fbpx
ಸಮಾಚಾರ

ಕನ್ನಡದ ‘ವಿಕ್ರಾಂತ್ ರೋಣ’ ಪೋಸ್ಟರ್ ಗಳನ್ನ ಕಾಪಿ ಮಾಡಿತೇ ಈ ಬಾಲಿವುಡ್ ಸಿನಿಮಾ?

ಬಾಲಿವುಡ್ ನಲ್ಲಿ ಮುಂಚಿನ ರೀತಿ ಈಗ ಸದಭಿರುಚಿ ಸಿನಿಮಾಗಳು ಬರುತ್ತಿಲ್ಲ. ಇತ್ತೀಚಿಗೆ ರೀಮೇಕ್ ಸಿನಿಮಾಗಳನ್ನೇ ಹೆಚ್ಚು ಮಾಡುವ ಬಾಲಿವುಡ್ ಮಂದಿ ಹಡಗಳನ್ನು ಕೂಡ ಹಳೆ ಹಾಡುಗಳನ್ನೇ ರೀಮಿಕ್ಸ್ ಮಾಡಿ ಪ್ರೇಕ್ಷಕರ ಬಳಿ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಕ್ರಿಯೇಟಿವಿಟಿಯನ್ನೇ ಹೊಂದಿಲ್ಲದ ಬಾಲಿವುಡ್ ಸಿನಿ ತಯಾರಕರು ಈಗ ಪೋಸ್ಟರ್ ಅನ್ನು ಕೂಡ ಕಾಪಿ ಮಾಡಿದ್ದಾರಾ ಎಂಬ ಅನುಮಾನ ಮೂಡಲಾರಂಭಿಸಿದೆ.

ಈ ಅನುಮಾನ ಮೂಡಲು ಕಾರಣ ಅರ್ಜುನ್ ಕಪೂರ್ ಮತ್ತು ಸೈಫ್ ಅಲಿ ಖಾನ್ ನಟನೆಯಲ್ಲಿ ಮೂಡಿ ಬರುತ್ತಿರುವ ‘ಭೂತ್ ಪೊಲೀಸ್’ ಸಿನಿಮಾದ ಪೋಸ್ಟರ್ ಗಳು. ನೆನ್ನೆ ಈ ಚಿತ್ರದ ಪೋಸ್ಟರ್ ಗಳು ರಿಲೀಸ್ ಆಗಿದ್ದು ನೋಡಲು ಥೇಟ್ ಕನ್ನಡದ ‘ವಿಕ್ರಾಂತ್ ರೋಣ’ ಸಿನಿಮಾದ ಪೋಸ್ಟರ್ ಗಳನ್ನೇ ಹೋಲುತ್ತವೇ.

 

 

ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ಮತ್ತು ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವಿಕ್ರಾಂತ್ ರೋಣ’ ಚಿತ್ರದ ಪೋಸ್ಟರ್ ಬಿಡುಗಡೆಯಾದಾಗ ದೇಶಾದ್ಯಂತ ಸದ್ದು ಮಾಡಿತ್ತು. ಕೇವಲ ಕನ್ನಡ ಪ್ರೇಕ್ಷಕರು ಮಾತ್ರವಲ್ಲದೆ ಪರ ಭಾಷಾ ಸಿನಿ ಪ್ರಿಯರು ಕೂಡ ವಿಕ್ರಾಂತ್ ರೋಣ ಚಿತ್ರದ ಕ್ರಿಯೇಟಿವ್ ಪೋಸ್ಟರ್ ಅನ್ನು ಮೆಚ್ಚಿಕೊಂಡಿದ್ದರು.

ಕಳೆದ ವರ್ಷ ವಿಕ್ರಾಂತ್ ರೋಣ ಸಿನಿಮಾ ತಂಡ ರಿಲೀಸ್ ಮಾಡಿದ್ದ ಪೋಸ್ಟರ್ ಗಳನ್ನೇ ಹೋಲುವ ರೀತಿ ‘ಭೂತ್ ಪೊಲೀಸ್’ ಚಿತ್ರತಂಡ ಪೋಸ್ಟರ್ ಗಳನ್ನ ಡಿಸೈನ್ ಮಾಡಿಸಿದೆ ಎಂದು ಸಿನಿಪ್ರಿಯರು ಆರೋಪಿಸುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳಂತೂ ‘ಭೂತ್ ಪೊಲೀಸ್’ ಚಿತ್ರತಂಡದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top