು ಹಾಗೂ ಇದಕ್ಕೆ ತಕ್ಕಂತೆ ಕಲರ್​ಫುಲ್​ ಲೈಟ್​ಗಳನ್ನ ನಿರ್ಮಿಸಲಿದ್ದಾರಂತೆ. ಇನ್ನು​​ ಬೇರೆ ಬೇರೆ ಭಾಷೆಗಳಲ್ಲಿ ಸ್ಟಾರ್​​ ಹೀರೋಗಳನ್ನ ಕುಣಿಸಿರುವಂತಹ ಫೇಮಸ್​ ಕೊರಿಯೋಗ್ರಾಫರ್​​ ಜಾನಿ ಮಾಸ್ಟರ್​ ಸಾರಥ್ಯದಲ್ಲಿ ಈ ಸಾಂಗ್​ ಚಿತ್ರೀಕರಣವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top