fbpx
ಸಮಾಚಾರ

“ಮಹಿಳೆಯರ ವಿಚಾರ ಮಾತನಾಡುವಾಗ ಭಾಷೆಯ ಮೇಲೆ ಹಿಡಿತವಿರಲಿ” ಕುಮಾರಸ್ವಾಮಿ ಹೇಳಿಕೆಗೆ ವೈಎಸ್ ವಿ ದತ್ತಾ ಆಕ್ಷೇಪ

ಕೆ ಆರ್ ಎಸ್ ಡ್ಯಾಂಗೆ ಸಂಸದೆ ಸುಮಲತಾ ಅವರನ್ನು ಅಡ್ಡಡ್ಡ ಮಲಗಿಸಬೇಕೆಂಬ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಜೆಡಿಎಸ್ ಮುಖಂಡ ವೈ.ಸಿ.ವಿ.ದತ್ತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ವೈಎಸ್‌ವಿ ದತ್ತಾ, ಕನ್ನಡ ಶ್ರೀಮಂತ ಭಾಷೆ. ಕನ್ನಡದಲ್ಲಿ ಸಾಕಷ್ಟು ಪದಗಳು ಇವೆ. ಒಳ್ಳೊಳ್ಳೆ ಪದಗಳನ್ನು ಬಳಸಿ ರಾಜಕಾರಣದಲ್ಲಿ ಟೀಕೆ ಮಾಡಲು ಅವಕಾಶವಿದೆ ಎಂದರು.

ಸಂಸದೆ ಸುಮಲತಾ ಅಂಬರೀಷ್ ಕುರಿತಾಗಿ ಎಚ್ ಡಿ ಕುಮಾರಸ್ವಾಮಿ ನೀಡಿದ್ದ ಅಸೂಕ್ಷ್ಮ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ರೀತಿಯ ಹೇಳಿಕೆಗೆ ನನ್ನ ಆಕ್ಷೇಪಗಳಿವೆ. ಇತ್ತೀಚೆಗೆ ಎಲ್ಲ ರಾಜಕಾರಣಿಗಳು ಇದೇ ತರಹ ಹೇಳಿಕೆಗಳನ್ನು ನೀಡುವುದು ಸರಿಕಾಣುವುದಿಲ್ಲ. ಉತ್ತಮ ಭಾಷಾ ಪ್ರಯೋಗದಿಂದ ಎಲ್ಲ ರಾಜಕಾರಣಿಗಳು ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top