fbpx
ಸಮಾಚಾರ

ವಿಡಿಯೋ ಕಾಲ್ ಮೂಲಕ ಜೂ.ಚಿರುಗೆ ಆಂಜನೇಯ ದೇವಾಲಯದ ದರ್ಶನ ಮಾಡಿಸಿದ ಅರ್ಜುನ್ ಸರ್ಜಾ

ನಟ ಅರ್ಜುನ್ ಸರ್ಜಾ ಚೆನ್ನೈನಲ್ಲಿ ಆಂಜನೇಯನ ದೇವಾಲಯವನ್ನು ನಿರ್ಮಿಸಿದ್ದಾರೆ. ಮೊನ್ನೆಮೊನ್ನೆಯಷ್ಟೇ ಆಂಜನೇಯನ ದೇಗುಲವನ್ನು ಲೋಕಾರ್ಪಣೆ ಮಾಡಲಾಯಿತು. ಜುಲೈ 1 ರಂದು ಕುಂಭಾಭಿಷೇಕ ಕಾರ್ಯಕ್ರಮ, ಪೂಜೆ, ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆಂಜನೇಯ ದೇವಸ್ಥಾನದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು.

ಆಂಜನೇಯ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ್ ಸರ್ಜಾ, ಪುತ್ರಿ ಐಶ್ವರ್ಯ ಸರ್ಜಾ, ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಸೇರಿದಂತೆ ಇಡೀ ಸರ್ಜಾ ಕುಟುಂಬ ಭಾಗವಹಿಸಿತ್ತು. ಆದರೆ ನಟಿ ಮೆಘನಾ ರಾಜ್ ಹಾಗೂ ಅವರ 8 ತಿಂಗಳ ಮಗ ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ಕೊರೊನಾ ಮಹಾಮಾರಿಯಿಂದಾಗಿ ಅವರು ಆಂಜನೇಯನ ದೇವಸ್ಥಾನದ ಉದ್ಘಾಟನೆಗೂ ತೆರಳಿಲ್ಲ.

ಹೀಗಾಗಿ ಅರ್ಜುನ್ ಸರ್ಜಾ ಅವರು ತಾಯಿ- ಮಗನಿಗೆ ವೀಡಿಯೋ ಕಾಲ್ ನಲ್ಲೇ ದೇವರ ದರ್ಶನ ಮಾಡಿಸಿದ್ದಾರೆ. ಬುಧವಾರ ಅರ್ಜುನ್ ಸರ್ಜಾ ಅವರು ಮೇಘನಾರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಅಮ್ಮ-ಮಗನಿಗೆ ತಾವು ಕಟ್ಟಿಸಿರುವ ಆಂಜನೇಯನ ದರ್ಶನ ಮಾಡಿಸಿದ್ದಾರೆ. ಇದರ ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಅರ್ಜುನ್ ಸರ್ಜಾ ನಂತರ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ಕುಂಬಾಭಿಷೇಕಕ್ಕೆ ಬರಲು ಸಾಧ್ಯವಾಗದ ಕಾರಣ ಚಿರು ಮಗನಿಗೆ ದೇವಾಲಯವನ್ನು ತೋರಿಸಿರುವುದಾಗಿ ಫೋಟೋ ಮೇಲೆ ಬರೆದುಕೊಂಡಿದ್ದಾರೆ. ಇದನ್ನು ಅರ್ಜುನ್ ಸರ್ಜಾ ಅವರ ಮಗಳು, ನಟಿ ಐಶ್ವರ್ಯಾ ಅರ್ಜುನ್ ಕೂಡ ತಮ್ಮ ಇನ್‍ಸ್ಟಾ ಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top